ಲಂಡನ್: ಆಸಿಸ್ನ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಅವರ ಅರ್ಧಶತಕ, ನಾಯಕ ಪ್ಯಾಟ್ ಕಮಿನ್ಸ್ ಮತ್ತು ಆಫ್ ಸ್ಪಿನ್ನರ್ ಟಾಡ್ ಮರ್ಫಿ ಅವರ ಮಹತ್ವದ ಕೊಡುಗೆಯಿಂದ ಆಸ್ಟ್ರೇಲಿಯಾವು ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ 295 ರನ್‌ಗಳಿಸಿ 12ರನ್ಗಳ ಮುನ್ನಡೆ ಪಡೆದುಕೊಂಡು ಆಲ್ ಔಟ್ ಆಗಿದೆ. ಎರಡನೇ ದಿನದಾಟದಲ್ಲಿ ಆಸಿಸ್ ಪಡೆ ಬ್ಯಾಟಿಂಗ್ ವೈಫಲ್ಯ ಎದುರಿಸಿತಾದರೂ ಅನುಭವಿ ಸ್ಮಿತ್ ಅವರ ಸ್ಕೋರ್ ತಂಡಕ್ಕೆ ಆಸರೆ ಆಯಿತು.
-
🏴 283
— ICC (@ICC) July 29, 2023 " class="align-text-top noRightClick twitterSection" data="
🇦🇺 295
Australia have a first innings lead of 12 runs.
What are your predictions for Day 3 of the final #Ashes Test? 🧐#WTC25 | 📝 #ENGvAUS: https://t.co/AybW31movm pic.twitter.com/elLRwqu95b
">🏴 283
— ICC (@ICC) July 29, 2023
🇦🇺 295
Australia have a first innings lead of 12 runs.
What are your predictions for Day 3 of the final #Ashes Test? 🧐#WTC25 | 📝 #ENGvAUS: https://t.co/AybW31movm pic.twitter.com/elLRwqu95b🏴 283
— ICC (@ICC) July 29, 2023
🇦🇺 295
Australia have a first innings lead of 12 runs.
What are your predictions for Day 3 of the final #Ashes Test? 🧐#WTC25 | 📝 #ENGvAUS: https://t.co/AybW31movm pic.twitter.com/elLRwqu95b
ಕಾಂಗರೂ ಪಡೆ ಒಂದು ಹಂತದಲ್ಲಿ 185ಕ್ಕೆ 7 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಎರಡನೇ ದಿನದಾಟದ ಕೊನೆಯ ಎಸೆತದಲ್ಲಿ 103.1 ಓವರ್‌ಗಳಲ್ಲಿ 295 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ ಗಳಿಸಿದ್ದ ಮೊತ್ತ (283)ಕ್ಕಿಂತ 12 ರನ್ ಮುನ್ನಡೆಯನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು. ಸ್ಮಿತ್ 123 ಎಸೆತಗಳಲ್ಲಿ 71 ರನ್ ಗಳಿಸಿದರೆ, ಉಸ್ಮಾನ್ ಖವಾಜಾ (47), ಕಮಿನ್ಸ್ (36) ಮತ್ತು ಮರ್ಫಿ (34) ಬೆಂಬಲ ನೀಡಿದರು. ಕ್ರಿಸ್ ವೋಕ್ಸ್ ಮೂರು ವಿಕೆಟ್ ಪಡೆದರೆ, ಬ್ರಾಡ್, ವುಡ್ ಮತ್ತು ರೂಟ್ ತಲಾ ಎರಡು ವಿಕೆಟ್ ಕಬಳಿಸಿದರು.
ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಅವರು ಮೂರನೇ ದಿನದ ಆಟದಲ್ಲಿ ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ನ ಆರಂಭಕ್ಕೆ ಎದುರು ನೋಡುತ್ತಿದ್ದಾರೆ. ಮೊಯಿನ್ ಅಲಿ ಅವರು ಗಾಯದ ಕಾರಣ ಎರಡನೇ ದಿನ ಬೌಲಿಂಗ್ ಮಾಡಲೇ ಇಲ್ಲ. ಇಂಗ್ಲೆಂಡ್‌ನ ಮೂರನೇ ಬ್ಯಾಟರ್ ಆಗಿ ಯಾರು ಮೈದಾನಕ್ಕಿಳಿಯುತ್ತಾರೆ ಎಂಬುದು ಕುತೂಹಲವಾಗಿ ಉಳಿದಿದೆ.
