ETV Bharat / sports

BAN vs AFG: ಅಫ್ಘಾನಿಸ್ತಾನ​ ಮುಂದೆ ಪುಟಿದೆದ್ದ ಬಾಂಗ್ಲಾ.. ಮಿರಾಜ್, ನಜ್ಮುಲ್ ಶತಕದಾಟಕ್ಕೆ ಅಫ್ಘಾನ್​ಗೆ 335 ರನ್​ನ ಗುರಿ

Asia Cup 2023: ಲಂಕಾ ವಿರುದ್ಧ ಮಂಕಾಗಿದ್ದ ಬಾಂಗ್ಲಾ ತಂಡ ಮೂರು ಬದಲಾವಣೆಯೊಂದಿಗೆ ಮೈದಾನಕ್ಕಿಳಿದು ಇಂದು ಘರ್ಜಿಸಿದೆ. ಇದರ ಫಲವಾಗಿ ಅಫ್ಘಾನಿಸ್ತಾನಕ್ಕೆ 335 ರನ್​ನ ಗುರಿ ನೀಡಿದೆ.

BAN vs AFG
BAN vs AFG
author img

By ETV Bharat Karnataka Team

Published : Sep 3, 2023, 7:36 PM IST

ಲಾಹೋರ್ (ಪಾಕಿಸ್ತಾನ): ಶ್ರೀಲಂಕಾ ವಿರುದ್ಧ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ಬಾಂಗ್ಲಾದೇಶ ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ಥಾದ ವಿರುದ್ಧ ಉತ್ತಮ ಕಮ್​ಬ್ಯಾಕ್​ ಮಾಡಿದೆ. ಮೆಹಿದಿ ಹಸನ್ ಮಿರಾಜ್ ಮತ್ತು ನಜ್ಮುಲ್ ಹೊಸೈನ್ ಶಾಂಟೊ ಅವರು ಭರ್ಜರಿ ಶತಕ ಗಳಿಸಿದ್ದು, ಅಫ್ಘಾನಿಸ್ತಾನಕ್ಕೆ 335 ರನ್​ನ ಬೃಹತ್​ ಗುರಿಯನ್ನು ನೀಡಿದೆ.

ಮೊದಲ ವಿಕೆಟ್​ಗೆ ಮೆಹಿದಿ ಹಸನ್ ಮಿರಾಜ್ ಮತ್ತು ಮೊಹಮ್ಮದ್ ನಯಿಮ್ 60 ರನ್​ ಜೊತೆಯಾಟ ಮಾಡಿದರು. 28 ರನ್ ಗಳಿಸಿದ್ದ ನಯಿಮ್​ ಕ್ಲೀನ್ ಬೌಲ್ಡ್​ಗೆ ಬಲಿಯಾದರು. ಅವರ ಬೆನ್ನಲ್ಲೇ ತೌಹಿದ್ ಹೃದಯೋಯ್ ಶೂನ್ಯಕ್ಕೆ ಔಟ್​ ಆದರು. ನಂತರ ಆರಂಭಿಕ ನಯಿಮ್ ಜೊತೆ ಸೇರಿಕೊಂಡ ನಜ್ಮುಲ್ ಹೊಸೈನ್ ಶಾಂಟೊ ಭರ್ಜರಿ ಇನ್ನಿಂಗ್ಸ್​ ಕಟ್ಟಿದರು. ಮೂರನೇ ವಿಕೆಟ್​ಗೆ ಈ ಜೋಡಿ 194 ರನ್​ನ ಜೊತೆಯಾಟವನ್ನು ಮಾಡಿತು. 10.3 ಓವರ್​ನಿಂದ 44.3 ಓವರ್​ ವರೆಗೆ ಈ ಜೋಡಿ ಅಫ್ಘಾನಿ ಬೌಲರ್​ಗಳ ಮೇಲೆ ಸವಾರಿ ಮಾಡಿತು.

  • Centuries by Shanto and Miraz have powered Bangladesh to a formidable total of 332 in their must-win fixture!

