ಲಾಹೋರ್ (ಪಾಕಿಸ್ತಾನ): ಏಷ್ಯಾಕಪ್ನ ಸೂಪರ್ ಫೂರ್ ಹಂತಕ್ಕೆ ಅಫ್ಘಾನಿಸ್ತಾನ ಪ್ರವೇಶಿಸಬೇಕಾದರೆ 38 ಓವರ್ ಒಳಗಡೆ ಲಂಕಾ ಕೊಟ್ಟಿದ್ದ ಗುರಿಯನ್ನು ಭೇದಿಸಬೇಕಿತ್ತು. ಏಕೆಂದರೆ, ಬಾಂಗ್ಲಾದೇಶದ ಎದುರು ಸೋಲು ಕಂಡಿದ್ದರಿಂದ ಅಫ್ಘಾನ್ -1.780 ರನ್ ರೇಟ್ ಹೊಂದಿತ್ತು. ಈ ಹಿನ್ನೆಲೆಯಲ್ಲಿ ಲಂಕಾ ಬೌಲರ್ಗಳನ್ನು ಹಿನಾಮಾನವಾಗಿ ದಂಡಿಸಿದ ಅಫ್ಘಾನಿ ಬ್ಯಾಟರ್ಗಳು ಗೆಲುವಿಗೆ 37.4 ಓವರ್ನಲ್ಲಿ ಆಲ್ಔಟ್ಗೆ ಶರಣಾಗಿ 2 ರನ್ ಹಿನ್ನಡೆ ಅನುಭವಿಸಿ ಸೋಲು ಕಂಡರು. ಇದರಿಂದ ಸೂಪರ್ 4 ಹಂತಕ್ಕೆ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸ್ಥಾನ ಪಡೆದುಕೊಂಡಿತು.
-
A thriller in Lahore 😯
— ICC (@ICC) September 5, 2023 " class="align-text-top noRightClick twitterSection" data="
Sri Lanka sneak home by two runs against a spirited Afghanistan side to book a Super 4 spot in #AsiaCup2023 👊#AFGvSL | 📝: https://t.co/mGlQ6ex6uJ pic.twitter.com/XDPFbc4jvd
">A thriller in Lahore 😯
— ICC (@ICC) September 5, 2023
Sri Lanka sneak home by two runs against a spirited Afghanistan side to book a Super 4 spot in #AsiaCup2023 👊#AFGvSL | 📝: https://t.co/mGlQ6ex6uJ pic.twitter.com/XDPFbc4jvdA thriller in Lahore 😯
— ICC (@ICC) September 5, 2023
Sri Lanka sneak home by two runs against a spirited Afghanistan side to book a Super 4 spot in #AsiaCup2023 👊#AFGvSL | 📝: https://t.co/mGlQ6ex6uJ pic.twitter.com/XDPFbc4jvd
ಲಂಕಾ ಕೊಟ್ಟಿದ್ದ 292 ರನ್ ಗುರಿಯನ್ನು ಬೆನ್ನು ಹತ್ತಿದ್ದ ಅಫ್ಘಾನಿಸ್ತಾನಕ್ಕೆ ಲಂಕಾದ ರಜಿತ್ ಆರಂಭಿಕ ಆಘಾತ ನೀಡಿದರು. 3ನೇ ಮತ್ತು 5ನೇ ಓವರ್ನಲ್ಲಿ ರಹಮಾನುಲ್ಲಾ ಗುರ್ಬಾಜ್ (4) ಮತ್ತು ಇಬ್ರಾಹಿಂ ಝದ್ರಾನ್ (7) ಅವರ ವಿಕೆಟ್ ಪಡೆದರು. ಆದರೆ ಪಟ್ಟು ಬಿಡದ ಅಫ್ಘಾನಿ ಬ್ಯಾಟರ್ಗಳು ಮೈದಾನಕ್ಕಿಳಿಯುತ್ತಿದ್ದಂತೆ ಬಿರುಸಿನ ಆಟಕ್ಕೆ ಮುಂದಾದರು. ಗುಲ್ಬದಿನ್ ನೈಬ್ ಮತ್ತು ರಹಮತ್ ಶಾ ಸ್ಕೋರ್ನ ವೇಗ ಹೆಚ್ಚಿಸಲು ನೋಡಿದರು. ಆದರೆ ಪತಿರಾಣ ಸ್ಪಿನ್ಗೆ ನೈಬ್ ಎಲ್ಬಿಡಬ್ಲ್ಯೂಗೆ ಶರಣಾಗಬೇಕಾಯಿತು. 40 ಬಾಲ್ನಲ್ಲಿ 45 ರನ್ ಗಳಸಿ ಆಡುತ್ತಿದ್ದ ರೆಹಮತ್ ಶಾ ವಿಕೆಟ್ನ್ನು ರಜಿತ್ ಪಡೆದರು.
