ETV Bharat / sports

ಆಪ್ರೋ- ಏಷ್ಯನ್ ಕ್ರಿಕೆಟ್: ಮತ್ತೆ ಪ್ರಾರಂಭಿಸಲು ಎಸಿಸಿ ಮುಖ್ಯಸ್ಥ ಜಯ್ ಶಾ ಚಿಂತನೆ - ಆಫ್ರಿಕನ್ ಕ್ರಿಕೆಟ್ ಅಸೋಸಿಯೇಷನ್‌

ಆಫ್ರೋ-ಏಷ್ಯನ್ ಕ್ರಿಕೆಟ್ ಪ್ರಾಜೆಕ್ಟ್​ ಅನ್ನು ಮತ್ತೆ ಪ್ರಾರಂಭಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಜಯ್ ಶಾ ಅವರು ಉತ್ಸುಕರಾಗಿದ್ದು, ಕಾರ್ಯಸಾಧ್ಯವಾದ ಮತ್ತು ತಾಂತ್ರಿಕವಾಗಿ ಸಮರ್ಥನೀಯವಾದ ಮಾದರಿಯನ್ನು ಪ್ರಸ್ತಾಪಿಸಿದ್ದಾರೆ.

ACC chief Jay Shah plans to revive Afro-Asian Cricket Project
ಆಪ್ರೋ- ಏಷ್ಯನ್ ಕ್ರಿಕೆಟ್ ಯೋಜನೆ ಮತ್ತೆ ಪ್ರಾರಂಭಿಸಲು ಎಸಿಸಿ ಮುಖ್ಯಸ್ಥ ಜಯ್ ಶಾ ಚಿಂತನೆ
author img

By

Published : Mar 31, 2022, 12:02 PM IST

ನವದೆಹಲಿ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಜಯ್ ಶಾ ಅವರು ಆಫ್ರೋ-ಏಷ್ಯನ್ ಕ್ರಿಕೆಟ್ ಪ್ರಾಜೆಕ್ಟ್​ ಅನ್ನು ಮತ್ತೆ ಪ್ರಾರಂಭಿಸಲು ಉತ್ಸುಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಾಣಿಜ್ಯಿಕವಾಗಿ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಾದ ಮತ್ತು ತಾಂತ್ರಿಕವಾಗಿ ಸಮರ್ಥನೀಯವಾದ ಮಾದರಿಯನ್ನು ಪ್ರಸ್ತಾಪಿಸಿದ್ದಾರೆ.

ಆಫ್ರೋ-ಏಷ್ಯನ್ ಕ್ರಿಕೆಟ್ ಪ್ರಾಜೆಕ್ಟ್​ ತಳಮಟ್ಟದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಸಹಕರಿಸುತ್ತದೆ. ಅರ್ಹತೆ ಪಡೆಯುವ ಮೂಲಕ 16 ವರ್ಷದೊಳಗಿನ, 19 ವರ್ಷದೊಳಗಿನ ಮತ್ತು 23 ವರ್ಷದೊಳಗಿನವರ ಪಂದ್ಯಗಳಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ತರಬೇತುದಾರರು ಆಟಗಾರರಿಗೆ ಮಾರ್ಗದರ್ಶನ ನೀಡುತ್ತಾರೆ. ಈ ಮೂಲಕ ಆಫ್ರೋ ಏಷ್ಯಾದ ಭಾಗದಲ್ಲಿ ಹೆಚ್ಚಿನ ಆಟಗಾರರ ಕೌಶಲ್ಯ ಪರೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಜಯ್ ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಫ್ರೋ-ಏಷ್ಯನ್ ಕ್ರಿಕೆಟ್ ಪ್ರಾಜೆಕ್ಟ್​ ಅನ್ನು ಮೊದಲು ಜಗಮೋಹನ್ ದಾಲ್ಮಿಯಾ ಅವರು 2005ರಲ್ಲಿ ಮೊದಲು ಪ್ರಸ್ತಾಪಿಸಿದ್ದರು. ಆದರೆ, 2009ರಲ್ಲಿ ಈ ಪ್ರಾಜೆಕ್ಟ್ ಯಶಸ್ವಿಯಾಗದೇ ಅಂತ್ಯಗೊಂಡಿತ್ತು. ಏಷ್ಯಾ ಮತ್ತು ಆಫ್ರಿಕಾ ಎರಡೂ 47 ಸದಸ್ಯ ರಾಷ್ಟ್ರಗಳನ್ನು ಹೊಂದಿವೆ.

ಆಫ್ರಿಕನ್ ಕ್ರಿಕೆಟ್ ಅಸೋಸಿಯೇಷನ್‌ನ ಸದಸ್ಯ ರಾಷ್ಟ್ರಗಳು 570 ಮಿಲಿಯನ್‌ಗಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿವೆ. ಆಫ್ರೋ-ಏಷ್ಯಾನ್ ಕ್ರಿಕೆಟ್ ಪ್ರಾಜೆಕ್ಟ್ ಮತ್ತೆ ಬಂದರೆ ಆಫ್ರಿಕನ್ ಕ್ರಿಕೆಟ್ ಅಸೋಸಿಯೇಷನ್‌ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಎರಡಕ್ಕೂ ಲಾಭವಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021: ಏ.1 ರಂದು ಲೋಗೋ, ಸಾಂಗ್, ಜೆರ್ಸಿ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.