ಹೈದರಾಬಾದ್: ಮೊಹಮ್ಮದ್ ಸಿರಾಜ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿ.ವಿ.ಎಸ್ ತಿಳಿಸಿದ್ದಾರೆ. ವೇಗದ ಬೌಲರ್‌ಗಳು ಹೊಂದಿರಬೇಕಾದ ಎರಡು ಮುಖ್ಯ ಗುಣಗಳಾದ ವೇಗ ಮತ್ತು ಚಲನೆಯನ್ನು ದೀರ್ಘಾವದಿಯವರೆಗೆ ನಿರ್ವಹಿಸುವ ಕಲೆಯನ್ನು ಅವರು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಮೊಹಮ್ಮದ್ ಸಿರಾಜ್ ದೀರ್ಘಾವದಿಯ ಸ್ಪೆಲ್ ಮಾಡುವು ಸಾಮರ್ಥ್ಯವಿದೆ ಎಂದು ಲೆಜೆಂಡರಿ ಬ್ಯಾಟ್ಸ್ಮನ್ ಸುನೀಲ್ ಗವಾಸ್ಕರ್ ಹೇಳಿದ ನಂತರ ಲಕ್ಷ್ಮಣ್ ಹೈದರಾಬಾದ್ ಬೌಲರ್ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನ್ಯೂಜಿಲ್ಯಾಂಡ್ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸ್ಥಾನ ಪಡೆಯುವ ಆಸಕ್ತಿ ಇದೆ ಎಂದು ಹೇಳಿದರು.
ಸಿರಾಜ್ ಒಬ್ಬ ಕೌಶಲ್ಯವುಳ್ಳ ಬೌಲರ್, ಯಾವುದೇ ಬೌಲರ್ಗಳಿಗಾದರೂ ಎರಡು ಪ್ರಮುಖ ಗುಣಗಳ ಇರಬೇಕಿರುತ್ತದೆ. ಮೊದಲಿಗೆ ಬ್ಯಾಟ್ಸ್ಮನ್ಗಳ ಕಣ್ಣೆರಚಿ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯ ಇರಬೇಕು. ಸಿರಾಜ್ ಆ ಗುಣವನ್ನು ಹೊಂದಿದ್ದಾರೆ. ಎರಡನೇಯದು ವೇಗದ ಬೌಲರ್‌ಗಳು ದೀರ್ಘಾವಧಿಯ ಸ್ಪೆಲ್ಗಳನ್ನು ಮಾಡಲು ಸಮರ್ಥರಾಗಿರಬೇಕು. ಈ ಸಾಮರ್ಥ್ಯವೂ ಕೂಡ ಸಿರಾಜ್ ಹೊಂದಿದ್ದಾರೆ.
ಸಿರಾಜ್ ಪ್ರಚಂಡ ಶಕ್ತಿ ಹೊಂದಿದ್ದಾರೆ. ಅವರು ಮೊದಲೆರಡು ಸ್ಪೆಲ್ನಲ್ಲಿ ಮಾಡಿದ ಓವರ್ಗಳಲ್ಲಿ ಮಾಡಿದ ವೇಗದಲ್ಲೇ ಮೂರನೇ ಸ್ಪೆಲ್ ಕೂಡ ಮಾಡಬಲ್ಲರು ಎಂದು ಲಕ್ಷ್ಮಣ್ ಹೇಳಿದ್ದಾರೆ.
ಸಿರಾಜ್ ಆಸ್ಟ್ರೆಲಿಯಾ ಪ್ರವಾಸದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅವರು ಟೂರ್ನಿಯಲ್ಲಿ ಭಾರತದ ಪರ ಗರಿಷ್ಠ ಓವರ್ಗಳನ್ನು ಬೌಲಿಂಗ್ ಮಾಡಿದ್ದರು.
ಇದನ್ನು ಓದಿ: ಭಾರತ ತಂಡಕ್ಕಾಗಿ ಆಡುತ್ತಿದ್ದರೂ ಅಮ್ಮ ಈ ಕಾರಣದಿಂದ ಸದಾ ಚಿಂತಿಸುತ್ತಿದ್ದರು: ಕೆ ಎಲ್ ರಾಹುಲ್