    Can Afghanistan come out all guns blazing and chase down this mammoth total? Or will Bangladesh secure their first win? 🤯#AsiaCup2023 #BANvAFG pic.twitter.com/LASXIegmLw

    — AsianCricketCouncil (@ACCMedia1) September 3, 2023 " class="align-text-top noRightClick twitterSection" data=" ">

ಹಸನ್ ಮಿರಾಜ್ 7 ಬೌಂಡರಿ ಮತ್ತು 3ಸಿಕ್ಸ್​ ಬಾರಿಸಿ 119 ಬಾಲ್​ನಲ್ಲಿ 112 ರನ್​ ಗಳಿಸಿದರು. 112 ರನ್​ ಗಳಿಸಿ ಆಡುತ್ತಿದ್ದ ಹಸನ್ ಮಿರಾಜ್ ಎಡಗೈ ಗಾಯಕ್ಕೆ ತುತ್ತಾಗಿ ಪಂದ್ಯದಿಂದ ಹೊರನಡೆದರು. ಬಾಂಗ್ಲಾಕ್ಕೆ ಅವರ ಗಾಯ ಮುಂದಿನ ಪಂದ್ಯದಲ್ಲಿ ಬಾಧಿಸಿದರೆ ಸಮಸ್ಯೆ ಆಗಲಿದೆ. ಅವರ ವಿಕೆಟ್​ ಬೆನ್ನಲ್ಲೇ ನಜ್ಮುಲ್ ಹೊಸೈನ್ ಶತಕ ದಾಖಲಿಸಿದರು. 105 ಬಾಲ್​ನಲ್ಲಿ 104 ರನ್​ ಗಳಸಿದ ಅವರು ರನ್​ ಔಟ್​ಗೆ ಬಲಿಯಾದರು. ಅವರು ಈ ಇನ್ನಿಂಗ್ಸ್​ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸ್​ ದಾಖಲಿಸಿದ್ದರು.

  • In a crucial match, Mehidy Hasan Miraz was promoted to open the batting and displayed his remarkable batting skills by scoring a magnificent century against a strong bowling lineup. What a player! 😍#AsiaCup2023 #BANvAFG pic.twitter.com/MRDe1HCj4q

ನಂತರ ವಿಕೆಟ್​ ಕೀಪರ್​ ಮುಶ್ಫಿಕರ್ ರಹೀಮ್ (25) ಮತ್ತು ನಾಯಕ ಶಕೀಬ್ ಅಲ್ ಹಸನ್ ಕೊಂಚ ರನ್​ ಸೇರಿಸಿದರು. ಈ ವೇಳೆ ಇಬ್ಬರ ನಡುವೆ ಓಟದಲ್ಲಿ ಆದ ಗೊಂದಲದಲ್ಲಿ ರಹೀಮ್​ ರನ್​ ಔಟ್​ಗೆ ಬಲಿಯಾಗಬೇಕಾಯಿತು. ಅವರ ನಂತರ ಬಂದ ಶಮೀಮ್​ ಹುಸೈನ್ (11)​ ಸಹ ರನ್​ ಔಟ್​ ಆದರು. ನಾಯಕ ಶಕೀಬ್​ 32 ರನ್​ ಗಳಿಸಿ ತಂಡವನ್ನು 300ರ ಗಡಿ ದಾಟಿಸಿದರು.

  • Najmul Hossain Shanto's magnificent century has not only showcased his remarkable form with the bat but has also provided his team with a solid foundation for victory in this do-or-die fixture. 🙌#AsiaCup2023 #BANvAFG pic.twitter.com/ZZ8PIfVl2i

ಒಟ್ಟಿನಲ್ಲಿ 50 ಓವರ್​ ಮುಕ್ತಾಯಕ್ಕೆ ಬಾಂಗ್ಲಾದೇಶ 5 ವಿಕೆಟ್​ ಕಳೆದುಕೊಂಡು 334 ರನ್​ ಗಳಿಸಿತು. ಅಫ್ಘಾನಿಸ್ತಾನದ ಪರ ಮುಜೀಬ್ ಉರ್ ರಹಮಾನ್ ಮತ್ತು ಗುಲ್ಬದಿನ್ ನೈಬ್ ತಲಾ ಒಂದೊಂದು ವಿಕೆಟ್​ ಪಡೆದರು.

ಇದನ್ನೂ ಓದಿ:Asia Cup 2023: ಪಾಕ್​ನಲ್ಲಿ ಅಫ್ಘಾನ್​ vs ಬಾಂಗ್ಲಾ ಫೈಟ್​​.. ಟಾಸ್​ ಗೆದ್ದ ಶಕೀಬ್​ ಬ್ಯಾಟಿಂಗ್​ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.