ಲಾರ್ಡ್ಸ್ (ಲಂಡನ್) : ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಆಶಸ್ ಟೆಸ್ಟ್‌ನ 5 ನೇ ದಿನದಂದು ಲಾರ್ಡ್ಸ್ ಮೈದಾನದಲ್ಲಿ ಜಾನಿ ಬೈರ್‌ಸ್ಟೋವ್ ಔಟಾದದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇನ್ನೇನು ಇಂಗ್ಲೆಂಡ್ ಗೆಲುವಿನ ಸನಿಹಕ್ಕೆ ಹೋಗುತ್ತಿದೆ ಎನ್ನುವಷ್ಟರಲ್ಲೇ ಈ ಒಂದು ಹೊಸ ವಿವಾದ ಕ್ರಿಕೆಟ್ ಲೋಕದಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್‌ನ 52 ನೇ ಓವರ್ ಆಡುವಾಗ ಕ್ಯಾಮರೂನ್ ಗ್ರೀನ್ ಬೌಲಿಂಗ್ನಲ್ಲಿ ಬಾಲ್ ಬೈರ್‌ಸ್ಟೋವ್ ಎಡ ಭಾಗದಿಂದ ಬೌನ್ಸರ್ ಆದ ಬಾಲ್ ಡಕ್ ಆಗುವ ಮೂಲಕ ಕೀಪರ್ ಅಲೆಕ್ಸ್ ಕ್ಯಾರಿ ಅವರ ಗ್ಲೌಸ್ ಸೇರಿತು. ನಂತರ, ಬೆನ್ ಸ್ಟೋಕ್ಸ್ ಬಾಲ್ ಡಾಟ್ ಆದ ಕಾರಣ ನಾನ್-ಸ್ಟ್ರೈಕರ್ನಲ್ಲಿದ್ದ ಬೆನ್ ಸ್ಟೋಕ್ ಜೊತೆ ಮಾತನಾಡಲು ತಮ್ಮ ಕ್ರೀಸ್‌ನಿಂದ ಹೊರ ಬಂದರು. ಈ ಸಂದರ್ಭದಲ್ಲಿ ಬಾಲ್ ನೇರ ಡೆಡ್ ಆಗದ ಕಾರಣ ಬೈರ್‌ಸ್ಟೋವ್ ಕ್ರೀಸ್ ಬಿಟ್ಟು ಹೋಗುತ್ತಿದ್ದಂತೆ ಕ್ಯಾರಿ ತನ್ನ ಕೈನಲ್ಲಿದ್ದ ಬಾಲ್ ಅನ್ನು ವಿಕೆಟ್ಗೆ ಹೊಡೆದು ರನ್ ಔಟ್ ಮಾಡಿದರು. ಇದೇ ರನ್ ಔಟ್ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
-
🤐🤐🤐#EnglandCricket | #Ashes pic.twitter.com/dDGCnj4qNm
— England Cricket (@englandcricket) July 2, 2023 " class="align-text-top noRightClick twitterSection" data="
">🤐🤐🤐#EnglandCricket | #Ashes pic.twitter.com/dDGCnj4qNm
— England Cricket (@englandcricket) July 2, 2023🤐🤐🤐#EnglandCricket | #Ashes pic.twitter.com/dDGCnj4qNm
— England Cricket (@englandcricket) July 2, 2023
ಸಾಮಾನ್ಯವಾಗಿ ಯಾವುದೇ ಬಾಲ್ ಡಾಟ್ ಆದ ನಂತರ ಕ್ರೀಸ್ ನಲ್ಲಿದ್ದ ಬ್ಯಾಟರ್‌ಗಳು ಕ್ರೀಸ್ ತೊರೆಯುವ ಮೊದಲು ಕೀಪರ್ ಅಥವಾ ಅಂಪೈರ್‌ಗೆ ತಿಳಿಸುತ್ತಾರೆ. ಆದರೆ ಬೈರ್‌ಸ್ಟೋ ಈ ಸಂದರ್ಭದಲ್ಲಿ ಅದನ್ನು ಮಾಡಲಿಲ್ಲ. ಕೇವಲ ಕ್ರೀಸ್ನಲ್ಲಿ ತನ್ನ ಕಾಲಿನಲ್ಲಿ ಗೆರೆ ಎಳೆದು ಹೋಗುತ್ತಾರೆ. ಹಾಗಾಗಿ ಮೂರನೇ ಅಂಪೈರ್ ನಿರ್ಧಾರವು ಔಟ್ ಎನ್ನುವುದರ ಮೂಲಕ ಈ ಒಂದು ವಿವಾದಾತ್ಮಕ ರನ್ ಔಟ್ ನಿಂದ ಪಂದ್ಯದ ಸ್ಥಿತಿಗತಿಗಳು ಬದಲಾಗುವುದರ ಜೊತೆಗೆ ಇಂಗ್ಲೆಂಡ್ ಸೋಲಿಗೆ ಇದು ಒಂದು ದೊಡ್ಡ ಕಾರಣವಾಯಿತು.
