ಲಾರ್ಡ್ಸ್ (ಲಂಡನ್): ಇಂಗ್ಲೆಂಡ್ - ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಎರಡನೇ ಆ್ಯಶಸ್ ಟೆಸ್ಟ್‌ನ ಮೊದಲ ದಿನ ವಿಚಿತ್ರ ಘಟನೆಯೊಂದು ನಡೆಯಿತು. ಹವಾಮಾನ ಸಂರಕ್ಷಣೆಗೆ ಒತ್ತಾಯಿಸುತ್ತಿರುವ ಪ್ರತಿಭಟನಾಕಾರರು ಲಾರ್ಡ್ಸ್‌ನಲ್ಲಿ ಪಂದ್ಯಕ್ಕೆ ಅಡ್ಡಿಪಡಿಸಿದರು. ಇದರಿಂದ ಎರಡನೇ ಓವರ್ ನಡುವೆ ಪಂದ್ಯವನ್ನು ಐದು ನಿಮಿಷಗಳ ಕಾಲ ನಿಲ್ಲಸಬೇಕಾಯಿತು.
'ಜಸ್ಟ್ ಸ್ಟಾಪ್ ಆಯಿಲ್' ಶರ್ಟ್‌ಗಳನ್ನು ಧರಿಸಿದ್ದ ಇಬ್ಬರು ಪ್ರತಿಭಟನಾಕಾರರು ಕಿತ್ತಳೆ ಪುಡಿಯ ಚೀಲಗಳನ್ನು ಹಿಡಿದುಕೊಂಡು ಮೈದಾನದೊಳಗೆ ಓಡಿಬಂದರು. ಅವರ ಉದ್ದೇಶ ಪಿಚ್‌ಗೆ ಹಾನಿ ಮಾಡುವುದಾಗಿತ್ತು. ಮೈದಾನಕ್ಕೆ ಬಂದು ಕಿತ್ತಳೆ ಪುಡಿ ಎರಚಿದರೂ ಪಿಚ್‌ಗೆ ಹಾನಿ ಮಾಡದಂತೆ ತಡೆಯಲಾಯಿತು. ರಕ್ಷಣಾ ಸಿಬ್ಬಂದಿ ಬರುವ ಮುನ್ನವೇ ಕ್ರಿಕೆಟ್ ಆಟಗಾರರೇ ಅವರನ್ನು ತಡೆದರು.
-
Jonny Bairstow man handling the protestors. What an Ashes so far! pic.twitter.com/kR9TJPEMEP
— Mufaddal Vohra (@mufaddal_vohra) June 28, 2023 " class="align-text-top noRightClick twitterSection" data="
">Jonny Bairstow man handling the protestors. What an Ashes so far! pic.twitter.com/kR9TJPEMEP
— Mufaddal Vohra (@mufaddal_vohra) June 28, 2023Jonny Bairstow man handling the protestors. What an Ashes so far! pic.twitter.com/kR9TJPEMEP
— Mufaddal Vohra (@mufaddal_vohra) June 28, 2023
ಇಂಗ್ಲೆಂಡ್ ವಿಕೆಟ್‌ಕೀಪರ್ ಕಮ್ ಬ್ಯಾಟರ್ ಜಾನಿ ಬೈರ್‌ಸ್ಟೋವ್ ಒಬ್ಬ ಕಾರ್ಯಕರ್ತನನ್ನು ತಮ್ಮ ಬಲಿಷ್ಠ ತೋಳುಗಳಿಂದ ಎತ್ತಿಕೊಂಡು ಹೋಗಿ ಬೌಂಡರಿ ಗೆರೆಯಿಂದ ಹೊರಗೆ ರಕ್ಷಣಾ ಸಿಬ್ಬಂದಿಗೆ ಒಪ್ಪಿಸಿದರು. ಡೇವಿಡ್ ವಾರ್ನರ್ ಎರಡನೇ ಪ್ರತಿಭಟನಾಕಾರರನ್ನು ತಡೆಯುವಲ್ಲಿ ಯಶಸ್ವಿಯಾದರು. ಪಿಚ್ನತ್ತ ಓಡಿ ಬಂದಿದ್ದ ಪ್ರತಿಭಟನಾಕಾರರನ್ನು ಅವರು ತಡೆದು ನಿಲ್ಲಿಸಿದರು. ಹೋರಾಟಗಾರರು ಎರಚಿದ್ದ ಕಿತ್ತಳೆ ಪುಡಿ ಬೈರ್‌ಸ್ಟೋವ್ ಅವರ ಮೈಗೆಲ್ಲ ಬಿದ್ದುದರಿಂದ ಅವರು ಜರ್ಸಿ ಬದಲಾಯಿಸಬೇಕಾಯಿತು.
ಮೂರನೇ ಪ್ರತಿಭಟನಾಕಾರ ಕೂಡ ಬೇಲಿ ಹಾರಿದ್ದ. ಆದರೆ ಪಿಚ್ ಕಡೆಗೆ ಬರುವ ಮೊದಲೇ ಹಗ್ಗದ ಬಳಿ ಇದ್ದ ರಕ್ಷಣಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದರು. ಸ್ವಲ್ಪ ತಡವಾದ ನಂತರ ಪರಿಸ್ಥಿತಿ ಹತೋಟಿಗೆ ಬಂತು. ಮೂವರೂ ಪ್ರತಿಭಟನಾನಿರತರನ್ನು ರಕ್ಷಣಾ ಸಿಬ್ಬಂದಿ ಬಂಧಿಸಿದರು. ಈ ಪ್ರತಿಭಟನಾಕಾರರಿಂದಾಗಿ ಪಂದ್ಯವನ್ನು ಸ್ವಲ್ಪ ಹೊತ್ತು ನಿಲ್ಲಿಸಲಾಯಿತು. ಜಸ್ಟ್ ಸ್ಟಾಪ್ ಆಯಿಲ್ ಹೋರಾಟಗಾರರು ಎರಡಚಿದ ಕಿತ್ತಳೆ ಪುಡಿಯನ್ನು ಮೈದಾನದಿಂದ ತೆಗೆದ ನಂತರ ಪಂದ್ಯ ಮರು ಆರಂಭವಾಯಿತು.
