ಕೊಲಂಬೊ (ಶ್ರೀಲಂಕಾ): ನೀಲಾಕಾಶದ ಅಡಿಯಲ್ಲಿ ಆರಂಭವಾದ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಒಮ್ಮೆಗೆ ಮಳೆ ಕಾಡಿದೆ. 24.1ನೇ ಓವರ್ ವೇಳೆ ಜೋರಾಗಿ ಆರಂಭವಾದ ಮಳೆ ಸುಮಾರು ಎರಡು ಗಂಟೆಗಳ ಕಾಲ ಎಡೆಬಿಡದೇ ಸುರಿದಿದೆ. ಇದರಿಂದ ಮೈದಾನ ಇನ್ನೂ ತೇವಾಂಶದಿಂದ ಕೂಡಿದ್ದು, ಪಂದ್ಯವನ್ನು ನಾಳಿನ ಮೀಸಲು ದಿನಕ್ಕೆ ಮುಂದೂಡಲಾಗಿದೆ.
ಭಾರತ ಮಳೆ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ (56) ಮತ್ತು ಶುಭಮನ್ ಗಿಲ್ (58) ವಿಕೆಟ್ ಕಳೆದುಕೊಂಡು 147 ರನ್ ಕಲೆ ಹಾಕಿದೆ. ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ(8) ಮತ್ತು ಕೆಎಲ್ ರಾಹುಲ್ (17) ಇದ್ದಾರೆ. ನಾಳೆ (ಸೋಮವಾರ) ಇದೇ ಹಂತದಿಂದ ಪಂದ್ಯ ಆರಂಭವಾಗಲಿದ್ದು, ಭಾರತ ಬಾಕಿ 25 ಓವರ್ ಬ್ಯಾಟಿಂಗ್ ಮಾಡಬೇಕಿದೆ.
-
UPDATE - Play has been called off due to persistent rains 🌧️
— BCCI (@BCCI) September 10, 2023 " class="align-text-top noRightClick twitterSection" data="
See you tomorrow (reserve day) at 3 PM IST!
Scorecard ▶️ https://t.co/kg7Sh2t5pM #TeamIndia | #AsiaCup2023 | #INDvPAK pic.twitter.com/7thgTaGgYf
">UPDATE - Play has been called off due to persistent rains 🌧️
— BCCI (@BCCI) September 10, 2023
See you tomorrow (reserve day) at 3 PM IST!
Scorecard ▶️ https://t.co/kg7Sh2t5pM #TeamIndia | #AsiaCup2023 | #INDvPAK pic.twitter.com/7thgTaGgYfUPDATE - Play has been called off due to persistent rains 🌧️
— BCCI (@BCCI) September 10, 2023
See you tomorrow (reserve day) at 3 PM IST!
Scorecard ▶️ https://t.co/kg7Sh2t5pM #TeamIndia | #AsiaCup2023 | #INDvPAK pic.twitter.com/7thgTaGgYf
ಟಾಸ್ ಸೋತು ಮೊದಲು ಬ್ಯಾಟಿಂಗ್ಗಿಳಿದ ಭಾರತ ಉತ್ತಮ ಆರಂಭವನ್ನು ಪಡೆದುಕೊಂಡಿತ್ತು. ಏಷ್ಯಾಕಪ್ನ ಲೀಗ್ ಹಂತದ ಪಂದ್ಯದಲ್ಲಿ ಪಾಕ್ ಬೌಲರ್ಗಳಿಗೆ ನಲುಗಿದ್ದ ಗಿಲ್ ಇಂದು ಹೆಚ್ಚು ಭರವಸೆಯಲ್ಲಿ ಕಂಡು ಬಂದರು. ಬೌಂಡರಿಗಳ ಸಹಾಯದಿಂದಲೇ ರನ್ ಕಲೆಹಾಕಿದರು. ರೋಹಿತ್ ಶರ್ಮಾ ಇಂದು ಮೊದಲ ಕೆಲ ಓವರ್ಗಳಲ್ಲಿ ಅಷ್ಟು ಉತ್ತಮ ಬ್ಯಾಟಿಂಗ್ ಮಾಡಲಿಲ್ಲ. ನಂತರ ಪಾಕ್ ವಿರುದ್ಧ ಲಯ ಕಂಡುಕೊಂಡರು.
ರೋಹಿತ್ ಶರ್ಮಾ ಅವರನ್ನು ಪಾಕ್ನ ಸ್ವಿಂಗ್ ಸ್ಪೆಶಾಲಿಷ್ಟ್ ನಸೀಮ್ ಕಾಡಿದರು. ಅವರ ಸ್ವಿಂಗ್ ಬಾಲ್ಗೆ ನಾಯಕ ರೋಹಿತ್ ವಿಕೆಟ್ ಕಾಯ್ದುಕೊಳ್ಳಲು ಪರದಾಡಿಸರು. ಇದರಿಂದ 20 ಬಾಲ್ ಅಡಿದ ರೋಹಿತ್ ಕೇವಲ 10 ರನ್ ಗಳಿಸಿದ್ದರು. ಆದರೆ ಪವರ್ ಪ್ಲೇ ನಂತರ ಸ್ಪಿನ್ನರ್ಗಳಿಗೆ ಚಳಿ ಬಿಡಿಸಿದರು. ಒಂದೇ ಓವರ್ನಲ್ಲಿ 15ಕ್ಕೂ ಹೆಚ್ಚು ರನ್ ಗಳಿಸಿ ಕಮ್ಬ್ಯಾಕ್ ಮಾಡಿದರು.