ನಾಯಕನ ಆಟಕ್ಕೆ ಇಂಗ್ಲೆಂಡ್ಗೆ ಒಲಿಯದ ಗೆಲುವು : ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತೊಮ್ಮೆ ಬೇಸ್ಬಾಲ್ ಕ್ರಿಕೆಟ್ ಆಡಿ ತಂಡಕ್ಕೆ ಗೆಲುವು ತಂದು ಕೊಡುವುದರಲ್ಲಿ ಎಡುವಿದರು. 214 ಬಾಲ್ ಎದುರಿಸಿದ ಸ್ಟೋಕ್ಸ್ 155 ರನ್ ಕಲೆಹಾಕಿದರು. ಇದರಲ್ಲಿ 9 ಸಿಕ್ಸ್ 9 ಫೋರ್ ದಾಖಲಾಗಿವೆ. ಈ ಮೂಲಕ ಆರ್ಕಷಕ ಆಟ ಪ್ರದರ್ಶನ ಮಾಡಿದ ಸ್ಟೋಕ್ಸ್ ಆಸೀಸ್ ಬೌಲರ್ಗಳನ್ನು ಅಕ್ಷರಶಃ ದಂಡಿಸಿದ್ದರು. ಎರಡನೇ ಟೆಸ್ಟ್ನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ಆಂಗ್ಲ ಪಾಳಯಕ್ಕೆ ನಾಯಕ ಗೆಲುವಿ ಆಸೆಯನ್ನು ಚಿಗುರಿಸಿದ್ದರು. ಆದರೆ ಅವರಿಗೆ ಕ್ರೀಸ್ನಲ್ಲಿ ಇತರೆ ಬ್ಯಾಟರ್ಗಳ ಸಾಥ್ ಸರಿಯಾದ ರೀತಿ ಸಿಗಲಿಲ್ಲ. ಬೈರ್‌ಸ್ಟೋವ್ ಮತ್ತು ಸ್ಟೋಕ್ಸ್ ಜೊತೆ ಆಟದ ಮೂಲಕ ಇಂಗ್ಲೆಂಡ್ಗೆ ಗೆಲುವುನ ಸಿಗಬಹುದು ಎಂಬ ಲೆಕ್ಕಚಾರದಲ್ಲಿ ಕ್ರಿಕೆಟ್ ಅಭಿಮಾನಿಗಳು ಇದ್ದರು.
ಆದರೇ ವಿವಾದಾತ್ಮಕ ರನ್ ಔಟ್ ಆಗುವ ಮೂಲಕ ಬೈರ್‌ಸ್ಟೋವ್ ಕ್ರೀಸ್ ನಿಂದ ಹೊರ ನಡೆದ ಮೇಲೆ ಸೋಲಿನ ಸುಳಿಗೆ ಮತ್ತೆ ಇಂಗ್ಲೆಡ್ ಸಿಲುಕಿತ್ತು. ಇದರ ಮಧ್ಯೆಯೂ ಸ್ಟೋಕ್ಸ್ ಮಾತ್ರ ಶತಕವನ್ನು ತಮ್ಮ ಬೇಸ್ಬಾಲ್ ನೀತಿಯಲ್ಲಿ ಗಳಿಸಿದ್ದು ವಿಶೇಷವಾಗಿತ್ತು. ವಿಕೆಟ್ ಕಳೆದುಕೊಂಡಿದ್ದರೂ, ಕ್ಯಾಮರೂನ್ ಗ್ರೀನ್ ಓವರ್ನಲ್ಲಿ 6 ಬಾಲ್ ಗೆ 24 ರನ್ ಹೊಡೆಯುವ ಮೂಲಕ ಶತಕವನ್ನು ದಾಖಲಿಸಿದರು.
ಇದನ್ನೂ ಓದಿ : Ashes Test : ಬೆನ್ ಸ್ಟೋಕ್ಸ್ ಶತಕ ವ್ಯರ್ಥ.. ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 43 ರನ್ಗಳ ಜಯ