ETV Bharat / sports

ಏಷ್ಯಾ ಕಪ್: ಕೊನೆಯ ಎಸೆತದಲ್ಲಿ ಪಾಕ್​ಗೆ ಸೋಲುಣಿಸಿದ ಲಂಕಾ.. ​ಟ್ರೋಫಿಗಾಗಿ ಭಾರತದ ಎದುರು ಸೆಣಸು - ಏಷ್ಯಾ ಕಪ್ ಫೈನಲ್​

ಏಷ್ಯಾ ಕಪ್​ ಟೂರ್ನಿಯ ಸೆಮಿಫೈನಲ್​ ಎಂದೇ ಬಿಂಬಿತವಾಗಿದ್ದ ಐದನೇ ಸೂಪರ್ 4 ಪಂದ್ಯ ರೋಚಕ ಅಂತ್ಯ ಕಂಡಿದೆ. ಪಾಕಿಸ್ತಾನ ತಂಡದ ವಿರುದ್ಧ ಶ್ರೀಲಂಕಾ ತಂಡ 2 ವಿಕೆಟ್​ಗಳಿಂದ ಗೆಲುವು ದಾಖಲಿಸಿದೆ.

asia-cup-2023-pakistan-vs-sri-lanka-super-fours-match
ಏಷ್ಯಾ ಕಪ್: ಕೊನೆಯ ಎಸೆತದಲ್ಲಿ ಪಾಕ್​ಗೆ ಸೋಲುಣಿಸಿದ ಲಂಕಾ.. ​ಟ್ರೋಫಿಗಾಗಿ ಭಾರತದ ಎದುರು ಸೆಣಸು
author img

By ETV Bharat Karnataka Team

Published : Sep 15, 2023, 1:15 AM IST

Updated : Sep 15, 2023, 6:16 AM IST

ಕೊಲಂಬೋ (ಶ್ರೀಲಂಕಾ): ಏಷ್ಯಾ ಕಪ್​ ಟೂರ್ನಿಯ ಫೈನಲ್​ಗೆ ಶ್ರೀಲಂಕಾ ತಂಡ ಲಗ್ಗೆ ಇಟ್ಟಿದೆ. ಗುರುವಾರ ನಡೆದ ಸೂಪರ್​ 4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ದಾಖಲಿಸಿದೆ. ಫೈನಲ್​ ಪಂದ್ಯದಲ್ಲಿ ಟ್ರೋಫಿಗಾಗಿ ಭಾರತದ ಎದುರು ಲಂಕಾ ಸೆಣಸಲಿದೆ.

ಸೆಮಿಫೈನಲ್​ ಎಂದೇ ಬಿಂಬಿತವಾಗಿದ್ದ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಐದನೇ ಸೂಪರ್ 4 ಪಂದ್ಯಕ್ಕೆ ಆರಂಭದಲ್ಲೇ ಮಳೆ ಅಡ್ಡಿ ಪಡಿಸಿತ್ತು. ಇದರಿಂದ ಪಂದ್ಯ ಆರಂಭ ವಿಳಂಬವಾಗಿ 42 ಓವರ್​ಗಳಿಗೆ ಸೀಮಿತಗೊಳಿಸಲಾಗಿತ್ತು. ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಏಳು ವಿಕೆಟ್​ ನಷ್ಟಕ್ಕೆ 252 ರನ್​ ಪೇರಿಸಿತ್ತು. ಈ ಸವಾಲಿನ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಎಂಟು ವಿಕೆಟ್​ ಕಳೆದುಕೊಂಡು ಕೊನೆಯ ಎಸೆತದಲ್ಲಿ ಗೆಲುವಿನ ನಗೆ ಬೀರಿತು.

ಲಂಕಾ ಇನ್ನಿಂಗ್ಸ್​ ಆರಂಭಿಸಿದ ಪತುಮ್ ನಿಸ್ಸಂಕಾ ಮತ್ತು ಕುಸಲ್ ಪೆರೇರಾ ತಂಡಕ್ಕೆ ಅಷ್ಟೇನು ಉತ್ತಮ ಆರಂಭ ಒದಗಿಸಲಿಲ್ಲ. ಇಬ್ಬರೂ ಆರಂಭಿಕರು ಬಹಳ ಬೇಗನೆ ಔಟಾದರು. ಬಿರುಸಿನ ಬ್ಯಾಟ್ ಬೀಸಿದ ಪೆರೇರಾ 8 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 17 ಗಳಿಸಿ ಶಾದಾಬ್ ಖಾನ್ ರನೌಟ್​ ಬಲೆಗೆ ಸಿಲುಕಿದರು. ನಿಧಾನಗತಿ ಬ್ಯಾಟ್​ ಮಾಡಿದ ನಿಸ್ಸಂಕಾ 44 ಬಾಲ್​ಗಳಲ್ಲಿ 29 ರನ್​ಗೆ ಶಾದಾಬ್ ಖಾನ್ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು.

