ETV Bharat / sports

ಶ್ರೀಲಂಕಾ ಸರಣಿಗೂ ಮುನ್ನ ಶತಕ ಸಿಡಿಸಿ ಫಾರ್ಮ್​ಗೆ ಮರಳಿದ ಅಜಿಂಕ್ಯ ರಹಾನೆ

44ಕ್ಕೆ 3 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಯುವ ಆಟಗಾರ ಸರ್ಫರಾಜ್​ ಖಾನ್​ ಜೊತೆಗೂಡಿದ ರಹಾನೆ 4ನೇ ವಿಕೆಟ್​ ಜೊತೆಯಾಟದಲ್ಲಿ 200ಕ್ಕೂ ಹೆಚ್ಚು ರನ್​ಗಳ ಜೊತೆಯಾಟ ನಡೆಸಿ ಕ್ರೀಸ್​ನಲ್ಲಿದ್ದಾರೆ. ಸರ್ಫರಾಜ್​ 191 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್​ಗಳ ನೆರವಿನಿಂದ ಶತಕ ಪೂರ್ಣಗೊಳಿಸಿ ಆಡುತ್ತಿದ್ದಾರೆ.

Ajinkya Rahane hits century
ಅಜಿಂಕ್ಯ ರಹಾನೆ ಶತಕ
author img

By

Published : Feb 17, 2022, 5:03 PM IST

ಅಹ್ಮದಾಬಾದ್​: ಹಾಲಿ ರಣಜಿ ಚಾಂಪಿಯನ್ ಸೌರಾಷ್ಟ್ರ ವಿರುದ್ಧ ಆಕರ್ಷಕ ಶತಕ ಸಿಡಿಸುವ ಮೂಲಕ ಭಾರತದ ಅನುಭವಿ ಬ್ಯಾಟರ್​ ಅಜಿಂಕ್ಯ ರಹಾನೆ ಶ್ರೀಲಂಕಾ ಸರಣಿಗೂ ಮುನ್ನ ಫಾರ್ಮ್​ ಕಂಡುಕೊಳ್ಳವಲ್ಲಿ ಯಶಸ್ವಿಯಾಗಿದ್ದಾರೆ.

ಅಹ್ಮದಾಬಾದ್​​ನಲ್ಲಿ ನಡೆಯುತ್ತಿರುವ ಡಿ ಗುಂಪಿನ ಮೊದಲ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿದ್ದ ಮುಂಬೈ ತಂಡ ರಹಾನೆ ಮತ್ತು ಸರ್ಫರಾಜ್​ ಖಾನ್​ ಅವರ ಶತಕದಿಂದ ಚೇತರಿಸಿಕೊಂಡಿದೆ. ಫಾರ್ಮ್​ ಕಳೆದುಕೊಂಡು ಭಾರತ ತಂಡದಿಂದ ಹೊರ ಬೀಳುವ ಭೀತಿಯಲ್ಲಿದ್ದ ಅಜಿಂಕ್ಯ ರಹಾನೆ 212 ಎಸೆತಗಳಲ್ಲಿ ಶತಕ ಪೂರೈಸಿದರು. ಅವರ ಇನ್ನಿಂಗ್ಸ್​ನಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್​ಗಳು ಸೇರಿದ್ದವು. ಇದು ಅವರು 36ನೇ ಪ್ರಥಮ ದರ್ಜೆ ಶತಕವಾಗಿದೆ.

44ಕ್ಕೆ 3 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಯುವ ಆಟಗಾರ ಸರ್ಫರಾಜ್​ ಖಾನ್​ ಜೊತೆಗೂಡಿದ ರಹಾನೆ 4ನೇ ವಿಕೆಟ್​ ಜೊತೆಯಾಟದಲ್ಲಿ 200ಕ್ಕೂ ಹೆಚ್ಚು ರನ್​ಗಳ ಜೊತೆಯಾಟ ನಡೆಸಿ ಕ್ರೀಸ್​ನಲ್ಲಿದ್ದಾರೆ. ಸರ್ಫರಾಜ್​ 191 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್​ಗಳ ನೆರವಿನಿಂದ ಶತಕ ಪೂರ್ಣಗೊಳಿಸಿ ಆಡುತ್ತಿದ್ದಾರೆ.

ನಾಯಕ ಪೃಥ್ವಿ ಶಾ(1)ಮ,ಆಕಾಶ್​ ಗೋಮಲ್ (8) ಸಚಿನ್​ ಯಾದವ್​(19) ಕೇವಲ 13 ಓವರ್​ಗಳ ಒಳಗೆ ವಿಕೆಟ್ ಒಪ್ಪಿಸಿದರು. ರಹಾನೆ ದಕ್ಷಿಣ ದಕ್ಷಿಣ ಆಫ್ರಿಕಾ ವಿರುದ್ಧ 6 ಇನ್ನಿಂಗ್ಸ್​ಗಳಲ್ಲಿ ಕೇವಲ 136 ರನ್​ಗಳಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. 2021ರಲ್ಲಿ 20.8ರ ಸರಾಸರಿಯಲ್ಲಿ ರನ್​ಗಳಿಸಿದ್ದ ರಹಾನೆಯನ್ನು ಈಗಾಗಲೆ ಉಪನಾಯಕ ಸ್ಥಾನದಿಂದ ಕೆಳಗಿಳಿಸಲಾಗಿತ್ತು.

ಇದನ್ನೂ ಓದಿ:Ranji Trophy: ರೈಲ್ವೇಸ್​ ವಿರುದ್ಧ 83 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ ಮನೀಶ್ ಪಾಂಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.