ಕೊಲಂಬೊ (ಶ್ರೀಲಂಕಾ): ಪಾಕಿಸ್ತಾನದ ವಿರುದ್ಧ ಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ನಿನ್ನೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 356 ರನ್ ಕಲೆಹಾಕಿತ್ತು. ಆದರೆ, ಇಂದು ಅದೇ ಮೈದಾನದಲ್ಲಿ ಶ್ರೀಲಂಕಾದ ದುನಿತ್ ವೆಲ್ಲಲಾಗೆ ಮತ್ತು ಚರಿತ್ ಅಸಲಂಕಾ ಬೌಲಿಂಗ್ನಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ ಕಂಡಿತು. ನಾಯಕ ರೋಹಿತ್ ಶರ್ಮಾ ಅರ್ಧಶತಕ ಬಿಟ್ಟರೆ ಮತ್ಯಾವ ಬ್ಯಾಟರ್ ಹೇಳಿಕೊಳ್ಳುವಂತ ಸ್ಕೋರ್ ಕಲೆಹಾಕಲಿಲ್ಲ. ಇದರಿಂದ ಭಾರತ 49.1 ಓವರ್ಗೆ 213 ರನ್ಗಳಿಗೆ ಸರ್ವಪತನ ಕಂಡಿತು. ಶ್ರೀಲಂಕಾ ಗೆಲ್ಲಲು 214 ರನ್ಗಳನ್ನು ಬಾರಿಸಬೇಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಮೈದಾನಕ್ಕಿಳಿದ ಭಾರತ ತಂಡ ಮೊದಲ ಪವರ್ ಪ್ಲೇ ಅವಧಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿತು. ಆರಂಭಿಕ ಯುವ ಬ್ಯಾಟರ್ ಶುಭಮನ್ ಗಿಲ್ ರನ್ಗಳಿಸಲು ಪರದಾಡಿದರು. ಆದರೆ, ನಾಯಕ ರೋಹಿತ್ ಶರ್ಮಾ ತಮ್ಮ ಸಾಮಾನ್ಯ ಆಟ ವಾಡಿದರು. ಇದರಿಂದ ಭಾರತ 10 ಓವರ್ಗೆ ವಿಕೆಟ್ ನಷ್ಟವಿಲ್ಲದೇ 65 ರನ್ ಗಳಸಿ ದೊಡ್ಡ ಮೊತ್ತಗಳಿಸುವ ಸಂದೇಶ ನೀಡಿತ್ತು. ಆದರೆ, ಎಲ್ಲಾ ಲೆಕ್ಕಾಚಾರವನ್ನು ಲಂಕಾದ ಸ್ಪಿನ್ನರ್ಗಳು ಬುಡಮೇಲು ಮಾಡಿದರು ಎಂದರೆ ತಪ್ಪಾಗದು.
-
Innings Break!#TeamIndia post 213 on the board.
— BCCI (@BCCI) September 12, 2023 " class="align-text-top noRightClick twitterSection" data="
Over to our bowlers now, second innings coming up shortly! ⌛️
Scorecard ▶️ https://t.co/P0ylBAiETu#AsiaCup2023 | #INDvSL pic.twitter.com/5b08DhVQAD
">Innings Break!#TeamIndia post 213 on the board.
— BCCI (@BCCI) September 12, 2023
Over to our bowlers now, second innings coming up shortly! ⌛️
Scorecard ▶️ https://t.co/P0ylBAiETu#AsiaCup2023 | #INDvSL pic.twitter.com/5b08DhVQADInnings Break!#TeamIndia post 213 on the board.
