ETV Bharat / sports

ಭಾರತ -ಆಫ್ಘನ್ ಪಂದ್ಯದ ನಡೆಯುವ ದುಬೈ ಕ್ರೀಡಾಂಗಣದ ಹೊರಗೆ ಬೆಂಕಿ ಅವಘಢ - ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ

ದುಬೈ ಕ್ರೀಡಾಂಗಣದ ಹೊರಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದಕ್ಕೆ ಕಾರಣ ತಿಳಿದುಬಂದಿಲ್ಲವಾದರೂ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.

fire-breakout-at-dubai-stadium
ದುಬೈ ಕ್ರೀಡಾಂಗಣದ ಹೊರಗೆ ಬೆಂಕಿ ಅವಘಢ
author img

By

Published : Sep 8, 2022, 7:13 PM IST

ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದ ಹೊರಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆತಂಕ ಉಂಟು ಮಾಡಿದೆ. ಇದೇ ಮೈದಾನದಲ್ಲಿ ಭಾರತ ಮತ್ತು ಆಫ್ಘಾನಿಸ್ತಾನ ಮಧ್ಯೆ ಇನ್ನು ಕೆಲವೇ ನಿಮಿಷಗಳಲ್ಲಿ ಪಂದ್ಯ ನಡೆಯಲಿದೆ.

ನಿನ್ನೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡ ಸೋಲು ಕಂಡ ಬಳಿಕ ಮೈದಾನಲ್ಲಿಯೇ ಉಭಯ ರಾಷ್ಟ್ರಗಳ ಅಭಿಮಾನಿಗಳ ಮಧ್ಯೆ ಹೊಡೆದಾಟವೇ ನಡೆದಿತ್ತು. ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯ ಕುರ್ಚಿಗಳನ್ನು ಕಿತ್ತು ಅಭಿಮಾನಿಗಳು ದಾಂಧಲೆ ಸೃಷ್ಟಿಸಿದ್ದರು.

ಇದಾದ ಬಳಿಕ ಪಂದ್ಯ ಮುಗಿದು ಹೊರಬಂದರೂ ಅಭಿಮಾನಿಗಳ ಮಧ್ಯೆ ಹೊಡೆದಾಟ ನಿಂತಿರಲಿಲ್ಲ. ಮೈದಾನದ ಹೊರಗೂ ಕಿತ್ತಾಡಿಕೊಂಡಿದ್ದರು. ಇದೀಗ ಮೈದಾನದ ಹೊರಗೆ ಬೆಂಕಿ ಕಾಣಿಸಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.

ಓದಿ: ICC T20 World Cup.. ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಜೊತೆ ಸೆಣಸಾಡಲಿದೆ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.