ETV Bharat / sports

Ashes 3rd Test: ಲೀಡ್ಸ್ ಟೆಸ್ಟ್​ಗೆ ಮಳೆ ಆತಂಕ; ​ಪಂದ್ಯ ಗೆಲ್ಲಲು ಆಂಗ್ಲರಿಗೆ ಬೇಕು 224 ರನ್ - ETV Bharath Kannada news

ಆ್ಯಶಸ್​ ಸರಣಿಯ ಮೂರನೇ ಟೆಸ್ಟ್‌ನ​ ನಾಲ್ಕನೇ ದಿನವೇ ಫಲಿತಾಂಶ ಕಾಣುವ ಸಾಧ್ಯತೆ ಇದೆ.

Etv Bharat
Etv Bharat
author img

By

Published : Jul 9, 2023, 2:07 PM IST

ಲೀಡ್ಸ್ (ಲಂಡನ್​): ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ 3ನೇ ಆ್ಯಶಸ್ ಟೆಸ್ಟ್‌ನ 4ನೇ ದಿನವಾದ ಇಂದು ಫಲಿತಾಂಶ ಕಾಣುವ ಎಲ್ಲ ಸಾಧ್ಯತೆಗಳಿವೆ. ಆದರೆ ಮಳೆ ಅಡ್ಡಿ ಮಾಡಿದಲ್ಲಿ ಮಾತ್ರ ಪಂದ್ಯ 5ನೇ ದಿನಕ್ಕೆ ಉಳಿಯಲಿದೆ. ಮೂರನೇ ಟೆಸ್ಟ್​ ಸುಲಭವಾಗಿ ಗೆಲ್ಲುವ ಅವಕಾಶ ಇಂಗ್ಲೆಂಡ್​​ಗೆ ಇದೆ. ಆಸ್ಟ್ರೇಲಿಯಾ ಕೊಟ್ಟಿರುವ ಅಲ್ಪ ಮೊತ್ತದ ಗುರಿಯನ್ನು ಹೇಗೆ ರಕ್ಷಿಸಿಕೊಳ್ಳುತ್ತದೆ ಎಂಬುದು ಕುತೂಹಲ.

ಹವಾಮಾನ ಇಲಾಖೆಯ ವರದಿಯ ಪ್ರಕಾರ, ಇಂದು ಮಳೆಯಾಗುವ ಸಂಭವ ಹೆಚ್ಚು. ಆದರೆ ಆಗಾಗ್ಗೆ ವರುಣನ ಅಡ್ಡಿಯ ಆತಂಕ ಇದ್ದು ಬೆಕ್ಕು-ಇಲಿಯ ಆಟದಂತೆ ಮಳೆ ಪಂದ್ಯಕ್ಕೆ ಅಡ್ಡಿಪಡಿಸಬಹುದು ಎನ್ನಲಾಗಿದೆ. ಹವಾಮಾನ ಮತ್ತು ಪಿಚ್​ ಯಾವ ತಂಡಕ್ಕೆ ಸಹಕಾರ ಒದಗಿಸಲಿದೆ ಎಂಬುದು ಪಂದ್ಯದ ಫಲಿತಾಂಶದಿಂದ ತಿಳಿದುಬರಲಿದೆ.

ಮೂರನೇ ದಿನದಾಟ ಮಳೆಯಿಂದಾಗಿ ತಡವಾಗಿ ಆರಂಭವಾಯಿತು. ಇದರಿಂದ ಇಂಗ್ಲೆಂಡ್​ ಲಾಭಮಾಡಿಕೊಂಡಿತು ಎಂದರೆ ತಪ್ಪಾಗದು. ಆಸ್ಟ್ರೇಲಿಯಾದ 6 ವಿಕೆಟ್​ ಅ​ನ್ನು ವೇಗವಾಗಿ ಕಬಳಿಸಿದ ಇಂಗ್ಲೆಂಡ್​ ಬೃಹತ್​ ಗುರಿ ತಪ್ಪಿಸಿಕೊಂಡಿತು. ಆಸ್ಟ್ರೇಲಿಯಾ ಟ್ರಾವಿಸ್​ ಹೆಡ್​ ಅವರ ಬ್ಯಾಟಿಂಗ್​ ಸಹಕಾರದಿಂದ ಸ್ಪರ್ಧಾತ್ಮಕ ಗುರಿಯನ್ನು ಒಟ್ಟು ಹಾಕುವಲ್ಲಿ ಯಶಕಂಡಿತು. ಮೂರನೇ ದಿನ ತಡವಾಗಿ ಆರಂಭವಾದ ಆಟದಲ್ಲಿ 128 ರನ್​ ಗಳಿಸಿ 251 ರನ್​ ಗುರಿಯನ್ನು ಇಂಗ್ಲೆಂಡ್​ಗೆ ನೀಡಿತು.