-
The police arrested the pitch invader at Lord's. pic.twitter.com/XJylXbgt14
— Mufaddal Vohra (@mufaddal_vohra) June 28, 2023 " class="align-text-top noRightClick twitterSection" data="
">The police arrested the pitch invader at Lord's. pic.twitter.com/XJylXbgt14
— Mufaddal Vohra (@mufaddal_vohra) June 28, 2023The police arrested the pitch invader at Lord's. pic.twitter.com/XJylXbgt14
— Mufaddal Vohra (@mufaddal_vohra) June 28, 2023
ಜಸ್ಟ್ ಸ್ಟಾಪ್ ಆಯಿಲ್ ಹೋರಾಟಗಾರರು ಪಂದ್ಯಕ್ಕೆ ಅಡ್ಡಿಪಡಿಸುತ್ತಾರೆ ಎಂಬುದರ ಬಗ್ಗೆ ತಿಳಿದಿದ್ದ ಕ್ರಿಕೆಟ್ ಮಂಡಳಿ, ಇಂಗ್ಲೆಂಡ್‌ನಲ್ಲಿನ ನಡೆಯುವ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಈ ವರ್ಷ ಹೆಚ್ಚುವರಿ ಪಿಚ್ ಸಿದ್ಧಪಡಿಸುತ್ತಿದೆ. ಈ ಹಿಂದೆ ಇದೇ ಹೋರಾಟಗಾರು ಟ್ವಿಕನ್‌ಹ್ಯಾಮ್‌ನಲ್ಲಿ ಪ್ರೀಮಿಯರ್‌ಶಿಪ್ ರಗ್ಬಿ ಫೈನಲ್‌ನ ಪಿಚ್ ಆಕ್ರಮಿಸಿಕೊಂಡಿದ್ದರು. ಏಪ್ರಿಲ್‌ನಲ್ಲಿ ನಡೆದ ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಹವಾಮಾನ ಬದಲಾವಣೆ ಗುಂಪಿನ ನೇತೃತ್ವದಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು.
ಜಸ್ಟ್ ಸ್ಟಾಪ್ ಆಯಿಲ್ ಪ್ರತಿಭಟನೆ ಕುರಿತು..: ಜಸ್ಟ್ ಸ್ಟಾಪ್ ಆಯಿಲ್ ಎಂಬುದು ಯುನೈಟೆಡ್ ಕಿಂಗ್‌ಡಮ್‌ನ ಪರಿಸರ ಕಾರ್ಯಕರ್ತರ ಗುಂಪು. ಪಳೆಯುಳಿಕೆ ಇಂಧನ ಪರವಾನಗಿ ಮತ್ತು ಅದರ ಉತ್ಪಾದನೆ ನಿಲ್ಲಿಸಲು ಬ್ರಿಟಿಷ್ ಸರ್ಕಾರಕ್ಕೆ ಹೋರಾಟದ ಮೂಲಕ ಒತ್ತಾಯಿಸುತ್ತಿದೆ. ಸಂಘಟನೆ 2022ರಲ್ಲಿ ಇಂಗ್ಲೆಂಡ್ನಲ್ಲಿ ಆರಂಭವಾಯಿತು. ರಸ್ತೆ ತಡೆ, ಸರ್ಕಾರಿ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಪ್ರತಿಷ್ಠಿತ ಕ್ರೀಡೆಗಳ ಸಮಯದಲ್ಲಿ ಅಡ್ಡಿಪಡಿಸಿ ಹೋರಾಟ ವ್ಯಕ್ತಪಡಿಸುತ್ತಾರೆ.
ಸರ್ಕಾರವು ದೇಶದಲ್ಲಿ ಪಳೆಯುಳಿಕೆ ಇಂಧನಗಳ ಅಭಿವೃದ್ಧಿ, ಪರಿಶೋಧನೆ ಮತ್ತು ಉತ್ಪಾದನೆಗೆ ಸಂಬಂಧಿಸಿದ ಎಲ್ಲ ಭವಿಷ್ಯದ ಒಪ್ಪಂದಗಳಿಗೆ ಸಹಿ ಹಾಕಬಾರದು. ನವೀಕರಿಸಬಹುದಾದ ಶಕ್ತಿಯಲ್ಲಿ ಹೂಡಿಕೆ ಮತ್ತು ಶಕ್ತಿಯ ವ್ಯರ್ಥ ತಪ್ಪಿಸಲು ಕಟ್ಟಡಗಳು ಉತ್ತಮ ಉಷ್ಣ ನಿರೋಧನವನ್ನು ಬೆಂಬಲಿಸುವಂತೆ ಸಂಘಟನೆ ಹೋರಾಟದ ಮೂಲಕ ಮನವಿ ಮಾಡುತ್ತಿದೆ.