ನಂತರ ಲಂಕಾ ತಂಡವನ್ನು ಮಧ್ಯಮ ಕ್ರಮಾಂಕದಲ್ಲಿ ಸದೀರ ಸಮರವಿಕ್ರಮ ಹಾಗೂ ಕುಸಾಲ್ ಮೆಂಡಿಸ್ ಉತ್ತಮವಾಗಿ ಮುನ್ನಡೆಸಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 100 ರನ್‌ಗಳ ಜೊತೆಯಾಟ ನೀಡಿದರು. ಆದರೆ, ಸಮರವಿಕ್ರಮ ತಮ್ಮ ಅರ್ಧಶತಕದ ಹೊಸ್ತಿಲಿನಲ್ಲಿ ಎಡವಿದರು. ಇಫ್ತಿಕರ್ ಅಹ್ಮದ್ ಅವರು 48 ರನ್​ಗಳಲ್ಲಿ ಆಡುತ್ತಿದ್ದ ಸಮರವಿಕ್ರಮ ವಿಕೆಟ್​ ಪಡೆಯುವ ಮೂಲಕ ಈ ಜೋಡಿಯನ್ನು ಬೇರ್ಪಡಿಸಿದರು.

ಮತ್ತೊಂದೆಡೆ, ತಮ್ಮ ಬ್ಯಾಟ್​ ಮುಂದುವರೆಸಿದ ಕುಸಾಲ್ ಮೆಂಡಿಸ್ ಅವರೊಂದಿಗೆ ಚರಿತ ಅಸಲಂಕಾ ಬ್ಯಾಟಿಂಗ್​ಗೆ ಸೇರಿಕೊಂಡರು. ಆದರೆ, ಇದರ ನಡುವೆ 91 ರನ್​ ಗಳಿಸಿದ್ದ ಮೆಂಡಿಸ್ ಅವರನ್ನೂ ಇಫ್ತಿಕರ್ ಅಹ್ಮದ್ ಪೆವಿಲಿಯನ್​ಗೆ ಸೇರಿಸಿದರು. ಇದರ ಬೆನ್ನಲ್ಲೇ ದಸುಕ ಶನಕಾ (2) ಅವರನ್ನೂ ಇಫ್ತಿಕರ್ ಔಟ್​ ಮಾಡಿದರು. ಇದರಿಂದ ಪಾಕಿಸ್ತಾನ ಪಂದ್ಯದಲ್ಲಿ ಮೇಲೆ ಹಿಡಿತ ಸಾಧಿಸುವ ಲಕ್ಷಣ ತೋರಿಸಿತು.

ಮತ್ತೊಂದೆಡೆ, ತಮ್ಮ ತಂಡದ ವಿಕೆಟ್​ ಬೀಳುತ್ತಿದ್ದರೂ ಚರಿತ ಅಸಲಂಕಾ ಧೃತಿಗೇಡದ ತಂಡವನ್ನು ಕೊನೆಯವರೆಗೂ ಮುನ್ನಡೆಸಿದರು. ಅಂತಿಮ ಎರಡು ಎಸತೆಗಳಲ್ಲಿ ಗೆಲುವಿಗೆ ಆರು ರನ್​ಗಳ ಅಗತ್ಯವಿತ್ತು. ಆಗ ಅಸಲಂಕಾ ಬೌಂಡರಿ ಹಾಗೂ ಎರಡು ರನ್​ ಸಿಡಿಸಿ ತಂಡವನ್ನು ಗೆಲ್ಲಿಸಿ ಫೈನಲ್​ಗೇರಿಸಿದರು. ಅಲ್ಲದೇ, ಅಜೇಯ ಆಟವಾಡಿದ ಅವರು 49 ರನ್​ ಬಾರಿಸಿ ಮಿಂಚಿದರು.

Last Updated : Sep 15, 2023, 6:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.