ಎರಡನೇ ದಿನದಾಟದ ಅಂತ್ಯಕ್ಕೆ ಕಾಂಗರೂ ಪಡೆ 116 ರನ್ ಗಳಿಸಿ 4 ವಿಕೆಟ್​ ಕಳೆದುಕೊಂಡಿತ್ತು. ಕ್ರೀಸ್​ನಲ್ಲಿ ಮಿಚಲ್​ ಮಾರ್ಷ್​ (17) ಮತ್ತು ಟ್ರಾವೆಸ್​ ಹೆಡ್​​ (18) ಇದ್ದರು. ಮೂರನೇ ದಿನದಾಟ ಆರಂಭವಾಗುತ್ತಿದ್ದಂತೆ 28 ರನ್​ ಗಳಿಸಿದ ಮಾರ್ಷ್​ ವಿಕೆಟ್​ ಕೊಟ್ಟರು. ಅವರ ಬೆನ್ನಲ್ಲೇ ಅಲೆಕ್ಸ್​​ ಕ್ಯಾರಿ 5 ರನ್​ಗೆ ಪೆವಿಲಿಯನ್​ಗೆ ಮರಳಿದರು. ನಂತರ ಸ್ಟಾರ್ಕ್​ ಹೆಡ್​ಗೆ ಕೊಂಚ ಹೊತ್ತು ಜೊತೆಯಾಟ ಕೊಟ್ಟರು. ಆದರೆ 16 ರನ್​ ಗಳಿಸಿ ವುಡ್​ಗೆ ವಿಕೆಟ್​ ಕೊಟ್ಟರು. ಇದರ ಬೆನ್ನಲ್ಲೇ ನಾಯುಕ ಕಮಿನ್ಸ್​​ 1ರನ್​ಗೆ ಔಟ್​ ಆದರು.

ಸತತ ವಿಕೆಟ್​ ನಷ್ಟ ಕಂಡ ಹೆಡ್​ ಬಿರುಸಿನ ಆಟಕ್ಕೆ ಮುಂದಾದರು. ಇಂಗ್ಲೆಂಡ್​ನ ಬೇಸ್​ಬಾಲ್​ ನೀತಿಯನ್ನು ಅವರು ಅಳವಡಿಸಿಕೊಂಡು ಬೆನ್​ ಸ್ಟೋಕ್ಸ್​​ ರೀತಿಯಲ್ಲಿ ಅಬ್ಬರದ ಇನ್ನಿಂಗ್ಸ್​ ಕಟ್ಟಿದರು. 112 ಬಾಲ್​ ಎದುರಿಸಿ 7 ಬೌಂಡರಿ ಮತ್ತು 3 ಸಿಕ್ಸ್​​ನ ಸಹಾಯದಿಂದ 77 ರನ್​ ಕಲೆಹಾಕಿದರು. ಇವರ ಇನ್ನಿಂಗ್ಸ್​ ನಡುವೆ ಬೌಲರ್​ ಮಾರ್ಫಿಯೂ ವಿಕೆಟ್​ ಕೊಟ್ಟಿದ್ದರು. ಆಸ್ಟ್ರೇಲಿಯಾ 250 ರನ್​ಗಳ ಮುನ್ನಡೆ ಗಳಿಸುತ್ತಿದ್ದಂತೆ ಹೆಡ್​ ವಿಕೆಟ್​​ ಪತನವಾಗಿದ್ದರಿಂದ 251 ರನ್​ ಗುರಿ ಆಂಗ್ಲರಿಗೆ ದೊರೆಯಿತು.

ಮೂರನೇ ದಿನವೇ ಬ್ಯಾಟಿಂಗ್​ಗೆ ಇಳಿದ ಆಂಗ್ಲರು 5 ಓವರ್​ಗಳನ್ನು ಆಡಿದ್ದು, ವಿಕೆಟ್​ ನಷ್ಟವಿಲ್ಲದೇ 27 ರನ್​ ಕಲೆಹಾಕಿದ್ದಾರೆ. ಇಂದು ಪಂದ್ಯವನ್ನು ಗೆಲ್ಲಲು 224 ರನ್​ ಅವಶ್ಯಕತೆ ಇದೆ. ಆಸ್ಟ್ರೇಲಿಯಾದ ಬೌಲರ್​ಗಳು 224 ರನ್​ ಗಳಿಸುವುದರ ಒಳಗೆ 10 ವಿಕೆಟ್ ಪಡೆಯಬೇಕಿದೆ.

ಇದನ್ನೂ ಓದಿ: India Vs West Indies: ಮೊದಲ ಟೆಸ್ಟ್​ಗೆ ವೆಸ್ಟ್​ ಇಂಡೀಸ್​ನ ತಂಡ ಪ್ರಕಟ.. ಗಾಯಾಳುಗಳ ಸಮಸ್ಯೆಯಿಂದ ಹೊಸಬರಿಗೆ ಮಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.