ETV Bharat / sports

ಆಸ್ಟ್ರೇಲಿಯಾ ತಂಡದ ನಾಯಕನಾಗಿ ಅಲೆಕ್ಸ್ ಕ್ಯಾರಿ ನೇಮಕ - ವೆಸ್ಟ್​ ಇಂಡೀಸ್ ಪ್ರವಾಸದಲ್ಲಿ ಆಸ್ಟ್ರೇಲಿಯಾ

ಅಲೆಕ್ಸ್​ ಕ್ಯಾರಿ ಈ ಹಿಂದೆ ಬಿಗ್​ಬ್ಯಾಶ್​ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್​ ಮತ್ತು ಸೌತ್​ ಆಸ್ಟ್ರೇಲಿಯಾ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.

Alex Carey to captain Australia
ಆಸ್ಟ್ರೆಲಿಯಾ ತಂಡದ ನಾಯಕನಾಗಿ ಅಲೆಕ್ಸ್ ಕ್ಯಾರಿ ನೇಮಕ
author img

By

Published : Jul 20, 2021, 10:40 PM IST

ಸೇಂಟ್‌ ಲೂಸಿಯಾ: ಆ್ಯರೋನ್ ಫಿಂಚ್ ಗಾಯದ ಕಾರಣ ವೆಸ್ಟ್​ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ವಿಕೆಟ್​ ಕೀಪರ್ ಅಲೆಕ್ಸ್ ಕ್ಯಾರಿ ನಾಯಕನಾಗಿ ಆಯ್ಕೆಯಾಗಿದ್ದಾರೆ.

ವಿಂಡೀಸ್​ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಈಗಾಗಲೇ 4-1ರಲ್ಲಿ ಕಳೆದುಕೊಂಡಿರುವ ಆಸ್ಟ್ರೇಲಿಯಾ ತಂಡಕ್ಕೆ ಏಕದಿನ ಸರಣಿ ಆರಂಭವಾಗುವ ಮೊದಲೇ ದೊಡ್ಡ ಆಘಾತ ಎದುರಾಗಿದೆ. ಮೊಣಕಾಲು ಗಾಯದಿಂದ ಬಳಲುತ್ತಿರುವುದರಿಂದ ಮೊದಲ ಪಂದ್ಯದಿಂದ ಹೊರಬಿದ್ದಿದ್ದಾರೆ. ಹಾಗಾಗಿ ವಿಕೆಟ್​ ಕೀಪರ್​ ಅಲೆಕ್ಸ್ ಕ್ಯಾರಿ ತಂಡವನ್ನು ಮುನ್ನಡೆಸಲಿದ್ದಾರೆ.

ಕ್ಯಾರಿ ಈ ಹಿಂದೆ ಬಿಗ್​ಬ್ಯಾಶ್​ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್​ ಮತ್ತು ಸೌತ್​ ಆಸ್ಟ್ರೇಲಿಯಾ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.

ಆ್ಯರೋನ್ ಫಿಂಚ್ ಚೇತರಿಸಿಕೊಳ್ಳುವ ತನಕ ತಂಡವನ್ನು ಮುನ್ನಡೆಸಲು ನನಗೆ ಅವಕಾಶ ಸಿಕ್ಕಿರುವುದು ತುಂಬಾ ಗೌರವ ಎನಿಸಿದೆ. ಆಸ್ಟ್ರೇಲಿಯಾ ತಂಡದ ನಾಯಕನಾಗಿರುವುದು ಶ್ರೇಷ್ಠ ಗೌರವಗಳಲ್ಲಿ ಒಂದಾಗಿದೆ ಮತ್ತು ಅದನ್ನು ಸ್ವೀಕರಿಸುತ್ತಿರುವುದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಕ್ಯಾರಿ ಹೇಳಿದ್ದಾರೆ.

ಇದನ್ನೂ ಓದಿ: 16 ತಿಂಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಶತಕ ಸಿಡಿಸಿ ಅಬ್ಬರಿಸಿದ ಕೆ.ಎಲ್ ರಾಹುಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.