ನವದೆಹಲಿ: ಅಫ್ಘಾನಿಸ್ತಾನ ಕ್ರಿಕೆಟ್ ತಂಡ 2022 - 23ರ ಎಫ್ಟಿಪಿ ವೇಳಾಪಟ್ಟಿಯಲ್ಲಿರುವಂತೆ ಭಾರತದ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಎರಡೂ ತಂಡಗಳಿಗೂ ಇದು ಮೊದಲ ದ್ವಿಪಕ್ಷೀಯ ಏಕದಿನ ಸರಣಿಯಾಗಿದೆ.
ಅಫ್ಘಾನಿಸ್ತಾನ ಮುಂದಿನ ಎರಡೂ ವರ್ಷಗಳ ವೇಳಾಪಟ್ಟಿಯಲ್ಲಿ 52 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. ಇದರಲ್ಲಿ 37 ಏಕದಿನ ಪಂದ್ಯಗಳು, 12 ಟಿ-20 ಮತ್ತು 3 ಟೆಸ್ಟ್ ಪಂದ್ಯಗಳನ್ನಾಡಲಿದೆ.
ಈ ಅವಧಿಯಲ್ಲಿ ಅಫ್ಘಾನಿಸ್ತಾನ 2022ರ ಏಷ್ಯಾಕಪ್ ಮತ್ತು ಟಿ-20 ವಿಶ್ವಕಪ್ 2023ರಲ್ಲಿ ಮತ್ತೊಂದು ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಕೂ ಸೇರಿವೆ. ಟಿ-20 ವಿಶ್ವಕಪ್ ಸೂಪರ್ ಲೀಗ್ ಭಾಗವಾಗಿ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಭಾರತದಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.
ಭಾರತ ಸರಣಿಗೂ ಮುನ್ನ ನೆದರ್ಲೆಂಡ್ಸ್ , ಜಿಂಬಾಬ್ವೆ, ಬಾಂಗ್ಲಾದೇಶ ವಿರುದ್ಧ 2022ರಲ್ಲಿ 3 ಪಂದ್ಯಗಳ ಏಕದಿನ ಸರಣಿ ಮತ್ತು ಟಿ20 ಸರಣಿಯನ್ನಾಡಲಿದೆ.
2022ರಲ್ಲಿ ಭಾರತದ ಸರಣಿಯ ನಂತರ ಆಸ್ಟ್ರೇಲಿಯಾ ವಿರುದ್ಧ ಟಿ-20 ಸರಣಿಯನ್ನಾಡಲಿರುವ ಆಫ್ಘಾನ್ 2023ರಲ್ಲಿಏಕದಿನ ವಿಶ್ವಕಪ್ ಸೂಪರ್ ಲೀಗ್ ಭಾಗವಾಗಿ ಶ್ರೀಲಂಕಾ, ಪಾಕಿಸ್ತಾನ, ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.
ಇದನ್ನೂ ಓದಿ:ವಿಶ್ರಾಂತಿ ನೀಡುವಂತೆ ಬಿಸಿಸಿಗೆ ವಿರಾಟ್ ಮನವಿ; ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕೊಹ್ಲಿ ಅಲಭ್ಯ!