ಅಬುಧಾಬಿ: ಸೂಪರ್ 12ನ ಎರಡನೇ ಗುಂಪಿನಲ್ಲಿ ಸೆಮಿಫೈನಲ್ ಪ್ರವೇಶಿಸಲು ನಿರ್ಣಾಯಕವಾಗಿರುವ ನ್ಯೂಜಿಲ್ಯಾಂಡ್ ಪಂದ್ಯದಲ್ಲಿ ಅಫ್ಘಾನಿಸ್ತಾನ ನಾಯಕ ಮೊಹಮ್ಮದ್ ನಬಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
ಅಂಕಪಟ್ಟಿಯಲ್ಲಿ ನ್ಯೂಜಿಲ್ಯಾಂಡ್ 2ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ತಂಡದ 4 ನೇ ಸ್ಥಾನದಲ್ಲಿದ್ದು, ಇಂದಿನ ಪಂದ್ಯವನ್ನು ಗೆದ್ದರೆ ಸೆಮಿಫೈನಲ್ ಆಸೆ ಜೀವಂತವಾಗಿರಲಿದೆ. ಮತ್ತು ಭಾರತಕ್ಕೂ ಕೊನೆಯ ಅವಕಾಶ ಸಿಗಲಿದೆ. ಒಂದು ವೇಳೆ ನ್ಯೂಜಿಲ್ಯಾಂಡ್ ತಂಡ ಜಯಿಸಿದರೆ ಸೂಪರ್ 12ನ 2ನೇ ಗುಂಪಿನಲ್ಲಿ ಪಾಕಿಸ್ತಾನ ಜೊತೆಗೆ ಸೆಮಿಫೈನಲ್ ಪ್ರವೇಶಿಸಲಿದೆ.
-
Toss update from Abu Dhabi 🪙
— ICC (@ICC) November 7, 2021 " class="align-text-top noRightClick twitterSection" data="
Afghanistan have won the toss and elected to bat.
Who are you backing in this one?#T20WorldCup | #NZvAFG | https://t.co/oXtbojeRda pic.twitter.com/cEFSM7LhCu
">Toss update from Abu Dhabi 🪙
— ICC (@ICC) November 7, 2021
Afghanistan have won the toss and elected to bat.
Who are you backing in this one?#T20WorldCup | #NZvAFG | https://t.co/oXtbojeRda pic.twitter.com/cEFSM7LhCuToss update from Abu Dhabi 🪙
— ICC (@ICC) November 7, 2021
Afghanistan have won the toss and elected to bat.
Who are you backing in this one?#T20WorldCup | #NZvAFG | https://t.co/oXtbojeRda pic.twitter.com/cEFSM7LhCu
ಕಿವೀಸ್ ಈಗಾಗಲೇ ಬಲಿಷ್ಠ ಭಾರತ ಸೇರಿದಂತೆ ನಮೀಬಿಯಾ, ಸ್ಕಾಟ್ಲೆಂಡ್ ವಿರುದ್ಧ ಜಯ ಸಾಧಿಸಿದ ವಿಶ್ವಾಸದಲ್ಲಿದೆ. ಇದೀಗ ವಿಶ್ವಶ್ರೇಷ್ಠ ಸ್ಪಿನ್ ಬೌಲರ್ಗಳನ್ನು ಹೊಂದಿರುವ ಅಫ್ಘಾನಿಸ್ತಾನದ ವಿರುದ್ಧ ನಿರ್ಣಾಯಕ ಪಂದ್ಯವನ್ನು ಗೆದ್ದು 3ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ.
ಇತ್ತ ಅಫ್ಘಾನಿಸ್ತಾನ ತಂಡ ಇದೇ ಮೊದಲ ಬಾರಿಗೆ ನೇರ ಅರ್ಹತೆ ಪಡೆದುಕೊಂಡಿದ್ದು ತಮ್ಮ ಮೊದಲ ವಿಶ್ವಕಪ್ ಸೆಮಿಫೈನಲ್ಗೆ ಎದುರು ನೋಡುತ್ತಿದೆ.
ನ್ಯೂಜಿಲೆಂಡ್ (ಪ್ಲೇಯಿಂಗ್ XI): ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಕೇನ್ ವಿಲಿಯಮ್ಸನ್(ನಾಯಕ), ಡೆವೊನ್ ಕಾನ್ವೇ(ವಿಕೀ), ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆ್ಯಡಮ್ ಮಿಲ್ನೆ, ಟಿಮ್ ಸೌಥಿ, ಇಶ್ ಸೋಧಿ, ಟ್ರೆಂಟ್ ಬೌಲ್ಟ್
ಅಫ್ಘಾನಿಸ್ತಾನ (ಪ್ಲೇಯಿಂಗ್ XI): ಹಜರತುಲ್ಲಾ ಝಾಜೈ, ಮೊಹಮ್ಮದ್ ಶಹಜಾದ್(ವಿಕೀ), ರಹಮಾನುಲ್ಲಾ ಗುರ್ಬಾಜ್, ನಜೀಬುಲ್ಲಾ ಜದ್ರಾನ್, ಗುಲ್ಬದಿನ್ ನೈಬ್, ಮೊಹಮ್ಮದ್ ನಬಿ(ನಾಯಕ), ಕರೀಂ ಜನತ್, ರಶೀದ್ ಖಾನ್, ನವೀನ್-ಉಲ್-ಹಕ್, ಹಮೀದ್ ಹಸನ್, ಮುಜೀಬ್ ಉರ್ ರೆಹಮಾನ್