ದುಬೈ: ಏಷ್ಯಾ ಕಪ್ ಟೂರ್ನಿಯ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ದುಬೈ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯ ಉಭಯ ತಂಡಗಳಿಗೆ ಔಪಚಾರಿಕವಾಗಿದೆ.
ಟೂರ್ನಿಯಿಂದ ಈಗಾಗಲೇ ಆಫ್ಘನ್ ಮತ್ತು ಭಾರತ ಹೊರಬಿದ್ದಿದ್ದು, ಇಲ್ಲಿ ಯಾರೇ ಗೆದ್ದರೂ ಹೆಚ್ಚಿನ ಮಹತ್ವವಿಲ್ಲ. ಸೆಪ್ಟೆಂಬರ್ನಲ್ಲಿ ನಡೆಯುವ ವಿಶ್ವಕಪ್ಗೆ ಪೂರ್ವ ತಯಾರಿ ಎಂಬಂತೆ ಈ ಪಂದ್ಯವನ್ನು ಉಭಯ ತಂಡಗಳು ಪರಿಗಣಿಸಿವೆ.
-
A look at our Playing XI for the game.
— BCCI (@BCCI) September 8, 2022 " class="align-text-top noRightClick twitterSection" data="
Live - https://t.co/QklPCXU2GZ #INDvAFG #AsiaCup2022 pic.twitter.com/QHicRuYneJ
">A look at our Playing XI for the game.
— BCCI (@BCCI) September 8, 2022
Live - https://t.co/QklPCXU2GZ #INDvAFG #AsiaCup2022 pic.twitter.com/QHicRuYneJA look at our Playing XI for the game.
— BCCI (@BCCI) September 8, 2022
Live - https://t.co/QklPCXU2GZ #INDvAFG #AsiaCup2022 pic.twitter.com/QHicRuYneJ
ತಂಡದಲ್ಲಿ ಮೂರು ಬದಲಾವಣೆ: ಆಫ್ಘನ್ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದ್ದು, ಕನ್ನಡಿಗ ಕೆ.ಎಲ್. ರಾಹುಲ್ಗೆ ಕ್ಯಾಪ್ಟನ್ ಹೊಣೆ ನೀಡಲಾಗಿದೆ. ಇದಲ್ಲದೇ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ, ಸ್ಪಿನ್ನರ್ ಯಜುವೇಂದ್ರ ಚಹಲ್ಗೂ ವಿಶ್ರಾಂತಿ ನೀಡಲಾಗಿದ್ದು, ಬೆಂಚ್ ಕಾದಿದ್ದ ದಿನೇಶ್ ಕಾರ್ತಿಕ್, ದೀಪಕ್ ಚಹರ್ಗೆ ಅವಕಾಶ ನೀಡಲಾಗಿದೆ. ವೇಗಿ ದೀಪಕ್ ಚಹರ್, ಅನಾರೋಗ್ಯಕ್ಕೀಡಾದ ಆವೇಶ್ ಖಾನ್ ಟೂರ್ನಿಯಿಂದ ಹೊರಬಿದ್ದ ಕಾರಣ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
ತಂಡಗಳು ಇಂತಿವೆ- ಭಾರತ: ಕೆಎಲ್ ರಾಹುಲ್ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್.
ಅಫ್ಘಾನಿಸ್ತಾನ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಕರೀಮ್ ಜನತ್, ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರಹಮಾನ್, ಫರೀದ್ ಅಹ್ಮದ್ ಮಲಿಕ್, ಫಾರೂಕಿ.
ಓದಿ: ಏಷ್ಯಾ ಕಪ್ ತಂಡದಲ್ಲಿ ವೇಗಿ ಮೊಹಮದ್ ಶಮಿ ಯಾಕಿಲ್ಲ.. ತಂಡದ ಆಯ್ಕೆ ಬಗ್ಗೆ ರವಿಶಾಸ್ತ್ರಿ ಟೀಕೆ