ಕೊಲಂಬೊ (ಶ್ರೀಲಂಕಾ): ಇಂಡೋ - ಪಾಕ್ ರೋಚಕ ಕದನಕ್ಕೆ ಯಾಕೋ ಮಳೆ ಆಗಾಗ ಕಾಡುತ್ತಿದೆ. ಮೀಸಲು ದಿನದ ಪಂದ್ಯದುದ್ದಕ್ಕೂ ವರುಣ ಅಡ್ಡಿ ಪಡಿಸಿ ಮ್ಯಾಚ್ 1 ಗಂಟೆ ತಡವಾಗಿ ಆರಂಭವಾಗಿತ್ತು. ನಂತರ ಭಾರತ ಮೊದಲ ಇನ್ನಿಂಗ್ಸ್ ಅನ್ನು ಸುಸೂತ್ರವಾಗಿ ಆಡಿತು. ರಾಹುಲ್ ಮತ್ತು ಕೊಹ್ಲಿಯ ಶತಕದ ನೆರವಿನಿಂದ ಭಾರತ 357 ರನ್ಗಳ ಬೃಹತ್ ಗುರಿಯನ್ನು ಪಾಕ್ಗೆ ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 32 ಓವರ್ಗೆ 8 ವಿಕೆಟ್ನಷ್ಟಕ್ಕೆ 128 ರನ್ ಗಳಿಸಿತು. ಇಬ್ಬರು ಆಟಗಾರರು ಗಾಯದಿಂದ ಅಲಭ್ಯ ಆಗಿರುವ ಕಾರಣ ಭಾರತ 228 ರನ್ ಬೃಹತ್ ಜಯ ದಾಖಲಿಸಿತು.
11 ನೇ ಓವರ್ ವೇಳೆ ಮಳೆ ಬಂದು ಸುಮಾರು ಅರ್ಧಗಂಟೆಗಳ ಕಾಲ ಸ್ಥಗಿತಗೊಂಡ ನಂತರ ಪಂದ್ಯ ಮತ್ತೆ ಆರಂಭಯಿತು. ಆದರೆ ಪಾಕಿಸ್ತಾನದ ಬ್ಯಾಟರ್ಗಳು ಪಿಚ್ನಲ್ಲಿ ಗಟ್ಟಿಯಾಗಿ ನೆಲೆನಿಲ್ಲುವಲ್ಲಿ ವಿಫಲತೆ ಎದುರಿಸಿದರು. ಭಾರತ ಬೌಲರ್ಗಳು ಪಾಕ್ ಬ್ಯಾಟರ್ಗಳಿಗೆ ರನ್ ಗಳಿಸದಂತೆ ಕಡಿವಾಣ ಹಾಕಿದ್ದಲ್ಲದೇ ವಿಕೆಟ್ನ್ನು ಯಶಸ್ವಿಯಾಗಿ ಪಡೆದರು.
ಹೆಚ್ಚು ಕಡಿಮೆ ವರ್ಷಗಳ ನಂತರ ಏಕದಿನ ಕ್ರಿಕೆಟ್ನಲ್ಲಿ ಬೌಲಿಂಗ್ ಮಾಡುತ್ತಿರುವ ಜಸ್ಪ್ರೀತ್ ಬುಮ್ರಾ ಉತ್ತಮ ಕಮ್ಬ್ಯಾಕ್ ಮಾಡಿದರು. ಬುಮ್ರಾ ತಮ್ಮ ಮೂರನೇ ಓವರ್ನಲ್ಲಿ ಇಮಾನ್ ಉಲ್ ಹಕ್ ವಿಕೆಟ್ ಪಡೆದರು. ಈ ಮೂಲಕ ಗಾಯದಿಂದ ಮರಳಿದ ನಂತರ ಏಕದಿನ ಕ್ರಿಕೆಟ್ನಲ್ಲಿ ಪ್ರಥಮ ವಿಕೆಟ್ ಪಡೆದರು. ಅವರ ಪ್ರಬಾವಿ ಸ್ವಿಂಗ್ಗೆ ಪಾಕ್ ಬ್ಯಾಟರ್ಗಳು ರನ್ ಗಳಿಸಲೇ ಇಲ್ಲ.