— BCCI (@BCCI) September 12, 2023
Over to our bowlers now, second innings coming up shortly! ⌛️
Scorecard ▶️ https://t.co/P0ylBAiETu#AsiaCup2023 | #INDvSL pic.twitter.com/5b08DhVQAD
ಪವರ್ ಪ್ಲೇ ಮುಗಿಯುತ್ತಿದ್ದಂತೆ ದಾಳಿಗೆ ಇಳಿದ ಲಂಕಾ ಸ್ಪಿನ್ನರ್ ದುನಿತ್ ವೆಲ್ಲಲಾಗೆ ಅತ್ಯದ್ಬುತ ಸ್ಪಿನ್ ದಾಳಿ ನಡೆಸಿದರು. ವೆಲ್ಲಲಾಗೆಯ ಸ್ಪಿನ್ಗೆ ಭಾರತದ ಅಗ್ರ ಕ್ರಮಾಂಕ ಇದ್ದಕ್ಕಿದ್ದಂತೆ ಕುಸಿಯಿತು. 12,14, 16ನೇ ಓವರ್ನಲ್ಲಿ ವೆಲ್ಲಲಾಗೆಗೆ ಕ್ರಮವಾಗಿ ಗಿಲ್, ವಿರಾಟ್, ರೋಹಿತ್ ವಿಕೆಟ್ ಒಪ್ಪಿಸಿದರು. ಪಾಕ್ ವಿರುದ್ಧ ಅರ್ಧಶತಕ ಗಳಿಸಿದ್ದ ಗಿಲ್ ಇಂದು 25 ಬಾಲ್ನಲ್ಲಿ 19 ರನ್ ಗಳಿಸಿ ಪೆವಿಲಿಯನ್ಗೆ ತೆರಳಿದರು. ನಿನ್ನೆ ಶತಕ ಸಿಡಿಸಿದ್ದ ವಿರಾಟ್ ಇಂದು 12ಗೆ 3 ರನ್ ಗಳಿಸಿ ವಿಕೆಟ್ ಕೊಟ್ಟರು. ನಾಯಕ ರೋಹಿತ್ ಶರ್ಮಾ 48 ಬಾಲ್ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸ್ನಿಂದ 53 ಗಳಸಿ ಔಟ್ ಆದರು.
ನಾಲ್ಕನೇ ಬ್ಯಾಟರ್ ಆಗಿ ರಾಹುಲ್ ಬದಲು ಇಶಾನ್ ಕಿಶನ್ ಬಡ್ತಿ ಪಡೆದು ಮೈದಾನಕ್ಕಿಳಿದರು, ಐದನೇ ಸ್ಥಾನದಲ್ಲಿ ರಾಹುಲ್ ಬಂದರು. ಈ ಜೋಡಿ 4ನೇ ವಿಕೆಟ್ಗೆ 50 ರನ್ನ ಜೊತೆಯಾಟ ಮಾಡಿ ಭರವಸೆ ಮೂಡಿಸಿತ್ತು. ನಿನ್ನೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿ ಟೀಮ್ ಇಂಡಿಯಾಗೆ ಗ್ರೇಟ್ ಕಮ್ಬ್ಯಾಕ್ ಮಾಡಿದ್ದ ಕೆಎಲ್ ರಾಹುಲ್ 44 ಬಾಲ್ನಲ್ಲಿ 4 ಬೌಂಡರಿಯ ಸಹಾಯದಿಂದ 39 ರನ್ ಗಳಿಸಿ ಆಡುತ್ತಿದ್ದ ವೇಳೆ ದುನಿತ್ ವೆಲ್ಲಲಾಗೆ ನಾಲ್ಕನೇ ವಿಕೆಟ್ ಆಗಿ ಬಲಿಯಾದರು. ಅವರ ಬೆನ್ನಲ್ಲೇ 33 ರನ್ ಗಳಿಸಿದ್ದ ಇಶಾನ್ ಕಿಶನ್ ಸಹ ವಿಕೆಟ್ ಒಪ್ಪಿಸಿದರು.
