ETV Bharat / sports

ಟೀಂ ಇಂಡಿಯಾದ ಜೆರ್ಸಿ ಧರಿಸಿ ಕ್ರಿಕೆಟ್​ ಮೈದಾನಕ್ಕಿಳಿದ ಅನುಷ್ಕಾ ಶರ್ಮಾ

author img

By

Published : Oct 19, 2022, 5:12 PM IST

ಚಕ್ಡಾ ಎಕ್ಸ್​ಪ್ರೆಸ್ ಚಿತ್ರದ ಚಿತ್ರೀಕರಣದ ನಿಮಿತ್ತ ನಟಿ ಅನುಷ್ಕಾ ಶರ್ಮಾ ಅವರು ಕೋಲ್ಕತ್ತಾದ ಕ್ರಿಕೆಟ್​ ಮೈದಾನದಲ್ಲಿ ಕಾಣಿಸಿಕೊಂಡರು.

Anushka Sharma Is in Chakdaha Express shooting

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ತಮ್ಮ ಮುಂಬರುವ ಚಿತ್ರ ಚಕ್ಡಾ ಎಕ್ಸ್‌ಪ್ರೆಸ್‌ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್​ ತಾರೆ ಜೂಲನ್ ಗೋಸ್ವಾಮಿ ಅವರ ಬಯೋಪಿಕ್​ ಆಗಿದ್ದು, ಅನುಷ್ಕಾ ಶರ್ಮಾ ಅವರ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಕೋಲ್ಕತ್ತಾದ ಈಡನ್​ ಗಾರ್ಡನ್​ ಮೈದಾನದಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಅನುಷ್ಕಾ ಶರ್ಮಾ ಅವರು ಮಹಿಳಾ ಟೀಂ ಇಂಡಿಯಾದ ಜೆರ್ಸಿ ಧರಿಸಿದ್ದು ಕಂಡು ಬಂದಿತು. ವುಮೆನ್ಸ್ ಕ್ರಿಕ್​ ಝೋನ್​ ಟ್ವಿಟರ್​ ಖಾತೆಯಲ್ಲಿ ಮೈದಾನದಲ್ಲಿ ಓಡಾಡುತ್ತಿರುವ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

ಚಿತ್ರವನ್ನು ಪ್ರಸಿತ್ ರಾಯ್ ನಿರ್ದೇಶನ ಮಾಡುತ್ತಿದ್ದು, ನೆಟ್‍ಫ್ಲಿಕ್ಸ್‍ನಲ್ಲಿ ಫೆಬ್ರವರಿ 2, 2023 ರಂದು ಬಿಡುಗಡೆಯಾಗಲಿದೆ. ಶಾರುಖ್​ ಖಾನ್​ ನಟನೆಯ ಝೀರೋ ಚಿತ್ರವೇ ಇವರು ಕಾಣಿಸಿಕೊಂಡಿದ್ದು, ಕೊನೆಯ ಚಿತ್ರವಾಗಿತ್ತು. ನಾಲ್ಕು ವರ್ಷಗಳ ನಂತರ ಮತ್ತೆ ಬೆಳ್ಳಿತೆರೆಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ತಾಯಿಯಾದ ನಂತರ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ ಇದಾಗಿದ್ದು, ಅವರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ರಾಜಕೀಯ ಪಕ್ಷಗಳ ದಾಳವಾದ ಗಂಗೂಲಿ - ಬಿಸಿಸಿಐ ವಿಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.