ಮೊಹಮ್ಮದ್ ನಬಿ ಮತ್ತು ಹಶ್ಮತುಲ್ಲಾ ಶಾಹಿದಿ ಬಲಿಷ್ಠ ಹೋರಾಟವನ್ನು ತೋರಿದರು. ನಬಿ ಲಂಕಾ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು. ಕೇವಲ 32 ಬಾಲ್ ಎದುರಿಸಿದ ಅವರು 5 ಸಿಕ್ಸ್ ಮತ್ತು 6 ಬೌಂಡರಿಯ ಸಹಾಯದಿಂದ 65 ರನ್ ಕಲೆಹಾಕಿದರು. ಇವರ ಭರ್ಜರಿ ಆಟದ ನೆರವಿನಿಂದ 38 ಓವರ್ ಒಳಗೇ ಪಂದ್ಯವನ್ನು ಅಫ್ಘಾನ್ ಯಾವುದೇ ಪ್ರಯಾಸವಿಲ್ಲದೇ ಗೆಲ್ಲುವಂತಿತ್ತು. ಆದರೆ, 32ನೇ ಬಾಲ್ನಲ್ಲಿ ಸಿಕ್ಸ್ ಗಳಿಸುವ ಪ್ರಯತ್ನದಲ್ಲಿ ತೀಕ್ಷ್ಣನ ಬೌಲ್ನಲ್ಲಿ ಕ್ಯಾಚ್ ಇತ್ತರು.
ಆದರೆ, ಅವರ ವಿಕೆಟ್ ನಂತರ ಬಂದ ಕರೀಂ ಜನತ್ ಪಂದ್ಯವನ್ನು ಅದೇ ವೇಗದಲ್ಲಿ ಕೊಂಡೊಯ್ಯದರು. ಜನತ್ಗೆ ನಾಯಕ ಶಾಹಿದಿ ಸಹ ಬೆಂಬಲ ನೀಡಿದರು. ಕರೀಂ ಜನತ್ 13 ಬಾಲ್ನಲ್ಲಿ 22 ರನ್ ಗಳಸಿ ಔಟ್ ಆದರು. ಜನತ್ ಬೆನ್ನಲ್ಲೇ 59 ರನ್ಗಳಿಸಿ ಆಡುತ್ತಿದ್ದ ನಾಯಕ ಶಹೀದ್ ಸಹ ವಿಕೆಟ್ ಕೊಟ್ಟರು.
ನಜಿಬುಲ್ಲಾ ಝದ್ರಾನ್, ರಶೀದ್ ಖಾನ್ ಹೋರಾಟ: ಝದ್ರಾನ್ ಮತ್ತು ರಶೀದ್ ಕೊನೆಯ 8ನೇ ವಿಕೆಟ್ಗೆ ಭರ್ಜರಿ ಜೊತೆಯಾಟ ಮಾಡಿದರು. ಕೊನೆಯ ಮೂರು ಬಾಲ್ ಇರುವ ವರೆಗೂ ರಶೀದ್ ಖಾನ್ ಪ್ರಯತ್ನಿಸಿದರು. 15 ಬಾಲ್ನಲ್ಲಿ ನಜಿಬುಲ್ಲಾ ಝದ್ರಾನ್ 23 ರನ್ ಗಳಿಸಿದರು. ಕೊನೆಯಲ್ಲಿ ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫರೂಕ್ ಬೇಗ ಔಟ್ ಆಗಿದ್ದರಿಂದ 37.4 ಓವರ್ನಲ್ಲಿ ಆಲ್ಔಟ್ ಆಯಿತು. ಲಂಕಾ ಪರ ಕಸುನ್ ರಜಿತ 4 ವಿಕೆಟ್ ಪಡದರೆ, ದುನಿತ್ ವೆಲ್ಲಲಾಗೆ ಮತ್ತು ಧನಂಜಯ ಡಿ ಸಿಲ್ವಾ ತಲಾ 2 ವಿಕೆಟ್ ಕಬಳಿಸಿದರು. ಮತೀಶ ಪತಿರಣ ಮತ್ತು ಮಹೀಶ್ ತೀಕ್ಷ್ಣ ತಲಾ ಒಂದು ವಿಕೆಟ್ ಉರುಳಿಸಿದರು.
ನಾಳೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೂಪರ್ ಫೋರ್ನ ಮೊದಲ ಪಂದ್ಯದಲ್ಲಿ ಸೆಣಸಲಿದೆ.
ಇದನ್ನೂ ಓದಿ: 2023 world cup: ವಿಶ್ವಕಪ್ ತಂಡದಲ್ಲಿ ಏಳು ಹೊಸಬರು.. 2019ರ ತಂಡಕ್ಕೂ ಈಗಿನ ಪಡೆಗೂ ಏನು ವ್ಯತ್ಯಾಸ?