ಕೊಲಂಬೊ (ಶ್ರೀಲಂಕ): ಏಷ್ಯಾಕಪ್ ಫೈನಲ್ನಲ್ಲಿ ಲಂಕಾವನ್ನು ಭಾರತ ಮಣಿಸಿದ್ದು, 2018ರ ನಂತರ ಮತ್ತೆ ಏಷ್ಯಾಕಪ್ನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಮೂಲಕ ಏಷ್ಯಾಕಪ್ ಟ್ರೋಫಿಯನ್ನು ಎಂಟನೇ ಬಾರಿಗೆ ಜಯಿಸಿದೆ. ಲಂಕಾ ಕೊಟ್ಟ 51 ರನ್ನ ಸಂಕ್ಷಿಪ್ತ ಗುರಿಯನ್ನು 6.1 ಓವರ್ನಲ್ಲಿ ವಿಕೆಟ್ ನಷ್ಟವಿಲ್ಲದೇ ಸಾಧಿಸಿದೆ.
ಸಣ್ಣ ಮೊತ್ತವನ್ನು ಸಾಧಿಸಲು ಯುವ ಬ್ಯಾಟರ್ಗಳಾ ದ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಮೈದಾನಕ್ಕಿಳಿದರು. ಫಾರ್ಮ್ನಲ್ಲಿರುವ ಇಬ್ಬರು ಆಟಗಾರರು ತಮ್ಮ ಶೈಲಿಯ ಆಟವನ್ನು ಮುಂದುವರೆಸಿದರು. 19 ಬಾಲ್ ಎದುರಿಸಿದ ಗಿಲ್ 6 ಬೌಂಡರಿಯ ಸಹಾಯದಿಂದ 27 ರನ್ ಕಲೆಹಾಕಿದರೆ, 3 ಬೌಂಡರಿಯಿಂದ ಕಿಶನ್ 23 ರನ್ ಸೇರಿಸಿದರು. ಇದರಿಂದ ಭಾರತ ವಿಕೆಟ್ ನಷ್ಟವಿಲ್ಲದೆ ಗುರಿಯನ್ನು ತಲುಪಿತು.
-
7th time’s the charm! Team India secures their record 7th ODI Asia Cup title! 🇮🇳💙#AsiaCup2023 pic.twitter.com/5oGDD5U5pC
— AsianCricketCouncil (@ACCMedia1) September 17, 2023 " class="align-text-top noRightClick twitterSection" data="
">7th time’s the charm! Team India secures their record 7th ODI Asia Cup title! 🇮🇳💙#AsiaCup2023 pic.twitter.com/5oGDD5U5pC
— AsianCricketCouncil (@ACCMedia1) September 17, 20237th time’s the charm! Team India secures their record 7th ODI Asia Cup title! 🇮🇳💙#AsiaCup2023 pic.twitter.com/5oGDD5U5pC
— AsianCricketCouncil (@ACCMedia1) September 17, 2023
22 ಓವರ್ಗೆ ಪಂದ್ಯ ಅಂತ್ಯ: 100 ಓವರ್ಗಳ ಪಂದ್ಯ ಕೇವಲ 22 ಓವರ್ಗಳಿಂದ ಮುಕ್ತಾಯವಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತ ವೇಗದ ಬೌಲಿಂಗ್ ದಾಳಿಗೆ ಲಂಕಾದ ಬ್ಯಾಟರ್ಗಳು ಒಂದಂಕಿಗೆ ಹೆಚ್ಚಿನವರು ವಿಕೆಟ್ ಒಪ್ಪಿಸಿದರು.
ಮೊದಲ ಓವರ್ನಲ್ಲಿ ಜಸ್ಪ್ರೀತ್ ಬುಮ್ರಾ, ಕುಸಲ್ ಪೆರೆರಾ (0) ವಿಕೆಟ್ ಉರುಳಿಸಿದರು. ನಂತರ ನಾಲ್ಕನೇ ಓವರ್ನ 1, 3, 4, 6ನೇ ಬಾಲ್ ಮತ್ತು 6ನೇ ಓವರ್ನ 4ನೇ ಬಾಲ್ ಹಾಗೇ 11ನೇ ಓವರ್ನ 2ನೇ ಬಾಲ್ನಲ್ಲಿ ಸಿರಾಜ್ ಕ್ರಮವಾಗಿ ಪಾತುಮ್ ನಿಸ್ಸಾಂಕ (2), ಸದೀರ ಸಮರವಿಕ್ರಮ (0), ಚರಿತ್ ಅಸಲಂಕಾ (0), ಧನಂಜಯ ಡಿ ಸಿಲ್ವಾ (4), ದಸುನ್ ಶನಕ (0) ಮತ್ತು ಕುಸಲ್ ಮೆಂಡಿಸ್ (17) ವಿಕೆಟ್ ಪಡೆದರು.