ಎರಡನೇ ದಿನದಾಟ: 62ಕ್ಕೆ 1 ವಿಕೆಟ್ ನಷ್ಟದೊಂದಿಗೆ ಆಸ್ಟ್ರೇಲಿಯಾ ಮೊದಲನೇ ದಿನವನ್ನು ಅಂತ್ಯಮಾಡಿತ್ತು. ಖವಾಜಾ ಮತ್ತು ಮಾರ್ನಸ್ ಲ್ಯಾಬುಶೇನ್ ರಕ್ಷಣಾತ್ಮಕ ಹೊಡೆತಗಳನ್ನು ಆಡುವುದರಲ್ಲಿ ಮತ್ತು ಎಸೆತಗಳನ್ನು ಬಿಡುವುದರಲ್ಲಿ ತೃಪ್ತಿಪಟ್ಟರು. ಲ್ಯಾಬುಶೇನ್ 82 ಎಸೆತಗಳನ್ನು ಎದುರಿಸಿ ಕೆವಲ 9 ರನ್ ಗಳಿಸಿ ವಿಕೆಟ್ ಕೊಟ್ಟರು. ಬೋಜನ ವಿರಾಮದ ನಂತರ, ಬ್ರಾಡ್ 47 ರನ್ ಗಳಸಿದ್ದ ಖವಾಜಾ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು. ಖವಾಜಾ ಬೆನ್ನಲ್ಲೇ ಬಿರುಸಿನ ಆಟಗಾರ ಟ್ರಾವಿಸ್ ಹೆಡ್ ನಾಲ್ಕು ರನ್‌ಗಳಿಗೆ ವಿಕೆಟ್ ಕೊಟ್ಟರು. ನಂತರ ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ ಮತ್ತು ಮಿಚೆಲ್ ಸ್ಟಾರ್ಕ್ ಸಹ ವಿಕೆಟ್ ಒಪ್ಪಿಸಿದರು.
ಏಕಾಂಗಿ ಹೋರಾಟಕ್ಕೆ ಮುಂದಾದ ಸ್ಮಿತ್: ಕಾಂಗರೂ ಪಡೆಯ ಅನುಭವಿ ಆಟಗಾರ ಸ್ಮಿತ್ ಆಂಗ್ಲರ ಬೌಲ್ಗೆ ತಾಳ್ಮೆಯಿಂದ ಉತ್ತರ ನೀಡುತ್ತಾ ಬಂದರು. ಕ್ರಿಸ್ ಬದಲಾಯಿಸುತ್ತಾ ರನ್ ಗಳಿಸಿದರು. ಒಂದೆಡೆ ವಿಕೆಟ್ ಪತನವಾಗುತ್ತಿದ್ದರೂ ವಿಚಲಿತರಾಗದೇ ರನ್ ಕಲೆಹಾಕುವತ್ತ ಗಮನ ಕೇಂದ್ರೀ ಕರಿಸಿದರು. ನಾಯಕ ಕಮಿನ್ಸ್ ಜೊತೆಗೆ ಉತ್ತಮ ಜೊತೆಯಾಟವನ್ನು ನಿರ್ಮಾಣ ಮಾಡಿದರು. 71 ರನ್ ಗಳಿಸಿ ಆಡುತ್ತಿದ್ದ ಸ್ಮಿತ್ ಕ್ರಿಸ್ ವೋಕ್ಸ್ ಬೌಲಿಂಗ್ನಲ್ಲಿ ವಿಕೆಟ್ ಕೊಟ್ಟರು. ಕೊನೆಯಲ್ಲಿ ಮರ್ಫಿ ಮತ್ತು ಕಮಿನ್ಸ್ ಕೊಂಚ ರನ್ ಕಲೆಹಾಕಿದ್ದರಿಂದ ಮುನ್ನಡೆ ಸಾಧಿಸಲು ನೆರವಾಯಿತು.
ನಾಲ್ಕನೇ ಟೆಸ್ಟ್ ಆ್ಯಶಸ್ ಪಂದ್ಯ ಡ್ರಾ ಆಗಿದ್ದರಿಂದ ಇಂಗ್ಲೆಂಡ್ಗೆ ಸರಣಿ ಹಂಚಿಕೊಳ್ಳಲು ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ನಲ್ಲಿ ತಮ್ಮ ಬೇಸ್ ಬಾಲ್ ನೀತಿಯಿಂದಲೂ ಅಥವಾ ಟೆಸ್ಟ್ ಮಾದರಿಯಲ್ಲೂ ಉತ್ತಮ ರನ್ ಕಲೆಹಾಕುವುದು ಅಗತ್ಯವಿದೆ. ಇಂದಿನ ಪಂದ್ಯ ಸೇರಿಸಿ ಮೂರು ದಿನದ ಆಟ ಬಾಕಿ ಇದ್ದು ಡ್ರಾ ಆಗದಂತೆ ಆಂಗ್ಲರು ಪಂದ್ಯ ಮುಗಿಸಿಕೊಳ್ಳಬೇಕಿದೆ.
ಇದನ್ನೂ ಓದಿ: T20 World Cup: ಜೂನ್ 4 ರಿಂದ ಜೂನ್ 30ರ ವರೆಗೆ ವೆಸ್ಟ್ ಇಂಡೀಸ್, ಅಮೆರಿಕದಲ್ಲಿ 2024 ರ ಟಿ20 ವಿಶ್ವಕಪ್?