ETV Bharat / sports

Asia Cup 2023 : ಅಫ್ಘಾನಿಸ್ತಾನ ತಂಡಕ್ಕೆ ಮರಳಿದ ಕರೀಂ ಜನತ್, ನಜಿಬುಲ್ಲಾ ಜದ್ರಾನ್, ಶರಫುದ್ದೀನ್ ಅಶ್ರಫ್.. ಹಷ್ಮತುಲ್ಲಾ ಶಾಹಿದಿಗೆ ನಾಯಕತ್ವದ ಹೊಣೆ - ETV Bharath Kannada news

Afghanistan squad Asia Cup 2023: ಅಫ್ಘಾನಿಸ್ತಾನ ತಂಡದಲ್ಲಿ 2017 ರಲ್ಲಿ ಪಾದಾರ್ಪಣೆ ಮಾಡಿ ಕೊನೆಯ ಬಾರಿಗೆ ನಂತರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದ ಕರೀಂ ಜನತ್ ಏಷ್ಯಾಕಪ್​ನ ಟೀಮ್​ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

Asia Cup 2023
Asia Cup 2023
author img

By ETV Bharat Karnataka Team

Published : Aug 27, 2023, 8:18 PM IST

ಕಾಬೂಲ್ (ಅಫ್ಘಾನಿಸ್ತಾನ): ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 17ರ ವರೆಗೆ ನಡೆಯಲಿರುವ ಏಷ್ಯಾಕಪ್‌ಗಾಗಿ ಕರೀಂ ಜನತ್, ನಜಿಬುಲ್ಲಾ ಜದ್ರಾನ್ ಮತ್ತು ಶರಫುದ್ದೀನ್ ಅಶ್ರಫ್ ಅವರನ್ನೊಳಗೊಂಡ 17 ಸದಸ್ಯರ ಅಫ್ಘಾನಿಸ್ತಾನದ ತಂಡವನ್ನು ಪ್ರಕಟಿಸಲಾಗಿದೆ. ಹಷ್ಮತುಲ್ಲಾ ಶಾಹಿದಿ ನಾಯಕತ್ವದಲ್ಲಿ ತಂಡ ಮೈದಾನಕ್ಕಿಳಿಯಲಿದೆ.

ಜನತ್ ಅವರು ಫೆಬ್ರವರಿ 2017 ರಲ್ಲಿ ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ತಾನಕ್ಕಾಗಿ ತಮ್ಮ ಮೊದಲ ಏಕದಿನ ಆಡಿದರು. ಅದೇ ಅವರ ಕೊನೆಯ ಸರಣಿಯಾಗಿತ್ತು. ನಂತರ ಅವರು ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ, ಈಗ ಏಷ್ಯಾಕಪ್​ಗೆ ಕಮ್​ಬ್ಯಾಕ್​ ಮಾಡಿದ್ದಾರೆ. ಆದರೆ ಜನತ್ ಅವರು ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್ ಸೇರಿದಂತೆ ಟಿ20 ಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಈ ವರ್ಷ ತಮ್ಮ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.

  • Afghanistan Asia Cup squad:

    Hashmatullah Shahidi (C), Ibrahim Zadran, Riaz Hassan, Rahmat Shah, Gurbaz, Najib Zadran, Rashid, Ikram Alikhil, Karim Janat, Naib, Nabi, Mujeeb, Farooqi, Ashraf, Noor, Abdul Rahman and Saleem. pic.twitter.com/Uz1GiOFdrg

    — Mufaddal Vohra (@mufaddal_vohra) August 27, 2023 " class="align-text-top noRightClick twitterSection" data=" ">

