ETV Bharat / sports

'ಕೊಹ್ಲಿಯನ್ನು ಮೆಚ್ಚುತ್ತೇನೆ.. ಆದ್ರೆ, ಅವರ ಆಕ್ರಮಣಕಾರಿ ಮನೋಭಾವ ಇತಿಮಿತಿಯಲ್ಲಿರಬೇಕು..' - ವಿರಾಟ್ ಕೊಹ್ಲಿ

ಕೆಲವೊಮ್ಮೆ ಅವರು ತಮ್ಮ ಆಕ್ರಮಣಶೀಲತೆ ಕಡಿಮೆಯಾದ ಮೇಲೆ, ಸ್ವಲ್ಪ ಸಮಯ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಾರೆ. ಆದರೆ, ಕೆಲವೊಮ್ಮೆ ಅವರ ಈ ಗುಣವೇ ನನಗೆ ಇಷ್ಟವಾಗುತ್ತದೆ. ಅವರೊಬ್ಬ ಒಳ್ಳೆಯ ನಾಯಕ, ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು" ಎಂದು ತಮ್ಮ ಹೇಳಿಕೆಯಲ್ಲಿ ಸೇರಿಸಿದ್ದಾರೆ..

Farokh Enginee
ವಿರಾಟ್ ಕೊಹ್ಲಿ
author img

By

Published : Aug 22, 2021, 8:08 PM IST

ಲಂಡನ್ : ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿಯ ಆಕ್ರಮಣಶೀಲತೆಯನ್ನು ನಾನು ಮೆಚ್ಚಿಕೊಳ್ಳುತ್ತೇನೆ. ಆದರೆ, ಅವರ ಆಕ್ರಮಣಕಾರಿ ಮನೋಭಾವನೆ ಮಿತಿಯಲ್ಲಿದ್ದರೆ ಒಳ್ಳೆಯದೆಂದು ನಾನು ಭಾವಿಸುತ್ತೇನೆ ಎಂದು ಮಾಜಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್​ಮನ್ ಫಾರೂಕ್ ಇಂಜಿನಿಯರ್​ ಹೇಳಿದ್ದಾರೆ.

ಲಾರ್ಡ್ಸ್‌ನಲ್ಲಿ ನಡೆದ 2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 151 ರನ್​​ಗಳ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಈ ಪಂದ್ಯದ ವೇಳೆ ವಿರಾಟ್​ ಕೊಹ್ಲಿ ಕೆಲವು ಆಟಗಾರರೊಂದಿಗೆ ವಾಕ್​ ಸಮರ ನಡೆಸಿದ್ದರು. ಹಾಗಾಗಿ, ಭಾರತ ತಂಡದ ನಾಯಕ ಕೊಹ್ಲಿ ಎದುರಾಳಿಗಳೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿಕೊಳ್ಳುವಾಗ ಮಾತಿನ ಮೇಲೆ ಎಚ್ಚರಿಕೆ ವಹಿಸಬೇಕೆಂದು 83 ವರ್ಷದ ಮಾಜಿ ಕ್ರಿಕೆಟಿಗ ಫಾರೂಖ್ ಇಂಜಿನಿಯರ್ ಒತ್ತಾಯಿಸಿದ್ದಾರೆ.

"ವಿರಾಟ್​ ಗುಣವನ್ನು ನಾನು ಒಪ್ಪಿಕೊಳ್ಳುತ್ತೇನೆ. ಆತ ಆಕ್ರಮಣಕಾರಿ ನಾಯಕನಾಗಿದ್ದಾನೆ. ಇದು ಒಳ್ಳೆಯದು. ಆದರೆ, ಇದು ಖಂಡಿತವಾಗಿಯೂ ಮಿತಿಯಲ್ಲಿರಬೇಕು. ಇಲ್ಲದಿದ್ದರೆ ಅಂಪೈರ್ ಅಥವಾ ಮ್ಯಾಚ್ ರೆಫರಿ ಮಧ್ಯಪ್ರವೇಶಿಸಬಹುದು" ಎಂದು ಇಂಜಿನಿಯರ್ ಹೇಳಿದರು.

"ಕೆಲವೊಮ್ಮೆ ಅವರು ತಮ್ಮ ಆಕ್ರಮಣಶೀಲತೆ ಕಡಿಮೆಯಾದ ಮೇಲೆ, ಸ್ವಲ್ಪ ಸಮಯ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಾರೆ. ಆದರೆ, ಕೆಲವೊಮ್ಮೆ ಅವರ ಈ ಗುಣವೇ ನನಗೆ ಇಷ್ಟವಾಗುತ್ತದೆ. ಅವರೊಬ್ಬ ಒಳ್ಳೆಯ ನಾಯಕ, ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು" ಎಂದು ತಮ್ಮ ಹೇಳಿಕೆಯಲ್ಲಿ ಸೇರಿಸಿದ್ದಾರೆ.

ಬುಮ್ರಾ ಮತ್ತು ಶಮಿ ಜೊತೆಯಾಟ ಮೆಚ್ಚಿಕೊಂಡಿರುವ ಫಾರೂಕ್, ಎದುರಾಳಿಗಳು(ಇಂಗ್ಲೆಂಡ್​) ಸ್ಲೆಡ್ಜಿಂಗ್ ಮಾಡಿದಾಗ ನಿಮ್ಮ ಬ್ಯಾಟ್ಸ್‌ಮನ್ ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. ಆದರೆ, ಬುಮ್ರಾ ಮತ್ತು ಶಮಿ ಅದಕ್ಕೆ ತಮ್ಮದೇ ರೀತಿಯಲ್ಲಿ ಸ್ಲೆಡ್ಜಿಂಗ್​ಗೆ ಉತ್ತರಿಸಿದರು.

ಅವರಿಗೆ ಉತ್ತಮವಾಗಿ ಬ್ಯಾಟಿಂಗ್ ಮಾಡಲು ಬಾರದಿರಬಹುದು. ಆದರೆ, ಹೇಗೆ ವಿಕೆಟ್​ ಉಳಿಸಿಕೊಳ್ಳಬೇಕೆಂಬುದು ಗೊತ್ತಿದೆ. ಈ ಮೂಲಕ ಅವರು ವಿರಾಟ್ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವಂತೆ ಮಾಡಿದರು. ಇದು ಇಂಗ್ಲಿಷರಿಗೆ ಆದ ಅಪಮಾನವಾಗಿತ್ತು ಎಂದು ಫಾರೂಖ್ ಇಂಜಿನಿಯರ್ ಹೇಳಿದ್ದಾರೆ.

ಇದನ್ನು ಓದಿ:3ನೇ ಟೆಸ್ಟ್​ನಲ್ಲಿ ಪೂಜಾರ ಅಥವಾ ರಹಾನೆ ಬದಲಿಗೆ ಸೂರ್ಯಕುಮಾರ್​ ಆಡಬೇಕು : ಫಾರೂಕ್​ ಇಂಜಿನಿಯರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.