ಕೊಲಂಬೋ (ಶ್ರೀಲಂಕಾ): ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್‌ನಲ್ಲಿ ಇಂದು ಆತಿಥೇಯ ಶ್ರೀಲಂಕಾವನ್ನು ಬಾಂಗ್ಲಾದೇಶ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಎದುರಿಸುತ್ತಿದೆ. ಟಾಸ್ ಗೆದ್ದ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಸೂಪರ್ ಫೋರ್ ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಸೋಲು ಕಂಡಿರುವ ಬಾಂಗ್ಲಾ ಇಂದು ಪುಟಿದೇಳುವ ಭರವಸೆಯಲ್ಲಿದೆ. ಅಲ್ಲದೇ ಇದು ಬಾಂಗ್ಲಾಗೆ ಮಾಡು ಇಲ್ಲವೇ ಮಡಿ ಪಂದ್ಯ. ಈ ಮ್ಯಾಚ್ನಲ್ಲಿ ಬಾಂಗ್ಲಾದೇಶ ಸೋತರೆ ಏಷ್ಯಾಕಪ್ ಅಭಿಯಾನ ಕೊನೆಗೊಳ್ಳುವುದು ಖಚಿತ.
-
Bangladesh have won the toss and opted to field first in Colombo! The pitch is dry, and the Bangladeshi spinners will look to exploit the daytime conditions. Meanwhile, Sri Lankan openers should aim to withstand the initial hour and then capitalise! 💪#AsiaCup2023 #SLvBAN pic.twitter.com/pDIgRhj6U9
— AsianCricketCouncil (@ACCMedia1) September 9, 2023 " class="align-text-top noRightClick twitterSection" data="
">Bangladesh have won the toss and opted to field first in Colombo! The pitch is dry, and the Bangladeshi spinners will look to exploit the daytime conditions. Meanwhile, Sri Lankan openers should aim to withstand the initial hour and then capitalise! 💪#AsiaCup2023 #SLvBAN pic.twitter.com/pDIgRhj6U9
— AsianCricketCouncil (@ACCMedia1) September 9, 2023Bangladesh have won the toss and opted to field first in Colombo! The pitch is dry, and the Bangladeshi spinners will look to exploit the daytime conditions. Meanwhile, Sri Lankan openers should aim to withstand the initial hour and then capitalise! 💪#AsiaCup2023 #SLvBAN pic.twitter.com/pDIgRhj6U9
— AsianCricketCouncil (@ACCMedia1) September 9, 2023
ನಜ್ಮುಲ್ ಹಸನ್ ಶಾಂಟೊ ಮತ್ತು ಮೆಹದಿ ಹಸನ್ ಮಿರಾಜ್ ಅವರ ಶತಕಗಳ ನೆರವಿನಿಂದ ಬಾಂಗ್ಲಾದೇಶ ಲೀಗ್ ಹಂತದಲ್ಲಿ ಅಫ್ಘಾನಿಸ್ತಾನ ವಿರುದ್ಧ ಐದು ವಿಕೆಟ್‌ಗೆ 334 ರನ್ ಗಳಿಸಿತ್ತು, ಆದರೆ, ಅದರ ನಂತರ ಬ್ಯಾಟರ್ಗಳಿಂದ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ. ಬಾಂಗ್ಲಾ ಶ್ರೀಲಂಕಾ ವಿರುದ್ಧ 164 ರನ್‌ಗಳಿಗೆ ಮತ್ತು ಪಾಕಿಸ್ತಾನದ ವಿರುದ್ಧ 193 ರನ್‌ಗಳಿಗೆ ಔಟ್ ಆಗಿತ್ತು.
ಹೀಗಾಗಿ ಇಂದು ಬಾಂಗ್ಲಾ ಬ್ಯಾಟರ್ಗಳಿಗೆ ಸವಾಲಿನ ಕಣ ಆಗಿದೆ. ಗಾಯದ ಕಾರಣ ಏಷ್ಯಾಕಪ್‌ನಿಂದ ಹೊರಗುಳಿದಿರುವ ಶಾಂಟೊವನ್ನು ಬಾಂಗ್ಲಾದೇಶ ಕಳೆದುಕೊಳ್ಳಲಿದೆ. ಆದರೆ, ಲಿಟನ್ ದಾಸ್ ತಂಡವನ್ನು ಸೇರಿಕೊಂಡಿದ್ದು, ಅವರಿಂದ ಉತ್ತಮ ಪ್ರದರ್ಶನವನ್ನು ತಂಡ ನಿರೀಕ್ಷಿಸಲಿದೆ.
ಗುಂಪು ಹಂತದ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ರೋಚಕ ಜಯ ದಾಖಲಿಸಿ ಬೌಲಿಂಗ್ ಬಲ ಮೆರೆದ ಲಂಕಾ ಇಂದು ಅದೇ ಫಾರ್ಮ್ ಅನ್ನು ಮುಂದುವರಿಸಬೇಕಿದೆ. ಬಾಂಗ್ಲಾದ ವಿರುದ್ಧ ದೊಡ್ಡ ಮೊತ್ತದ ಗುರಿಯನ್ನು ನೀಡಿ, ಬೇಗ ಆಲ್ಔಟ್ ಮಾಡಿದರೆ ಹೆಚ್ಚಿನ ರನ್ ರೇಟ್ ದೊರೆಯಲಿದೆ ಇದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಸಹಕಾರಿ ಆಗಲಿದೆ.
ತಂಡಗಳು ಇಂತಿವೆ.. ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶನಕ(ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ರಜಿತ, ಮತೀಶ ಪತಿರಣ
ಬಾಂಗ್ಲಾದೇಶ: ಮೊಹಮ್ಮದ್ ನಯಿಮ್, ಮೆಹಿದಿ ಹಸನ್ ಮಿರಾಜ್, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ತೌಹಿದ್ ಹೃದಯೋಯ್, ಮುಶ್ಫಿಕರ್ ರಹೀಮ್(ವಿಕೆಟ್ ಕೀಪರ್), ಶಮೀಮ್ ಹೊಸೈನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್, ನಸುಮ್ ಅಹ್ಮದ್
ಇದನ್ನೂ ಓದಿ: Asia Cup 2023: ಮತ್ತೆ ಏಷ್ಯಾಕಪ್ ತಂಡ ಸೇರಿದ ಬುಮ್ರಾ.. ಪಾಕಿಸ್ತಾನ ಪಂದ್ಯಕ್ಕೆ ಇವರೇ ಕೀ ಬೌಲರ್