ಜನವರಿ 2022 ರಿಂದ ಏಕದಿನಗಳನ್ನು ಆಡದ ಅಶ್ರಫ್ ಮೀಸಲು ಸ್ಪಿನ್ನರ್ ಆಗಿ ತಂಡಕ್ಕೆ ಪುನರಾಗಮನ ಮಾಡುತ್ತಾರೆ. ಮೊಣಕಾಲಿನ ಗಾಯದಿಂದಾಗಿ ಇತ್ತೀಚೆಗೆ ಮುಕ್ತಾಯಗೊಂಡ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿರುವ ನಜೀಬುಲ್ಲಾ ಅವರನ್ನು ತಂಡದಲ್ಲಿ ಸೇರಿಸಲಾಗಿದೆ. ಏಷ್ಯಾಕಪ್​ ಆರಂಭಕ್ಕೂ ಮುನ್ನ ನಜೀಬುಲ್ಲಾ ಗಾಯದಿಂದ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನ ವಿರುದ್ಧದ ಮೂರು ಏಕದಿನ ಸರಣಿಯಲ್ಲಿ ಅಫ್ಘಾನಿಸ್ತಾನ ತಂಡದಲ್ಲಿ ಆಡಿದ್ದ ವೇಗದ ಬೌಲರ್‌ಗಳಾದ ಮೊಹಮ್ಮದ್ ಸಲೀಮ್ ಸಫಿ ಮತ್ತು ಅಬ್ದುಲ್ ರಹಮಾನ್ ಅವರು ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಆದರೆ ಫರೀದ್ ಅಹ್ಮದ್ ಮತ್ತು ವಫಾದರ್ ಮೊಮಂಡ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

ಅಜ್ಮತುಲ್ಲಾ ಒಮರ್ಜಾಯ್ ಅವರು ಸೈಡ್ ಸ್ಟ್ರೈನ್‌ನಿಂದಾಗಿ ಸ್ಪರ್ಧೆಯಿಂದ ಹೊರಗುಳಿದರೆ, ಗುಲ್ಬದಿನ್ ನೈಬ್ ತಂಡದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಶಾಹಿದುಲ್ಲಾ ಕಮಾಲ್ ಅವರನ್ನು ಹೊರಗಿಟ್ಟು ಹಶ್ಮತುಲ್ಲಾ ಶಾಹಿದಿಗೆ ನಾಯಕತ್ವದ ಹೊಣೆ ಕೊಡಲಾಗಿದೆ. ಅಫ್ಘಾನಿಸ್ತಾನವು ಏಷ್ಯಾಕಪ್‌ನ ಬಿ ಗುಂಪಿನಲ್ಲಿದೆ ಮತ್ತು ಬಾಂಗ್ಲಾದೇಶ ವಿರುದ್ಧ ಸೆಪ್ಟೆಂಬರ್ 3 ರಂದು ಲಾಹೋರ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಸೆಪ್ಟೆಂಬರ್ 5 ರಂದು ಅದೇ ಮೈದಾನದಲ್ಲಿ ಗುಂಪಿನ ಎರಡನೇ ಪಂದ್ಯವನ್ನು ಆಡಲಿದೆ.

ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್​ ಕೀಪರ್​), ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರಹಮತ್ ಷಾ, ಹಷ್ಮತುಲ್ಲಾ ಶಾಹಿದಿ (ನಾಯಕ), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್​), ರಶೀದ್ ಖಾನ್, ಗುಲ್ಬದಿನ್ ನೈಬ್, ಕರೀಮ್ ಜನತ್, ಅಶ್ರಫ್ ಖಾನ್, ಗುಲ್ಬದಿನ್ ನೈಬ್, ಕರೀಮ್ ಜನತ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ಮೊಹಮ್ಮದ್ ಸಲೀಮ್ ಮತ್ತು ಫಜಲ್ಹಕ್ ಫಾರೂಕಿ3

ಇದನ್ನೂ ಓದಿ: ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಏಷ್ಯನ್​ ರಾಷ್ಟ್ರಗಳ ಪ್ರಾಬಲ್ಯ: ಈ ಸಲದ ವಿಶ್ವಕಪ್​ ಯಾರಿಗೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.