ಕೊಲಂಬೊ (ಶ್ರೀಲಂಕಾ): ನಿನ್ನೆ ಪಾಕಿಸ್ತಾನದ ವಿರುದ್ಧ ಜಯಭೇರಿ ಬಾರಿಸಿದ ಭಾರತಕ್ಕೆ ಇಂದು ಆತಿಥೇಯ ಶ್ರೀಲಂಕಾ ಸವಾಲು ಒಡ್ಡುತ್ತಿದೆ. ಲಂಕಾ ವಿರುದ್ಧ ಟಾಸ್ ಗೆದ್ದ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದ್ದಾರೆ. ಭಾರತ ತಂಡದಲ್ಲಿ ಒಂದು ಆಗಿದ್ದು, ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಅವರನ್ನು ಕೈಬಿಟ್ಟು ಅವರ ಬದಲಿಯಾಗಿ ಸ್ಪಿನ್ನರ್ ಅಕ್ಷರ್ ಪಟೇಲ್ಗೆ ಸ್ಥಾನ ಕೊಡಲಾಗಿದೆ.
ಪಾಕಿಸ್ತಾನದ ವಿರುದ್ಧ ಮೀಸಲು ದಿನವಾದ ನಿನ್ನೆ (ಸೋಮವಾರ) ಭಾರತ ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿತ್ತು. ಭಾರತ ನೀಡಿದ್ದ 357 ರನ್ ಗುರಿ ಬೆನ್ನು ಹತ್ತಿದ್ದ ಪಾಕಿಸ್ತಾನ 128 ರನ್ಗಳಿಗೆ ಸರ್ವ ಪತನ ಕಂಡಿತ್ತು. ಇದರಿಂದ ಭಾರತ 228 ರನ್ನ ಬೃಹತ್ ಗೆಲುವನ್ನು ಪಾಕಿಸ್ತಾನದ ವಿರುದ್ಧ ಸಾಧಿಸಿತ್ತು. ಈ ಪಂದ್ಯದಲ್ಲಿ ಕುಲದೀಪ್ ಯಾದವ್ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದ್ದು, 5 ವಿಕೆಟ್ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದರು .
-
🚨 Toss Update from Colombo 🚨
— BCCI (@BCCI) September 12, 2023 ." class="align-text-top noRightClick twitterSection" data="
Captain @ImRo45 has won the toss & #TeamIndia have elected to bat against Sri Lanka.
Follow the match ▶️ https://t.co/P0ylBAiETu#AsiaCup2023 | #INDvSL pic.twitter.com/c68P06Eaw3
.">🚨 Toss Update from Colombo 🚨
— BCCI (@BCCI) September 12, 2023
Captain @ImRo45 has won the toss & #TeamIndia have elected to bat against Sri Lanka.
Follow the match ▶️ https://t.co/P0ylBAiETu#AsiaCup2023 | #INDvSL pic.twitter.com/c68P06Eaw3
.🚨 Toss Update from Colombo 🚨
— BCCI (@BCCI) September 12, 2023
Captain @ImRo45 has won the toss & #TeamIndia have elected to bat against Sri Lanka.
Follow the match ▶️ https://t.co/P0ylBAiETu#AsiaCup2023 | #INDvSL pic.twitter.com/c68P06Eaw3
ಏಷ್ಯಾಕಪ್ನ ಲೀಗ್ ಮತ್ತು ಸೂಪರ್ ಫೋರ್ ಹಂತದಲ್ಲಿ ಮೂರು ಪಂದ್ಯಗಳನ್ನು ಆಡಿರುವ ಶ್ರೀಲಂಕಾ ಎಲ್ಲವನ್ನೂ ಗೆದ್ದುಕೊಂಡಿದೆ. ಅದಲ್ಲದೇ ಲಂಕಾಗೆ ತವರು ಮೈದಾನ ಎಂಬ ಪ್ಲೆಸ್ ಅಂಶವೂ ಇದೆ. ಈ ಎಲ್ಲ ಧನಾತ್ಮಕ ಅಂಶಗಳೊಂದಿಗೆ ಲಂಕಾ ಇಂದು ಭಾರತವನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಲೆಕ್ಕಾಚಾರದಲ್ಲಿದೆ.
ಮತ್ತೆ ಗಾಯಕ್ಕೆ ತುತ್ತಾದ ಅಯ್ಯರ್: ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯಲ್ಲಿ ಚೇತರಿಸಿಕೊಂಡ ನಂತರ ಏಷ್ಯಾಕಪ್ ಆಯ್ಕೆ ಆಗಿದ್ದ ಶ್ರೇಯಸ್ ಅಯ್ಯರ್ ಮತ್ತೆ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. "ಶ್ರೇಯಸ್ ಅಯ್ಯರ್ ಅವರು ಉತ್ತಮವಾಗಿದ್ದಾರೆ. ಆದರೆ, ಬೆನ್ನು ಸೆಳೆತದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರಿಗೆ ಬಿಸಿಸಿಐ ವೈದ್ಯಕೀಯ ತಂಡವು ವಿಶ್ರಾಂತಿಗೆ ಸಲಹೆ ನೀಡಿದೆ. ತಂಡದೊಂದಿಗೆ ಇಂದು ಶ್ರೀಲಂಕಾ ವಿರುದ್ಧ ಭಾರತದ ಸೂಪರ್ 4 ಪಂದ್ಯಕ್ಕೆ ಪ್ರಯಾಣಿಸಿಲ್ಲ" ಎಂದು ಬಿಸಿಸಿಯ ಸ್ಪಷ್ಟನೆ ನೀಡಿದೆ.
-
🚨 Team News 🚨
— BCCI (@BCCI) September 12, 2023 " class="align-text-top noRightClick twitterSection" data="
1⃣ change for #TeamIndia as Axar Patel is named in the team in place of Shardul Thakur.
A look at our Playing XI 🔽
Follow the match ▶️ https://t.co/P0ylBAiETu #AsiaCup2023 | #INDvSL pic.twitter.com/gLNXpW0rjN
">🚨 Team News 🚨
— BCCI (@BCCI) September 12, 2023
1⃣ change for #TeamIndia as Axar Patel is named in the team in place of Shardul Thakur.
A look at our Playing XI 🔽
Follow the match ▶️ https://t.co/P0ylBAiETu #AsiaCup2023 | #INDvSL pic.twitter.com/gLNXpW0rjN🚨 Team News 🚨
— BCCI (@BCCI) September 12, 2023
1⃣ change for #TeamIndia as Axar Patel is named in the team in place of Shardul Thakur.
A look at our Playing XI 🔽
Follow the match ▶️ https://t.co/P0ylBAiETu #AsiaCup2023 | #INDvSL pic.twitter.com/gLNXpW0rjN
ತಂಡಗಳು ಇಂತಿವೆ..: ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷ್ಣ, ಕಸುನ್ ರಜಿತ, ಮತೀಶ ಪತಿರಣ
ಇದನ್ನೂ ಓದಿ: ಕೊನೆ ಘಳಿಗೆಯಲ್ಲಿ ತಂಡ ಸೇರಿ 'ವಿರಾಟ್' ಪ್ರದರ್ಶನ ನೀಡಿದ ಕೆ.ಎಲ್.ರಾಹುಲ್; ರೋಹಿತ್ ಶರ್ಮಾ ಮೆಚ್ಚುಗೆ