ಗಿಲ್ ಆರಂಭದಿಂದಲೇ ಅಬ್ಬರಿಸುತ್ತಾ ಬ್ಯಾಟಿಂಗ್ ಮಾಡಿದರು. ಶಾಹೀನ್ ಅಫ್ರಿದಿಯ ಬೌಲಿಂಗ್ನ್ನು ಸರಿಯಾಗಿ ಅರಿತ ಗಿಲ್ ಕಟ್, ಪುಲ್ ಶಾಟ್ಗಳನ್ನು ಲೀಲಾಜಾಲವಾಗಿ ಆಡಿದರು. ಇದರಿಂದ ಭಾರತ 10 ಓವರ್ಗೆ ವಿಕೆಟ್ ನಷ್ಟವಿಲ್ಲದೇ 61 ರನ್ ಗಳಿಸಿತ್ತು. 13ನೇ ಓವರ್ನ್ನು ಶಾಬಾದ್ ಖಾನ್ ಮಾಡಿದರು. ಇಲ್ಲಿ ರೋಹಿತ್ ಸ್ಕೋರ್ಗೆ ಸ್ವಲ್ಪ ಆಕ್ಸಿಲರೇಟ್ ಮಾಡಿದರು. ಖಾನ್ ಓವರ್ನಲ್ಲಿ 2 ಸಿಕ್ಸ್ ಮತ್ತು ಒಂದು ಬೌಂಡರಿ ಗಳಿಸಿ 19 ರನ್ ಕಲೆಹಾಕಿದರು.
-
Persistent rain forces the #PAKvIND Super 4 match into the reserve day 🏏
— Pakistan Cricket (@TheRealPCB) September 10, 2023 " class="align-text-top noRightClick twitterSection" data="
Ticket-holders for today's game will be able to utilise their tickets for the reserve day.#AsiaCup2023 pic.twitter.com/g4sBxolfaF
">Persistent rain forces the #PAKvIND Super 4 match into the reserve day 🏏
— Pakistan Cricket (@TheRealPCB) September 10, 2023
Ticket-holders for today's game will be able to utilise their tickets for the reserve day.#AsiaCup2023 pic.twitter.com/g4sBxolfaFPersistent rain forces the #PAKvIND Super 4 match into the reserve day 🏏
— Pakistan Cricket (@TheRealPCB) September 10, 2023
Ticket-holders for today's game will be able to utilise their tickets for the reserve day.#AsiaCup2023 pic.twitter.com/g4sBxolfaF
ಶತಕದ ಜೊತೆಯಾಟ: ಗಿಲ್ ಮತ್ತು ರೋಹಿತ್ ಶರ್ಮಾ 14ನೇ ಓವರ್ನಲ್ಲಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸುವ ಮೂಲಕ ಶತಕದ ಜೊತೆಯಾಟ ಆಡಿದರು. ಇಬ್ಬರು 121 ರನ್ನ ಜೊತೆಯಾಟವನ್ನು ಶಾಬಾದ್ ಖಾನ್ ಬ್ರೇಕ್ ಮಾಡಿದರು. 56 ರನ್ ಗಳಿಸಿ ಆಡುತ್ತಿದ್ದ ರೋಹಿತ್ ಶರ್ಮಾ ಶಾಬಾದ್ ಬೌಲ್ನಲ್ಲಿ ಸಿಕ್ಸ್ಗೆ ಕಳಿಸುವ ಭರದಲ್ಲಿ ಕ್ಯಾಚಿತ್ತು ಪೆವಿಲಿಯನ್ಗೆ ಮರಳಿದರು. ಅವರ ಬೆನ್ನಲ್ಲೇ ಯುವ ಆಟಗಾರ ಶುಭಮನ್ ಗಿಲ್ 58 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಭಾರತ ಮಳೆ ಆರಂಭಕ್ಕೂ ಮುನ್ನ ಎರಡು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದೆ. ವಿರಾಟ್ 8 ಮತ್ತು ಕೆಎಲ್ ರಾಹುಲ್ 17 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಪಾಕಿಸ್ತಾನದ ಶಾಬಾದ್ ಖಾನ್ ಮತ್ತು ಶಾಹೀನ್ ಅಫ್ರಿದಿ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ.
ಇದನ್ನೂ ಓದಿ: ಮತ್ತೆ ಗಾಯಕ್ಕೆ ತುತ್ತಾದ ಅಯ್ಯರ್: ತಂಡದಲ್ಲಿ ರಾಹುಲ್, ಬುಮ್ರಾಗೆ ಸ್ಥಾನ .. ಟಾಸ್ ಗೆದ್ದ ಪಾಕ್ ಬೌಲಿಂಗ್ ಆಯ್ಕೆ