ಲಾಹೋರ್ (ಪಾಕಿಸ್ತಾನ): ಪಾಕಿಸ್ತಾನ ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಇಂದು ಅದ್ಭುತ ಪ್ರದರ್ಶನ ನೀಡಿ, ಇಲ್ಲಿನ ಗಡಾಫಿ ಮೈದಾನದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಸೂಪರ್ ಫೋರ್ ಹಂತದ ಮೊದಲ ಪಂದ್ಯವನ್ನು 7 ವಿಕೆಟ್ಗಳಿಂದ ಗೆದ್ದುಕೊಂಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ 193 ರನ್ಗಳಿಗೆ ಆಲ್ಔಟ್ ಆಯಿತು. ಎರಡನೇ ಇನ್ನಿಂಗ್ಸ್ನಲ್ಲಿ ಇಮಾಮ್ ಉಲ್ ಹಕ್ ಮತ್ತು ಮಹಮ್ಮದ್ ರಿಜ್ವಾನ್ ಅವರ ಅರ್ಧಶತಕದ ಆಟದ ನೆರವಿನಿಂದ 39.3 ಓವರ್ಗೆ 194 ರನ್ ಗಳಿಸಿತು.
-
Pakistan sign off their home leg of #AsiaCup2023 in style with a comfortable win over Bangladesh 💪
— ICC (@ICC) September 6, 2023 " class="align-text-top noRightClick twitterSection" data="
📝 #PAKvBAN: https://t.co/p8sERaWRSR pic.twitter.com/o8XCPK4bCk
">Pakistan sign off their home leg of #AsiaCup2023 in style with a comfortable win over Bangladesh 💪
— ICC (@ICC) September 6, 2023
📝 #PAKvBAN: https://t.co/p8sERaWRSR pic.twitter.com/o8XCPK4bCkPakistan sign off their home leg of #AsiaCup2023 in style with a comfortable win over Bangladesh 💪
— ICC (@ICC) September 6, 2023
📝 #PAKvBAN: https://t.co/p8sERaWRSR pic.twitter.com/o8XCPK4bCk
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 38.4 ಓವರ್ಗೆ ಪಾಕ್ ಬೌಲರ್ಗೆ ಶರಣಾಗಿ 194 ರನ್ಗಳ ಟಿ-20 ಪಂದ್ಯದ ಗುರಿಯನ್ನು ನೀಡಿತು. ಇದನ್ನೂ ಬೆನ್ನು ಹತ್ತಿದ ಪಾಕ್ಗೆ ಬಾಂಗ್ಲಾ ಬೌಲರ್ಗಳು ಕಾಡಿದರು. ತವರು ಮೈದಾನದಲ್ಲಿ ಬಲಿಷ್ಠ ಬ್ಯಾಟಿಂಗ್ ಮಾಡುವ ಪಾಕ್ ಬ್ಯಾಟರ್ಗಳನ್ನು ಎಡಗೈ ಬೌಲರ್ಗಳು ಮತ್ತು ಸ್ಪಿನ್ನರ್ಗಳ ಮೂಲಕ ಶಕೀಬ್ ಕಟ್ಟಿಹಾಕಿದರು.