-
Largest margin of victory for 🇮🇳 against Pakistan in men's ODIs ✅
— ICC (@ICC) September 11, 2023 " class="align-text-top noRightClick twitterSection" data="
A terrific result for India 👏#AsiaCup2023 | #PAKvIND | https://t.co/lVQWhUIzlk pic.twitter.com/V7XGWldfyt
">Largest margin of victory for 🇮🇳 against Pakistan in men's ODIs ✅
— ICC (@ICC) September 11, 2023
A terrific result for India 👏#AsiaCup2023 | #PAKvIND | https://t.co/lVQWhUIzlk pic.twitter.com/V7XGWldfytLargest margin of victory for 🇮🇳 against Pakistan in men's ODIs ✅
— ICC (@ICC) September 11, 2023
A terrific result for India 👏#AsiaCup2023 | #PAKvIND | https://t.co/lVQWhUIzlk pic.twitter.com/V7XGWldfyt
10 ಓವರ್ಗೆ ಕೇವಲ 44 ರನ್ ಕಲೆಹಾಕಿದತು. ಮೊದಲ ಪವರ್ ಪ್ಲೇಯಲ್ಲಿ ಭಾರತದ ಸಿರಾಜ್ ಮತ್ತು ಬುಮ್ರಾ ಮಾಡಿದ 10 ಓವರ್ನಲ್ಲಿ ಯಾವುದೇ ದೊಡ್ಡ ಹೊಡೆತಗಳು ಬರಲಿಲ್ಲ. 11ನೇ ಓವರ್ನಲ್ಲಿ ಪಾಕ್ನ ಎರಡನೇ ವಿಕೆಟ್ನ್ನು ಹಾರ್ದಿಕ್ ಪಾಂಡ್ಯ ಕಬಳಿಸಿದರು. ಇದಾದ ಬಳಿಕ ಮಳೆಯಿಂದ ಪಂದ್ಯದಲ್ಲಿ ಸಣ್ಣ ಬ್ರೇಕ್ ಉಂಟಾಯಿತು.
ಮಳೆ ಬಿಡುವು ಕೊಟ್ಟ ಬೆನ್ನಲ್ಲೇ ಶಾರ್ದೂಲ್ ಠಾಕೂರ್ ದಾಳಿಯಲ್ಲಿ ಪಾಕಿಸ್ತಾನ ತನ್ನ ಮೂರನೇ ವಿಕೆಟ್ ಕಳೆದುಕೊಂಡಿತು. ನಂತರ ಸ್ಪಿನ್ ವಿಭಾಗದ ದಾಳಿ ಆರಂಭವಾಗುತ್ತಿದ್ದಂತೆ ಕುಲದೀಪ್ ಯಾದವ್ ಪಾಕಿಸ್ತಾನದ ಮಧ್ಯಮ ಕ್ರಮಾಂಕವನ್ನು ಕುಸಿಯುವಂತೆ ಮಾಡಿದರು. ಪಾಕ್ನ ಮಧ್ಯಮ ಕ್ರಮಾಂಕದ 5 ಆಟಗಾರರನ್ನು ತಮ್ಮ ಸ್ಪಿನ್ ಮೋಡಿಯಲ್ಲೇ ಪೆವಿಲಿಯನ್ಗೆ ಅಟ್ಟಿದರು. ಭಾರತೀಯ ಬೌಲರ್ಗಳ ದಾಳಿಯ ಮುಂದೆ ಪಾಕ್ನ ಯಾವುದೇ ಬ್ಯಾಟರ್ 27 ರನ್ ದಾಟಿ ಸ್ಕೋರ್ ಮಾಡಲಿಲ್ಲ.
ಭಾರತದ ಪರ ಕುಲದೀಪ್ ಯಾದವ್ 5 ವಿಕೆಟ್ ಪಡೆದು ಮಿಂಚಿದರು. ಫಾಕರ್ ಜಮಾನ್ 27, ಅಘಾ ಅಸ್ಮಾಮ್ 23 ಮತ್ತು ಇಫ್ತಿಕರ್ ಅಹಮದ್ 23 ರನ್ ಗಳಿಸಿದ್ದು ಪಾಕ್ ಪರ ದೊಡ್ಡ ಮೊತ್ತವಾಗಿದೆ.
ಇದನ್ನೂ ಓದಿ: Asia Cup 2023: ವಿರಾಟ್, ರಾಹುಲ್ ಶತಕದಾಟ... ಪಾಕಿಸ್ತಾನಕ್ಕೆ 357 ರನ್ಗಳ ಬೃಹತ್ ಗುರಿ