ETV Bharat / sports

ಮಹಿಳಾ ವಿಶ್ವಕಪ್: ನ್ಯೂಜಿಲ್ಯಾಂಡ್​​ ವಿರುದ್ಧ 141 ರನ್​ಗಳ ಬೃಹತ್ ಜಯ ಸಾಧಿಸಿದ ಆಸ್ಟ್ರೇಲಿಯಾ - ಆಸ್ಟ್ರೇಲಿಯಾ ಮಹಿಳಾ ತಂಡ

ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 270 ರನ್​ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್​ ತಂಡ 30.2 ಓವರ್​ಗಳಲ್ಲಿ ಕೇವಲ 128ರನ್​ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲಿಗೆ ತುತ್ತಾಯಿತು.

ಮಹಿಳಾ ವಿಶ್ವಕಪ್
ಮಹಿಳಾ ವಿಶ್ವಕಪ್
author img

By

Published : Mar 13, 2022, 4:45 PM IST

ವೆಲ್ಲಿಂಗ್ಟನ್: ಅತಿಥೇಯ ನ್ಯೂಜಿಲ್ಯಾಂಡ್​ ವಿರುದ್ಧ ಆಲ್​ರೌಂಡ್ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡ 141 ರನ್​ಗಳ ಬೃಹತ್ ಜಯದೊಂದಿಗೆ ಐಸಿಸಿ ಮಹಿಳಾ ವಿಶ್ವಕಪ್​ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ.

ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 270 ರನ್​ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್​ ತಂಡ 30.2 ಓವರ್​ಗಳಲ್ಲಿ ಕೇವಲ 128ರನ್​ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲಿಗೆ ತುತ್ತಾಯಿತು.

ಆಸ್ಟ್ರೇಲಿಯಾ ತಂಡದ ಪರ ಆಲ್​ರೌಂಡರ್​ ಎಲೀಸ್‌ ಪೆರ್ರಿ 86 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 68, ತಹಿಲಾ ಮೆಕ್​ಗ್ರಾತ್​ 56 ಎಸೆತಗಳಲ್ಲಿ 57, ಗಾರ್ಡ್ನರ್​ 18 ಎಸೆತಗಳಲ್ಲಿ ತಲಾ 4 ಬೌಂಡರಿ-ಸಿಕ್ಸರ್​ಗಳ ಸಹಿತ ಅಜೇಯ 48 ರನ್​ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು.

ನ್ಯೂಜಿಲ್ಯಾಂಡ್ ಪರ ಲೀ ತಹುಹು 53ಕ್ಕೆ 3, ಅಮೆಲಿಯಾ ಕೌರ್, ಹೇಲಿ ಜಾನ್ಸೆನ್​, ಮೆಕಾಯ್ ಮತ್ತು ಹನ್ನಾ ರೋವ್ ತಲಾ ಒಂದು ವಿಕೆಟ್ ಪಡೆದಿದ್ದರು.

270 ರನ್​ಗಳನ್ನು ಬೆನ್ನಟ್ಟಿದ ಕಿವೀಸ್​ ಆಸೀಸ್ ಬೌಲರ್​ಗಳಿಗೆ ಉತ್ತರಿಸಲಾಗದೇ ಕೇವಲ 128ಕ್ಕೆ ತನ್ನಾಟ ಮುಗಿಸಿತು. ಹಿರಿಯ ಬ್ಯಾಟರ್ ಆ್ಯಮಿ ಸ್ಯಾಟರ್ಥ್​ವೇಟ್​ 44ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಡರು. ತಂಡದ ಸ್ಟಾರ್ ಬ್ಯಾಟರ್​ಗಳಾದ ಸೂಜಿ ಬೇಟ್ಸ್(16), ಸೋಫಿ ಡಿವೈನ್(6), ಅಮೆಲಿಯಾ ಕೆರ್​(1), ಮ್ಯಾಡಿ ಗ್ರೀನ್(3) ಕೇಟಿ ಮಾರ್ಟಿನ್(19) ವೈಫಲ್ಯ ಅನುಭವಿಸಿದರು.

ಕಾಂಗರೂ ಪರ ಡಾರ್ಸಿ ಬ್ರೌನ್ 22ಕ್ಕೆ3, ಅಮಂಡ ವೆಲ್ಲಿಂಗ್ಟನ್ 34ಕ್ಕೆ2, ಆ್ಯಶ್ಲೇ ಗಾರ್ಡ್ನರ್​ 15ಕ್ಕೆ2 ಎಲಿಸ್ ಪೆರ್ರಿ, ಮೆಗನ್ ಶೂಟ್​ ಮತ್ತು ಮೆಕ್​ಗ್ರಾತ್ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ:ತಮಗೆ ಸಿಕ್ಕಿದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೌರ್​ ಜೊತೆ ಹಂಚಿಕೊಂಡ ಸ್ಮೃತಿ ಮಂಧಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.