194 ರನ್ ಚೇಸಿಂಗ್ ಆರಂಭಿಸಿದ ಪಾಕ್ಗೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭದಿಂದಲೇ ಪ್ರಬಲ ದಾಳಿ ಮಾಡಿದ ಬಾಂಗ್ಲಾ 10 ಓವರ್ಗೆ ಪಾಕಿಸ್ತಾನದ 1 ವಿಕೆಟ್ ಪಡೆದು 37 ರನ್ ಮಾತ್ರ ಬಿಟ್ಟುಕೊಟ್ಟಿತ್ತು. ಐಸಿಸಿ ಶ್ರೇಯಾಂಕದಲ್ಲಿ 7ನೇ ಸ್ಥಾನದಲ್ಲಿರುವ ಪಾಕ್ನ ಆರಂಭಿ ಆಟಗಾರ ಫಾಕರ್ ಜಮಾನ್ನ್ನು ಶೋರಿಫುಲ್ ಇಸ್ಲಾಂಗೆ 10 ಓವರ್ನಲ್ಲಿ ವಿಕೆಟ್ ಕೊಟ್ಟರು. ನಂತರ ಬಂದ ಶತಕದ ಮೇಲೆ ಶತಕ ದಾಖಲಿಸಿ ದಾಖಲೆ ಬರೆಯುತ್ತಿದ್ದ ಪಾಕ್ ನಾಯಕ ಬಾಬರ್ ಅಜಮ್ 17 ರನ್ಗೆ ವಿಕೆಟ್ ಕೊಟ್ಟರು.
-
Remarkable team effort by Pakistan! Rauf's exceptional bowling, with figures of 4/19, set the stage by limiting the Tigers to a modest total of 193. In response, Imam and Rizwan's 50s ensured a confident chase, resulting in a promising 7-wicket win. 🇵🇰#AsiaCup2023 #PAKvBAN pic.twitter.com/fuehIGRKBG
— AsianCricketCouncil (@ACCMedia1) September 6, 2023 " class="align-text-top noRightClick twitterSection" data="
">Remarkable team effort by Pakistan! Rauf's exceptional bowling, with figures of 4/19, set the stage by limiting the Tigers to a modest total of 193. In response, Imam and Rizwan's 50s ensured a confident chase, resulting in a promising 7-wicket win. 🇵🇰#AsiaCup2023 #PAKvBAN pic.twitter.com/fuehIGRKBG
— AsianCricketCouncil (@ACCMedia1) September 6, 2023Remarkable team effort by Pakistan! Rauf's exceptional bowling, with figures of 4/19, set the stage by limiting the Tigers to a modest total of 193. In response, Imam and Rizwan's 50s ensured a confident chase, resulting in a promising 7-wicket win. 🇵🇰#AsiaCup2023 #PAKvBAN pic.twitter.com/fuehIGRKBG
— AsianCricketCouncil (@ACCMedia1) September 6, 2023
ನಂತರ ಬಂದ ಮಹಮ್ಮದ್ ರಿಜ್ವಾನ್ ಇನ್ನೊಬ್ಬ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ಜೊತೆಗೆ 85 ರನ್ನ ಜೊತೆಯಾಟ ಮಾಡಿದರು. ಈ ಇಬ್ಬರು ಅನುಭವಿ ಬ್ಯಾಟರ್ಗಳು ಬಾಂಗ್ಲಾ ಬೌಲರ್ಗಳನ್ನು ತಾಳ್ಮೆಯಿಂದ ಎದುರಿಸಿ ವಿಕೆಟ್ ಕಾಯ್ದರು. ಸಿಕ್ಕ ಅವಕಾಶಗಳಲ್ಲಿ ಉಲ್ ಹಕ್ 5 ಬೌಂಡರಿ ಮತ್ತು 4 ಸಿಕ್ಸ್ ಗಳಸಿ ಅರ್ಧಶತಕವನ್ನು ದಾಖಲಿಸಿದರು. ಈ ಇಬ್ಬರ ಜೋಡಿ ಪಂದ್ಯವನ್ನು ವಿಜಯದತ್ತ ಕೊಂಡೊಯ್ಯುವಂತಿತ್ತು. ಆದರೆ, ಗೆಲುವಿಗೆ 35 ರನ್ ಬೇಕಿದ್ದಾಗ 78 ರನ್ಗಳಸಿ ಶತಕ ಗಳಿಸುವತ್ತ ಹೆಜ್ಜೆ ಹಾಕುತ್ತಿದ್ದ ಉಲ್ ಹಕ್ ವಿಕೆಟ್ ಅನ್ನು ಹಸನ್ ವಿರಾಜ್ ಉರುಳಿಸಿದರು.