-
𝘾𝙃𝘼𝙈𝙋𝙄𝙊𝙉𝙎 🏆
— ICC (@ICC) September 17, 2023 " class="align-text-top noRightClick twitterSection" data="
India storm to victory in the #AsiaCup2023 Final against Sri Lanka 🔥
📝: https://t.co/UROMhx0HTs pic.twitter.com/X4OOrGDJ6H
">𝘾𝙃𝘼𝙈𝙋𝙄𝙊𝙉𝙎 🏆
— ICC (@ICC) September 17, 2023
India storm to victory in the #AsiaCup2023 Final against Sri Lanka 🔥
📝: https://t.co/UROMhx0HTs pic.twitter.com/X4OOrGDJ6H𝘾𝙃𝘼𝙈𝙋𝙄𝙊𝙉𝙎 🏆
— ICC (@ICC) September 17, 2023
India storm to victory in the #AsiaCup2023 Final against Sri Lanka 🔥
📝: https://t.co/UROMhx0HTs pic.twitter.com/X4OOrGDJ6H
ನಂತರ ಹಾರ್ದಿಕ್ ಪಾಂಡ್ಯ 13 ಮತ್ತು 16ನೇ ಓವರ್ನಲ್ಲಿ ಮೂರು ವಿಕೆಟ್ ಪಡೆದರು. 12.3 ಓವರ್ನಲ್ಲಿ ದುನಿತ್ ವೆಲ್ಲಲಾಗೆ 8 ರನ್ಗೆ ಔಟ್ ಆದರು. 15.1 ಮತ್ತು 15.2 ಬಾಲ್ನಲ್ಲಿ ಬಾಲಂಗೋಚಿಗಳಾದ ಪ್ರಮೋದ್ ಮದುಶನ್, ಮತೀಶ ಪತಿರಾನ ವಿಕೆಟ್ ಕೊಟ್ಟರು. ಹೀಗಾಗಿ ಲಂಕಾ 15.2 ಓವರ್ನಲ್ಲಿ 50 ರನ್ ಗಳಿಸಿ ಆಲ್ಔಟ್ಗೆ ಶರಣಾಯಿತು.
-
𝙒𝙃𝘼𝙏. 𝘼. 𝙒𝙄𝙉! 😎
— BCCI (@BCCI) September 17, 2023 " class="align-text-top noRightClick twitterSection" data="
A clinical show in the summit clash! 👌👌
A resounding 10-wicket win to clinch the #AsiaCup2023 title 👏👏
Well done, #TeamIndia! 🇮🇳#INDvSL pic.twitter.com/M9HnJcVOGR
">𝙒𝙃𝘼𝙏. 𝘼. 𝙒𝙄𝙉! 😎
— BCCI (@BCCI) September 17, 2023
A clinical show in the summit clash! 👌👌
A resounding 10-wicket win to clinch the #AsiaCup2023 title 👏👏
Well done, #TeamIndia! 🇮🇳#INDvSL pic.twitter.com/M9HnJcVOGR𝙒𝙃𝘼𝙏. 𝘼. 𝙒𝙄𝙉! 😎
— BCCI (@BCCI) September 17, 2023
A clinical show in the summit clash! 👌👌
A resounding 10-wicket win to clinch the #AsiaCup2023 title 👏👏
Well done, #TeamIndia! 🇮🇳#INDvSL pic.twitter.com/M9HnJcVOGR
ಭಾರತದ ಇನ್ನಿಂಗ್ಸ್ನಲ್ಲಿ ನಿರ್ಮಾಣವಾದ ದಾಖಲೆಗಳು:
- ಫೈನಲ್ ಪಂದ್ಯದಲ್ಲಿ ಎರಡನೇ ಬಾರಿಗೆ ಭಾರತ ತಂಡ 10 ವಿಕೆಟ್ಗಳ ಗೆಲುವು ದಾಖಲಿಸಿದೆ. 1998 ರಲ್ಲಿ ಲಂಕಾ, ಭಾರತ ಮತ್ತು ಜಿಂಬಾಬ್ವೆ ನಡುವಿನ ತ್ರಿಕೋನ ಸರಣಿಯ ಫೈನಲ್ನಲ್ಲಿ ಭಾರತ 197 ರನ್ನ ಗುರಿಯನ್ನು ಶೂನ್ಯ ವಿಕೆಟ್ ನಷ್ಟದಲ್ಲಿ ಸಾಧಿಸಿತ್ತು. 2002 -03 ರಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಇಂಗ್ಲೆಂಡ್ ನಡುವಿನ ತ್ರಿಕೋನ ಸರಣಿ ಆಸಿಸ್ನಲ್ಲಿ ನಡೆದಿತ್ತು. ಇದರ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಕೊಟ್ಟಿದ್ದ 118 ರನ್ನ ಗುರಿಯನ್ನು ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೇ ಸಾಧಿಸಿತ್ತು.
- ಭಾರತ ತಂಡ ಈ ಫೈನಲ್ ಪಂದ್ಯವನ್ನು 263 ಬಾಲ್ಗಳನ್ನು ಉಳಿಸಿಜಕೊಂಡು ಗೆದ್ದಿದೆ. ಇದು ಭಾರತದ ಮಟ್ಟಿಗೆ ಹೆಚ್ಚು ಬಾಲ್ ಉಳಿಸಿಕೊಂಡು ಗೆದ್ದ ಮೊದಲ ಪಂದ್ಯವಾಗಿದೆ.
- ಏಕದಿನ ಮಾದರಿಯ ಫೈನಲ್ನಲ್ಲಿ 2002 -03 ರಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಇಂಗ್ಲೆಂಡ್ ನಡುವಿನ ತ್ರಿಕೋನ ಸರಣಿಯಲ್ಲಿ ಆಸಿಸ್ 226 ಬಾಲ್ ಉಳಿಸಿ ಗೆದ್ದಿರುವುದು ಎರಡನೇ ದಾಖಲೆ ಆಗಿದೆ.
ಇದನ್ನೂ ಓದಿ: Asia Cup Final: ಸಿರಾಜ್ ಬೌಲಿಂಗ್ ದಾಳಿಗೆ ಲಂಕಾ ತತ್ತರ.. 15 ಓವರ್ನಲ್ಲಿ, ಕೇವಲ 50 ರನ್ ಗಳಿಸಿ ಸಿಂಹಳೀಯರು ಆಲ್ಔಟ್