ETV Bharat / sports

ತಾಲಿಬಾನ್‌ ಅಟ್ಟಹಾಸದ ನಡುವೆ ಕ್ರಿಕೆಟ್ ಸರಣಿಗೆ ರೆಡಿಯಾದ ಅಫ್ಘನ್​ ಕ್ರಿಕೆಟ್ ಮಂಡಳಿ - ಅಫ್ಘನ್​ ಕ್ರಿಕೆಟ್

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮೆರೆಯುತ್ತಿದ್ದರೂ ಕ್ರಿಕೆಟ್​ ಆಡಲು ನಮ್ಮ ತಂಡ ಸಿದ್ಧವಾಗಿದೆ ಎಂದು ಅಫ್ಘನ್​ ಕ್ರಿಕೆಟ್ ಮಂಡಳಿ ಮುಖ್ಯಸ್ಥರು ದೃಢಪಡಿಸಿದ್ದಾರೆ.

Afghan board
ಅಫ್ಘನ್​ ಕ್ರಿಕೆಟ್ ಮಂಡಳಿ
author img

By

Published : Aug 20, 2021, 10:16 AM IST

ಕಾಬೂಲ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯು ಸೆಪ್ಟೆಂಬರ್ 3ರಂದು ಶ್ರೀಲಂಕಾದಲ್ಲಿ ಆರಂಭವಾಗಲಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮೆರೆಯುತ್ತಿದ್ದರೂ ಕ್ರಿಕೆಟ್​ ಆಡಲು ನಮ್ಮ ತಂಡ ಸಿದ್ಧವಾಗಿದೆ ಎಂದು ಅಫ್ಘನ್​ ಕ್ರಿಕೆಟ್ ಮಂಡಳಿ ಹೇಳಿದೆ.

"ನಮ್ಮ ಕ್ರಿಕೆಟ್ ತಂಡವು ಶ್ರೀಲಂಕಾದಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಸರಣಿಗೆ ತಯಾರಿ ನಡೆಸುತ್ತಿದೆ. ನಾವು ಶ್ರೀಲಂಕಾಗೆ ತಂಡವನ್ನು ಕಳುಹಿಸಲು ಸಿದ್ಧರಾಗಿದ್ದೇವೆ" ಎಂದು ಎಸಿಬಿ ಸಿಇಒ ಹಮೀದ್ ಶಿನ್ವಾರಿ ಮಾಧ್ಯಮಕ್ಕೆ ಹೇಳಿದರು.

"ಅಫ್ಘಾನಿಸ್ತಾನದಲ್ಲಿರುವ ಪರಿಸ್ಥಿತಿಯಿಂದ ವಿಮಾನ ಕಾರ್ಯಾಚರಣೆ ಕಷ್ಟವಾಗುತ್ತಿದೆ. ಆದ್ದರಿಂದ ವಾಯುಸೇವೆ ಆರಂಭಗೊಂಡ ತಕ್ಷಣ ನಾವು ಶ್ರೀಲಂಕಾಗೆ ತಂಡ ಕಳುಹಿಸುತ್ತೇವೆ. ಮುಂದಿನ ನಾಲ್ಕು ದಿನಗಳಲ್ಲಿ ತಂಡವು ನಿರ್ಗಮಿಸುವ ಸಾಧ್ಯತೆಯಿದೆ" ಎಂದು ಅವರು ತಿಳಿಸಿದರು.

ಪಾಕ್​-ಅಫ್ಘನ್​ನ ಮೂರು ಪಂದ್ಯಗಳು ಶ್ರೀಲಂಕಾದ ಹ್ಯಾಂಬಂಟೊಟದಲ್ಲಿ ಸೆ.3ರಿಂದ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.