ಕೊಲಂಬೊ (ಶ್ರೀಲಂಕಾ): ನಾಯಕ ಶಕೀಬ್ ಅಲ್ ಹಸನ್ ಮತ್ತು ತೌಹೀದ್ ಹೃದಯೋಯ್ ಅವರ ಅರ್ಧಶತಕದ ನೆರವಿನಿಂದ ಭಾರತದ ವಿರುದ್ಧ ಬಾಂಗ್ಲಾದೇಶ ನಿಗದಿತ 50 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 265 ರನ್ ಕಲೆಹಾಕಿತು. 3 ಮತ್ತು 4ನೇ ಸ್ಥಾನದಲ್ಲಿ ಪ್ರಮುಖ ಬದಲಾವಣೆ ಮಾಡಿಕೊಂಡಿರುವ ಭಾರತ ತಂಡ 266 ರನ್ ಗುರಿ ಬೆನ್ನತ್ತಬೇಕಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ ಈಗಾಗಲೇ ಫೈನಲ್‌ಗೇರಿದ್ದು, ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಐದು ಬದಲಾವಣೆಯೊಂದಿಗೆ ಮೈದಾನಕ್ಕಿಳಿದಿದೆ. ಬೌಲಿಂಗ್ನಲ್ಲಿಂದು ತಂಡ ಸಾಧಾರಣ ಪ್ರದರ್ಶನ ನೀಡಿತು. ಬಾಂಗ್ಲಾ ಮೇಲೆ ಆರಂಭಿಕ ಓವರ್ಗಳಲ್ಲಿ ಯಶ ಕಂಡ ಬೌಲರ್ಗಳು ನಂತರ ಕೊಂಚ ಮಂಕಾದರು. ಮಧ್ಯಮ ಕ್ರಮಾಂಕದಲ್ಲಿ ಬಾಂಗ್ಲಾ ನಾಯಕ ಶಕೀಬ್ ಮತ್ತು ಹೃದಯೋಯ್ ಉತ್ತಮ ಜೊತೆಯಾಟ ನೀಡಿದರು.
-
Innings Break!
— BCCI (@BCCI) September 15, 2023 " class="align-text-top noRightClick twitterSection" data="
Bangladesh post a total of 265/8 on the board.
Shardul Thakur was the pick of the bowlers with three wickets to his name.
Scorecard - https://t.co/Qi56Y95GFN… #INDvBAN pic.twitter.com/XRiCoWIqZR
">Innings Break!
— BCCI (@BCCI) September 15, 2023
Bangladesh post a total of 265/8 on the board.
Shardul Thakur was the pick of the bowlers with three wickets to his name.
Scorecard - https://t.co/Qi56Y95GFN… #INDvBAN pic.twitter.com/XRiCoWIqZRInnings Break!
— BCCI (@BCCI) September 15, 2023
Bangladesh post a total of 265/8 on the board.
Shardul Thakur was the pick of the bowlers with three wickets to his name.
Scorecard - https://t.co/Qi56Y95GFN… #INDvBAN pic.twitter.com/XRiCoWIqZR
ಲಿಟ್ಟನ್ ದಾಸ್ ತಾವು ಎದುರಿಸಿದ ಶಮಿ ಅವರ ಎರಡನೇ ಎಸೆತದಲ್ಲಿ ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಆದರು. ಈ ಬೆನ್ನಲ್ಲೇ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡಿರುವ ತಂಝಿದ್ ಹಸನ್ ಸಹ ವಿಕೆಟ್ ಕೊಟ್ಟರು. ಮೂರನೇ ಬ್ಯಾಟರ್ ಅನಾಮುಲ್ ಹಕ್ 6ನೇ ಓವರ್ನಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಬಾಂಗ್ಲಾ 6ನೇ ಓವರ್ ವೇಳೆಗೆ 28 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ನಾಯಕ ಶಕೀಬ್ ಮತ್ತು ಮೆಹಿದಿ ಹಸನ್ ಮಿರಾಜ್ ತಂಡಕ್ಕೆ ಕೊಂಚ ಜೊತೆಯಾಟ ಮಾಡಿದರು. ಆದರೆ ಮಿರಾಜ್ ಹೋರಾಟ ಅಕ್ಷರ್ ಪಟೇಲ್ ಬೌಲಿಂಗ್ ಮುಂದೆ ಹೆಚ್ಚು ಹೊತ್ತು ನಡೆಯಲಿಲ್ಲ.
