ಸೇಂಟ್ ಕಿಟ್ಸ್: ವೆಸ್ಟ್ ಇಂಡೀಸ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಕೆರಿಬಿಯನ್ ಪ್ರೀಮಿಯರ್ ಇತಿಹಾಸದಲ್ಲಿ ಅತಿ ವೇಗದ ಶತಕ ದಾಖಲಿಸಿದ್ದಾರೆ.
ಶುಕ್ರವಾರ ನಡೆದ ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಸೆಲ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಜಮೈಕಾ ತಲವಾಸ್ ತಂಡ 20 ಓವರ್ಗಳಲ್ಲಿ 255 ರನ್ಗಳ ಬೃಹತ್ ಮೊತ್ತ ದಾಖಲಿಸಿತು.
ಸ್ಪೋಟಕ ಬ್ಯಾಟ್ಸ್ಮನ್ ರಸೆಲ್ ಕೇವಲ 14 ಎಸೆತಗಳಲ್ಲಿ 6 ಮನಮೋಹಕ್ ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ ಅಜೇಯ 50 ರನ್ಗಳಿಸಿ ದಾಖಲೆ ಬರೆದರು.
-
Record breaker @Russell12A smashes a 14 ball fifty and takes the @fun88eng magic moment for match 3. #CPL21 #JTvSLK #CricketPlayedLouder #FUN88 pic.twitter.com/qAQjy80jRg
— CPL T20 (@CPL) August 27, 2021 " class="align-text-top noRightClick twitterSection" data="
">Record breaker @Russell12A smashes a 14 ball fifty and takes the @fun88eng magic moment for match 3. #CPL21 #JTvSLK #CricketPlayedLouder #FUN88 pic.twitter.com/qAQjy80jRg
— CPL T20 (@CPL) August 27, 2021Record breaker @Russell12A smashes a 14 ball fifty and takes the @fun88eng magic moment for match 3. #CPL21 #JTvSLK #CricketPlayedLouder #FUN88 pic.twitter.com/qAQjy80jRg
— CPL T20 (@CPL) August 27, 2021
ಇವರಿಗಿಂತ ಮೊದಲು ಬಾರ್ಬಡೋಸ್ ಟ್ರಿಡೆಂಟ್ಸ್ ತಂಡದ ಪರ ಜೆಪಿ ಡುಮಿನಿ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಎವಿನ್ ಲೂಯಿಸ್ 17, ಸೊಹೈಲ್ ತನ್ವೀರ್ ಮತ್ತು ಕೀರನ್ ಪೊಲಾರ್ಡ್ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ.
ಇನ್ನು ಈ ಪಂದ್ಯದಲ್ಲಿ ವಾಲ್ಟನ್ 47, ಕೆನ್ನರ್ ಲೂಯಿಸ್ 48, ಹೈದರ್ ಅಲಿ 45, ರೋವ್ಮೆಲ್ ಪೊವೆಲ್ 38 ಮತ್ತು ಆ್ಯಂಡ್ರೆ ರಸೆಲ್ ಅಜೇಯ 50 ರನ್ಗಳ ನೆರವಿನಿಂದ ಜಮೈಕಾ ತಂಡ 255 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಲೂಸಿಯಾ ಕಿಂಗ್ಸ್ 17.3 ಓವರ್ಗಳಲ್ಲಿ 135ಕ್ಕೆ ಆಲೌಟ್ ಆಗುವ ಮೂಲಕ 120 ರನ್ಗಳ ಹೀನಾಯ ಸೋಲು ಕಂಡಿತು.
ಇದನ್ನು ಓದಿ:CPL ನಲ್ಲಿ ಕ್ರಿಸ್ ಗೇಲ್ ಸ್ಫೋಟಕ ಸಿಕ್ಸ್.. ಹೊಡೆತಕ್ಕೆ ಒಡೆದು ಹೋಯ್ತು ಕಿಟಕಿ ಗ್ಲಾಸ್!