ದುಬೈ(ಯುಎಇ): ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅಫ್ಘಾನಿಸ್ತಾನ ಏಷ್ಯಾಕಪ್ನ ಉದ್ಘಾಟನಾ ಪಂದ್ಯದಲ್ಲಿ 8 ವಿಕೆಟ್ಗಳ ಗೆಲುವು ದಾಖಲು ಮಾಡಿದೆ. ಈ ಮೂಲಕ ಟೂರ್ನಾಮೆಂಟ್ನಲ್ಲಿ ಶುಭಾರಂಭ ಮಾಡಿದ್ದು, ಜಯದ ಖಾತೆ ತೆರೆದಿದೆ. ಹೀನಾಯವಾಗಿ ಸೋತ ಲಂಕಾ ಮುಖಭಂಗಕ್ಕೊಳಗಾಗಿದೆ.
ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ದಾಖಲು ಮಾಡಿರುವ ಅಫ್ಘಾನ್ ಪಡೆ, ಟಿ20 ಟೂರ್ನಿಯಲ್ಲಿ ಸಿಂಹಳೀಯರ ವಿರುದ್ಧ ಚೊಚ್ಚಲ ಗೆಲುವು ದಾಖಲಿಸುವ ಮೂಲಕ ಸಾಧನೆ ಸಹ ಮಾಡಿದೆ.
ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಶ್ರೀಲಂಕಾ ತಂಡ ಅಫ್ಘಾನಿಸ್ತಾನದ ಬೌಲರ್ಗಳ ಎದುರು ಮಂಡಿಯೂರಿತು. ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಲಂಕಾ ಪಡೆ 19. 4ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 105ರನ್ಗಳಿಕೆ ಮಾಡಿತು. ತಂಡದ ಪರ ರಾಜಪಕ್ಸೆ(38ರನ್) ಹಾಗೂ ಚಮೀರಾ (31ರನ್) ವೈಯಕ್ತಿಕ ಗರಿಷ್ಠ ಸ್ಕೋರ್ ಆಯಿತು. ಉಳಿದಂತೆ ತಂಡದ ಆರಂಭಿಕರಾದ ನಿಶಾಂಕ್(3), ಮೆಂಡಿಸ್(2) ಹಾಗೂ ಅಸಲಂಕಾ(0) ನಿರಾಸೆ ಮೂಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಹಸರಂಗ(2), ಶನಕ್(0), ತಿಕ್ಷಣ್(0) ಔಟಾದರು. ಈ ಮೂಲಕ 19. 4 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 105ರನ್ಗಳಿಕೆ ಮಾಡಿತು.
-
Congratulations Afghanistan!
— Mirwais Ashraf (@MirwaisAshraf16) August 27, 2022 " class="align-text-top noRightClick twitterSection" data="
It's been a special performance in the first game of the Asia Cup, a very good start, well done to everyone, onto the next one #AfghanAtalan | #AsiaCup2022 pic.twitter.com/cd6GSMa7MR
">Congratulations Afghanistan!
— Mirwais Ashraf (@MirwaisAshraf16) August 27, 2022
It's been a special performance in the first game of the Asia Cup, a very good start, well done to everyone, onto the next one #AfghanAtalan | #AsiaCup2022 pic.twitter.com/cd6GSMa7MRCongratulations Afghanistan!
— Mirwais Ashraf (@MirwaisAshraf16) August 27, 2022
It's been a special performance in the first game of the Asia Cup, a very good start, well done to everyone, onto the next one #AfghanAtalan | #AsiaCup2022 pic.twitter.com/cd6GSMa7MR
ಅಫ್ಘಾನ್ ಪರ ಮಿಂಚಿದ ಫಾರೂಖಿ 3 ವಿಕೆಟ್ ಪಡೆದುಕೊಂಡರೆ, ರಹಮನ್, ಮಹಮ್ಮದ್ ನಬಿ ತಲಾ 2 ವಿಕೆಟ್ ಪಡೆದರು, ನವೀನ್ ಉಲ್ ಹಕ್ 1 ವಿಕೆಟ್ ಕಿತ್ತರು.
ಇದನ್ನೂ ಓದಿ: Asia Cup 2022: ಅಫ್ಘಾನ್ ಸಂಘಟಿತ ಬೌಲಿಂಗ್ ದಾಳಿಗೆ ಲಂಕಾ ತತ್ತರ.. 105 ರನ್ಗಳಿಗೆ ಆಲೌಟ್
ಸುಲಭವಾಗಿ ಗುರಿ ಮುಟ್ಟಿದ ಅಫ್ಘಾನಿಸ್ತಾನ: ಶ್ರೀಲಂಕಾ ನೀಡಿದ್ದ 106ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಅಫ್ಘಾನ್ ತಂಡ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭಿಕರಾಗಿ ಕಣಕ್ಕಿಳಿದ ಹಜರುತುಲೈ ಹಾಗೂ ಗುರ್ಬಾಜ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ನಷ್ಟಕ್ಕೆ 83ರನ್ಗಳ ಜೊತೆಯಾಟವಾಡಿದರು. ಗುರ್ಜಾಜ್ ತಾವು ಎದುರಿಸಿದ 18 ಎಸೆತಗಳಲ್ಲಿ 4 ಸಿಕ್ಸರ್, 3 ಬೌಂಡರಿ ಸಮೇತ 40ರನ್ ಸಿಡಿಸಿದರು. ಇವರಿಗೆ ಸಾಥ್ ನೀಡಿದ ಹಜರುತುಲೈ ಅಜೇಯ 37ರನ್ಗಳಿಸಿದರು. ಗುರ್ಜಾಜ್ ವಿಕೆಟ್ ಪತನದ ಬೆನ್ನಲ್ಲೇ ಬಂದ ಇಬ್ರಾಹಿಂ 15ರನ್ಗಳಿಸಿ ಔಟಾದರು. ಕೊನೆಯದಾಗಿ ತಂಡ 10.1 ಓವರ್ಗಳಲ್ಲಿ 2 ವಿಕೆಟ್ನಷ್ಟಕ್ಕೆ 106ರನ್ಗಳಿಕೆ ಮಾಡಿ, ಗೆಲುವು ಸಾಧಿಸಿತು. ಲಂಕಾ ಪರ ಹಸರಂಗ 1 ವಿಕೆಟ್ ಪಡೆದರು.
ಭಾನುವಾರ ಹೈವೋಲ್ಟೇಜ್ ಪಂದ್ಯ: ಏಷ್ಯಾಕಪ್ನಲ್ಲಿ ಭಾನುವಾರ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಉಭಯ ತಂಡಗಳು ಬಲಿಷ್ಠವಾಗಿರುವ ಕಾರಣ ತೀವ್ರ ಪೈಪೋಟಿ ಕಂಡು ಬರುವ ಸಾಧ್ಯತೆ ಇದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಬಾಬರ್ ಆಜಂ ನಾಯಕನಾಗಿರುವ ಪಾಕ್ ದುಬೈ ಮೈದಾನದಲ್ಲಿ ಮುಖಾಮುಖಿಯಾಗಲಿವೆ.