ಬಾಂಗ್ಲಾ ಪರ ಶಕೀಬ್ ಅಲ್ ಹಸನ್ ಮತ್ತು ತೌಹೀದ್ ಹೃದಯೋಯ್ ಉತ್ತಮ ಕಮ್ಬ್ಯಾಕ್ ಮಾಡಿದರು. ಈ ಜೋಡಿ 4ನೇ ವಿಕೆಟ್ಗೆ 101 ರನ್ ಭರ್ಜರಿ ಜೊತೆಯಾಟವಾಡಿತು. ಇದರಿಂದ 150ರೊಳಗೆ ಸರ್ವಪತನ ಆಗುವ ಸಾಧ್ಯತೆಯಲ್ಲಿದ್ದ ಬಾಂಗ್ಲಾ 250 ಗಡಿ ದಾಟಿತು. ಈ ಇಬ್ಬರು ಬ್ಯಾಟರ್ಗಳಲ್ಲದೇ ಕೆಳ ಕ್ರಮಾಂಕದಲ್ಲಿ ನಸುಮ್ ಅಹ್ಮದ್ ಮತ್ತು ಮಹಿದಿ ಹಸನ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಇವರ ಅಂತಿಮ ಓವರ್‌ಗಳ ಹೋರಾಟಕ್ಕೆ ತಂಡದ ಬಲ ನೀಡಿತು.
-
2⃣0⃣0⃣ ODI wickets for Ravindra Jadeja!
— ICC (@ICC) September 15, 2023 " class="align-text-top noRightClick twitterSection" data="
Becomes only the second Indian after Kapil Dev to complete a double of 2500 runs and 200 wickets in ODIs 🙌#INDvBAN | #AsianCup2023 | https://t.co/INU6UBpXeH pic.twitter.com/OMGhTfDmWa
">2⃣0⃣0⃣ ODI wickets for Ravindra Jadeja!
— ICC (@ICC) September 15, 2023
Becomes only the second Indian after Kapil Dev to complete a double of 2500 runs and 200 wickets in ODIs 🙌#INDvBAN | #AsianCup2023 | https://t.co/INU6UBpXeH pic.twitter.com/OMGhTfDmWa2⃣0⃣0⃣ ODI wickets for Ravindra Jadeja!
— ICC (@ICC) September 15, 2023
Becomes only the second Indian after Kapil Dev to complete a double of 2500 runs and 200 wickets in ODIs 🙌#INDvBAN | #AsianCup2023 | https://t.co/INU6UBpXeH pic.twitter.com/OMGhTfDmWa
200ನೇ ವಿಕೆಟ್ ಪಡೆದ ಜಡೇಜಾ: ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಏಕದಿನ ಕ್ರಿಕೆಟ್ನಲ್ಲಿ 200 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಮೈಲುಗಲ್ಲು ತಲುಪಿದ 7ನೇ ಭಾರತೀಯ ಬೌಲರ್ ಆಗಿದ್ದಾರೆ. ಅಲ್ಲದೇ ಬ್ಯಾಟಿಂಗ್ನಲ್ಲಿ 2,500 ರನ್ ಮತ್ತು 200 ವಿಕೆಟ್ ಗಳಿಸಿದ ಸಾಧನೆ ಮಾಡಿದ ಎರಡನೇ ಆಟಗಾರನೂ ಹೌದು. ಕಪಿಲ್ ದೇವ್ ಈ ದಾಖಲೆಗೈದ ಮೊದಲ ಭಾರತೀಯ ಕ್ರಿಕೆಟಿಗ.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ - 2 ಶಕೀಬ್ ಅಲ್ ಹಸನ್ - 80 (85), ತೌಹಿದ್ ಹೃದಯೋಯ್ - 54 (81), ನಸುಮ್ ಅಹ್ಮದ್ - 44 (45), ಶಾರ್ದೂಲ್ ಠಾಕೂರ್ - 65/3, ಶಮಿ - 32/2.
ಇದನ್ನೂ ಓದಿ: ಏಕದಿನ ವಿಶ್ವಕಪ್ಗೂ ಮುನ್ನ ಪಾಕಿಸ್ತಾನಕ್ಕೆ ಭಾರಿ ಹಿನ್ನಡೆ: ನಂ.1 ಸ್ಥಾನ ಆಸ್ಟ್ರೇಲಿಯಾ ಪಾಲು!