ಕೊನೆಯಲ್ಲಿ ಮಹಮ್ಮದ್ ರಿಜ್ವಾನ್ಗೆ ಅಘಾ ಸಲ್ಮಾನ್ ಸಾಥ್ ನೀಡಿ ತಂಡವನ್ನು ಗೆಲುವಿನತ್ತ ತೆಗೆದುಕೊಂಡು ಹೋದರು. ಮೊಹಮ್ಮದ್ ರಿಜ್ವಾನ್ 79 ಬಾಲ್ ಎದುರಿಸಿ 7 ಬೌಂಡರಿ ಮತ್ತು 1 ಸಿಕ್ಸ್ನಿಂದ 63 ರನ್ ಕಲೆಹಾಕಿ ಅಜೇಯರಾಗಿ ಉಳಿದರು. ಅಘಾ ಸಲ್ಮಾನ್ 12 ರನ್ ಗಳಿಸಿ ಔಟಾಗದೇ ಉಳಿದರು. 10.3 ಓವರ್ ಉಳಸಿಕೊಂಡು ಪಾಕಿಸ್ತಾನ ಜಯ ಸಾಧಿಸಿತು. ಬೃಹತ್ ಜಯ ದಾಖಲಿಸಿದ ಪಾಕ್ ಅಂಕಪಟ್ಟಿಯಲ್ಲಿ +1.051 ರನ್ರೇಟ್ನೊಂದಿಗೆ ಅಗ್ರಸ್ಥಾನಕ್ಕೇರಿದೆ.
-
Another scorching day at the office for Haris Rauf 🔥#AsiaCup2023 #PAKvBAN pic.twitter.com/gQS8T5y1rG
— AsianCricketCouncil (@ACCMedia1) September 6, 2023 " class="align-text-top noRightClick twitterSection" data="
">Another scorching day at the office for Haris Rauf 🔥#AsiaCup2023 #PAKvBAN pic.twitter.com/gQS8T5y1rG
— AsianCricketCouncil (@ACCMedia1) September 6, 2023Another scorching day at the office for Haris Rauf 🔥#AsiaCup2023 #PAKvBAN pic.twitter.com/gQS8T5y1rG
— AsianCricketCouncil (@ACCMedia1) September 6, 2023
ಬಾಂಗ್ಲಾದೇಶ ಪರ ಶೋರಿಫುಲ್ ಇಸ್ಲಾಂ ಉತ್ತಮ ಎಕಾನಮಿಯಲ್ಲಿ ಬೌಲಿಂಗ್ ಮಾಡಿದರು. 8 ಓವರ್ ಮಾಡಿದ ಇಸ್ಲಾಂ 24 ರನ್ ಕೊಟ್ಟು 1 ವಿಕೆಟ್ ಸಹ ಪಡೆದರು. ಇಸ್ಲಾಂ ಜೊತೆಗೆ ತಸ್ಕಿನ್ ಅಹ್ಮದ್ ಮತ್ತು ಮೆಹಿದಿ ಹಸನ್ ಮಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು ಸೂಪರ್ ಫೋರ್ನ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಸೆಪ್ಟೆಂಬರ್ 9 ರಂದು ಶ್ರೀಲಂಕಾ - ಬಾಂಗ್ಲಾ ಮುಖಾಮುಖಿ ಆದರೆ, 10ರಂದು ಭಾರತ - ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಇದನ್ನೂ ಓದಿ: ಏಷ್ಯಾಕಪ್: ಹ್ಯಾರಿಸ್ ರೌಫ್, ನಸೀಮ್ ಶಾ ಬೌಲಿಂಗ್ ನಲುಗಿದ ಬಾಂಗ್ಲಾ.. ಪಾಕ್ಗೆ 194 ರನ್ಗಳ ಸುಲಭ ಗುರಿ