ETV Bharat / sports

ವಾರ್ನರ್​ಗೆ ಅನ್ಯಾಯ: ಮೊದಲು ನಾಯಕತ್ವ, ಈಗ ತಂಡದಿಂದಲೂ ಹೊರಗಿಟ್ಟ ಹೈದರಾಬಾದ್​...

ಪಂದ್ಯಕ್ಕೂ ಮುನ್ನ ಮಾತನಾಡಿದ ಸನ್​ರೈಸರ್ಸ್​ ಹೈದರಾಬಾದ್ ಕೋಚ್​ ಟಾಮ್ ಮೂಡಿ, ವಾರ್ನರ್ ಈ ಪಂದ್ಯದಲ್ಲಿ ಆಡುತ್ತಿಲ್ಲ ಎಂಬುದನ್ನು ಖಚಿತಪಡಿಸುತ್ತೇನೆ. ತಂಡದ ಸಂಯೋಜನೆಯ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ಡೇವಿಡ್ ವಾರ್ನರ್
ಡೇವಿಡ್ ವಾರ್ನರ್
author img

By

Published : May 2, 2021, 3:38 PM IST

ನವದೆಹಲಿ: ಆಡಿರುವ 6 ಪಂದ್ಯಗಳಿಂದ 5 ಸೋಲು ಕಂಡಿರುವ ಸನ್​ರೈಸರ್ಸ್ ಹೈದರಾಬಾದ್ ತಂಡ ಶನಿವಾರವಷ್ಟೇ ಡೇವಿಡ್ ವಾರ್ನರ್​ರನ್ನು ನಾಯಕತ್ವದಿಂದ ಕೆಳಗಿಳಿಸಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್​​ರನ್ನು ತಂಡದ ನೂತನ ನಾಯಕನನ್ನಾಗಿ ನೇಮಿಸಿತ್ತು. ಇದೀಗ ಇಂದು ನಡೆಯುತ್ತಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಿಂದಲೂ ವಾರ್ನರ್ ಅವರನ್ನು ಕೈಬಿಡುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದೆ.

ಪಂದ್ಯಕ್ಕೂ ಮುನ್ನ ಮಾತನಾಡಿದ ಸನ್​ರೈಸರ್ಸ್​ ಹೈದರಾಬಾದ್ ಕೋಚ್​ ಟಾಮ್ ಮೂಡಿ, ವಾರ್ನರ್ ಈ ಪಂದ್ಯದಲ್ಲಿ ಆಡುತ್ತಿಲ್ಲ ಎಂಬುದನ್ನು ಖಚಿತಪಡಿಸುತ್ತೇನೆ. ತಂಡದ ಸಂಯೋಜನೆಯ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಂತದಲ್ಲಿ ಇಬ್ಬರು ವಿದೇಶಿ ಬ್ಯಾಟ್ಸ್​ಮನ್​ಗಳು, ಒಬ್ಬ ಆಲ್​ರೌಂಡರ್​ ಮತ್ತು ರಶೀದ್​ ಖಾನ್ ಉತ್ತಮ ಸಂಯೋಜನೆಯಾಗಿದೆ. ಬೈರ್​ಸ್ಟೋವ್ ಹಾಗೂ ಕೇನ್ ವಿಲಿಯಮ್ಸನ್ ಉತ್ತಮ ಫಾರ್ಮ್​ನಲ್ಲಿದ್ದಾರೆ. ಹಾಗಾಗಿ ಕಠಿಣವಾದರೂ ವಾರ್ನರ್​ ವಿರುದ್ಧ ಈ ನಿರ್ಧಾರವನ್ನು ನಾವು ತೆಗೆದುಕೊಳ್ಳಲೇಬೇಕಾಗಿದೆ ಎಂದು ಮೂಡಿ ಹೇಳಿದ್ದಾರೆ.

ಈ ವಿಷಯ ಕೇಳಿ ಡೇವಿಡ್ ಆಘಾತಕ್ಕೊಳಗಾಗಿದ್ದಾರೆ ಮತ್ತು ನಿರಾಶೆಗೂ ಒಳಗಾಗಿದ್ದಾರೆ. ಆದರೆ ಫ್ರಾಂಚೈಸಿಯ ದೃಷ್ಟಿಕೋನದಿಂದ ತಂಡಕ್ಕೆ ಒಳ್ಳೆಯದನ್ನು ಮಾಡಬೇಕಾಗಿರುವುದರಿಂದ ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ಶನಿವಾರ ಪ್ರಕಟಣೆಯ ಮೂಲಕ ಎಸ್​ಆರ್​ಹೆಚ್ ನಾಯಕತ್ವ ಬದಲಾವಣೆಯ ವಿಚಾರವನ್ನು ತಿಳಿಸಿತ್ತು. 2021 ಆವೃತ್ತಿಯ ಮುಂದಿನ ಸನ್​ರೈಸರ್ಸ್ ಹೈದರಾಬಾದ್​ನ ಮುಂದಿನ ಪಂದ್ಯಗಳಿಗೆ ಕೇನ್​ ವಿಲಿಯಮ್ಸನ್​ರನ್ನು​ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಜೊತೆಗೆ ಟೀಮ್​ ಮ್ಯಾನೇಜ್​ಮೆಂಟ್ ರಾಜಸ್ಥಾನ್ ರಾಯಲ್ಸ್​ ವಿರುದ್ದದ ಪಂದ್ಯಗಳಲ್ಲಿ ವಿದೇಶಿ ಆಟಗಾರರ ಸಂಯೋಜನೆಯನ್ನು ಕೂಡ ಬದಲಾಯಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು.

ಕಳೆದ ನಾಲ್ಕು ಆವೃತ್ತಿಗಳಲ್ಲೂ ನಾಯಕನಾಗಿದ್ದ ವಾರ್ನರ್ ಸ್ಪೆಷಲಿಸ್ಟ್​ ಬ್ಯಾಟ್ಸ್​ಮನ್ ಆಗಿ ಮುಂದುವರಿಯಲಿದ್ದಾರೆ ಮತ್ತು ತಂಡದ ಯಶಸ್ಸಿಗೆ ಮೈದಾನದ ಹೊರಗೆ ಮತ್ತು ಒಳಗೆ ನೆರವಾಗಲಿದ್ದಾರೆ ಎಂದು ತಿಳಿಸಲಾಗಿತ್ತು.

ಇದನ್ನು ಓದಿ:ಐಪಿಎಲ್​ನಲ್ಲಿ ಸತತ ಸೋಲಿನ ನಿರಾಸೆ: ವಿಲಿಯಮ್ಸನ್​ಗೆ ನಾಯಕತ್ವ ಬಿಟ್ಟುಕೊಟ್ಟ ವಾರ್ನರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.