ETV Bharat / sports

AFG vs SL: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಲಂಕಾ.. ಪಂದ್ಯ ಜಯಿಸಿದವರಿಗೆ ಸೂಪರ್​ ಫೋರ್​ನಲ್ಲಿ ಸ್ಥಾನ

author img

By ETV Bharat Karnataka Team

Published : Sep 5, 2023, 2:48 PM IST

Updated : Sep 5, 2023, 3:29 PM IST

ಗುಂಪು ಹಂತ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಮುಖಾಮುಖಿ ಆಗುತ್ತಿದ್ದು, ಟಾಸ್​ ಗೆದ್ದ ಲಂಕಾ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ.

Etv Bharat
Etv Bharat

ಲಾಹೋರ್​(ಪಾಕಿಸ್ತಾನ): ಏಷ್ಯಾಕಪ್​ನ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಮುಖಾಮುಖಿ ಆಗುತ್ತಿದೆ. ಈ ಪಂದ್ಯದ ಫಲಿತಾಂಶದಿಂದ ಬಿ ಗುಂಪಿನಲ್ಲಿ ಯಾರು ಸೂಪರ್​ ಫೋರ್​ಗೆ ಪ್ರವೇಶ ಪಡೆಯುತ್ತಾರೆ ಎಂಬುದು ತಿಳಿದು ಬರಲಿದೆ. ಟಾಸ್​ ಗೆದ್ದ ಶ್ರೀಲಂಕಾ ತಂಡ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಹಿಂದಿನ ಪಂದ್ಯದ ತಂಡದಲ್ಲೇ ಮುಂದುವರೆದಿವೆ.

  • Excitement is in the air as Sri Lanka has won the toss and elected to bat first in this crucial match!
    Can the Afghan bowlers rise to the occasion and contain the Sri Lankan Lions to a modest total? 🫡#AsiaCup2023 #AFGvSL pic.twitter.com/bKeWemkKjY

    — AsianCricketCouncil (@ACCMedia1) September 5, 2023 " class="align-text-top noRightClick twitterSection" data=" ">

ಏಷ್ಯಾಕಪ್​ನ ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತುಅಫ್ಘಾನಿಸ್ತಾನ ಇದೆ. ಬಾಂಗ್ಲಾದೇಶ, ಶ್ರೀಲಂಕಾದ ವಿರುದ್ಧ ಸೋಲು ಕಂಡಿದ್ದು, ಅಫ್ಘಾನಿಸ್ತಾನದ ಮೇಲೆ ಜಯಿಸಿ 2 ಅಂಕಗಳನ್ನು ಪಡೆದುಕೊಂಡಿದೆ. ಶ್ರೀಲಂಕಾ, ಬಾಂಗ್ಲಾದೇಶವನ್ನು ಮಣಿಸಿರುವ ಭರವಸೆಯಲ್ಲೇ ಇಂದು ಮೈದಾನಕ್ಕಿಳಿದೆ. ಇಂದು ಶ್ರೀಲಂಕಾ ಗೆದ್ದಲ್ಲಿ ಅಫ್ಘಾನಿಸ್ತಾನ ಏಷ್ಯಾಕಪ್​ನ ಸೂಪರ್​ ಫೋರ್​ನಿಂದ ಹೊರ ಬೀಳಲಿದೆ. ಅಫ್ಘಾನಿಸ್ತಾನ ಗೆದ್ದಲ್ಲಿ ರನ್​ ರೇಟ್ ಆಧಾರದಲ್ಲಿ ಯಾರು ಸೂಪರ್​ ಫೋರ್​ ಪ್ರವೇಶ ಪಡೆಯುತ್ತಾರೆ ಎಂಬುದು ತಿಳಿದು ಬರಲಿದೆ.

ಏಷ್ಯಾಕಪ್​ಗೂ ಮುನ್ನ ಅಫ್ಘಾನಿಸ್ಥಾನ ಪಾಕಿಸ್ತಾನದ ವಿರುದ್ಧ ಪಂದ್ಯಗಳನ್ನು ಈ ಮೈದಾನದಲ್ಲಿ ಪಂದ್ಯಗಳನ್ನು ಆಡಿತ್ತು. ಹೀಗಾಗಿ ಲಂಕಾಗೆ ಕಠಿಣ ಆಗಲಿದೆ. ಪಾಕಿಸ್ತಾನದ ಪಿಚ್​ಗಳು ಹೆಚ್ಚು ರನ್​ ಗಳಿಸಲು ಸಹಕಾರಿಯಾಗಿರುವುದರಿಂದ ದೊಡ್ಡ ಮೊತ್ತವನ್ನು ಕಲೆಹಾಕುವ ಅಗತ್ಯ ಮೊದಲು ಬ್ಯಾಟ್​ ಮಾಡುತ್ತಿರುವ ಲಂಕಾ ಮೇಲಿದೆ.

ಏಕದಿನ ವಿಶ್ವಕಪ್​ನ ಅರ್ಹತಾ ಪಂದ್ಯದಲ್ಲಿ ಶ್ರೀಲಂಕಾ ತಂಡ ಉತ್ತಮ ಪ್ರದರ್ಶನ ನೀಡಿದೆ. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನವನ್ನು ಸುಲಭವಾಗಿ ಮಣಿಸಬಹುದು ಎಂಬ ಲೆಕ್ಕಾಚಾರವೂ ಇದೆ. ಆದರೆ, ಲಂಕಾ ಏಷ್ಯಾಕಪ್​ ವೇಳೆಗೆ ನಾಲ್ವರು ಪ್ರಮುಖ ಆಟಗಾರರನ್ನು ಗಾಯದ ಕಾರಣಕ್ಕೆ ಕಳೆದುಕೊಂಡಿರುವುದರಿಂದ ತಂಡ ಕೊಂಚ ದುರ್ಬಲವಾಗಿ ಕಾಣುತ್ತಿದೆ.

ಬಿಸಿಸಿಐ ಅಧಿಕಾರಿಗಳಿಂದ ಪಂದ್ಯ ವೀಕ್ಷಣೆ: ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ ಅಧ್ಯಕ್ಷ ರೋಜರ್​ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್​ ಶುಕ್ಲಾ ನಿನ್ನೆ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದರು. ಇಂದು ಮತ್ತು ನಾಳೆ ಲಾಹೋರ್​ನ ಗಢಾಫಿ ಮೈದಾನದಲ್ಲಿ ನಡೆಯಲಿರುವ ಪಂದ್ಯವನ್ನು ವೀಕ್ಷಿಸಲಿದ್ದಾರೆ.

ತಂಡಗಳು ಇಂತಿವೆ.. ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್​ ಕೀಪರ್), ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫರೂಕ್

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಿಕೆಟ್​ ಕೀಪರ್​), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ರಜಿತ, ಮತೀಶ ಪತಿರಣ

ಇದನ್ನೂ ಓದಿ: World Cup 2023: ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ.. ಕೆಎಲ್ ರಾಹುಲ್​ಗೆ ಸ್ಥಾನ

Last Updated : Sep 5, 2023, 3:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.