-
Youngster Dunith Wellalage achieved a remarkable feat as he secured his maiden 5-wicket haul, single-handedly dismantling a formidable Indian batting lineup. His bowling performance was nothing short of incredible! 🇱🇰😍#AsiaCup2023 #INDvSL pic.twitter.com/P4TCzb7p7y
— AsianCricketCouncil (@ACCMedia1) September 12, 2023 " class="align-text-top noRightClick twitterSection" data="
">Youngster Dunith Wellalage achieved a remarkable feat as he secured his maiden 5-wicket haul, single-handedly dismantling a formidable Indian batting lineup. His bowling performance was nothing short of incredible! 🇱🇰😍#AsiaCup2023 #INDvSL pic.twitter.com/P4TCzb7p7y
— AsianCricketCouncil (@ACCMedia1) September 12, 2023Youngster Dunith Wellalage achieved a remarkable feat as he secured his maiden 5-wicket haul, single-handedly dismantling a formidable Indian batting lineup. His bowling performance was nothing short of incredible! 🇱🇰😍#AsiaCup2023 #INDvSL pic.twitter.com/P4TCzb7p7y
— AsianCricketCouncil (@ACCMedia1) September 12, 2023
8ನೇ ಸ್ಥಾನದ ವರೆಗೆ ಬ್ಯಾಟಿಂಗ್ ಬಲವನ್ನು ಭಾರತ ತಂಡದಲ್ಲಿ ಹೆಚ್ಚಿಸಿದರೂ ಕೆಳ ಕ್ರಮಾಂಕದಿಂದಲೂ ನೀರಸ ಬ್ಯಾಟಿಂಗ್ ಪ್ರದರ್ಶನ ಕಂಡು ಬಂತು. ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತು ಜಡೇಜಾ ಉತ್ತಮವಾಗಿ ಹೋರಾಡಲು ಪ್ರಯತ್ನಿಸಿದರಾದರೂ ಸ್ಕೋರ್ ಮಾಡಲಾಗಲಿಲ್ಲ. ಹಾರ್ದಿಕ್ ವೆಲ್ಲಲಾಗೆಗೆ ಐದನೇ ವಿಕೆಟ್ ಆಗಿ ಪೆವಿಲಿಯನ್ ದಾರಿ ಹಿಡಿದರು. ಜಡೇಜಾ ಅಸಲಂಕಾಗೆ ವಿಕೆಟ್ ನೀಡಿದರು.
ನಂತರ ಕಣಕ್ಕಿಳಿದ ಬುಮ್ರಾ ಮತ್ತು ಕುಲ್ದೀಪ್ ವಿಕೆಟ್ಗಳನ್ನು ಅಸಲಂಕಾ ಪಡೆದು ಸಂಭ್ರಮಿಸಿದರು. ಕೊನೆಯ ವರೆಗೂ ಅಕ್ಷರ್ ಪಟೇಲ್ ತಮ್ಮ ಹೋರಾಟನ್ನು ತೋರಿಸಿದರು. ಕೊನೆಯ ಓವರ್ನಲ್ಲಿ ಅಕ್ಷರ್ ರನ್ ಗಳಿಸುವ ಪ್ರಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ಅಂತಿಮ ಓವರ್ಗಳಲ್ಲಿ ಅಕ್ಷರ್ ಪಟೇಲ್ 36 ಬಾಲ್ ಎದುರಿಸಿ 1 ಸಿಕ್ಸ್ನಿಂದ 25 ರನ್ ಕಲೆಹಾಕಿ ಔಟ್ ಆದರು.
ಲಂಕಾ ಪರ ದುನಿತ್ ವೆಲ್ಲಲಾಗೆ 5, ಚರಿತ್ ಅಸಲಂಕಾ 4 ಹಾಗೂ ತೀಕ್ಷ್ಣ 1 ವಿಕೆಟ್ ಪಡೆದರು. ಭಾರತದ 10 ವಿಕೆಟ್ನ್ನು ಲಂಕಾದ ಸ್ಪಿನ್ನರ್ಗಳು ತಮ್ಮ ಬುಟ್ಟಿಗೆ ಹಾಕಿಕೊಂಡರು.
ಇದನ್ನೂ ಓದಿ: IND vs SL: ಟಾಸ್ ಗೆದ್ದ ರೋಹಿತ್ ಬ್ಯಾಟಿಂಗ್ ಆಯ್ಕೆ.. ಅಖಾಡದಲ್ಲಿ ತ್ರಿವಳಿ ಸ್ಪಿನ್ನರ್ಗಳು