ETV Bharat / sports

ಕಳಪೆ ಫಾರ್ಮ್​ನಿಂದ ಹೊರಬರಲು ಕೊಹ್ಲಿಗೆ ಸಲಹೆ ನೀಡಿದ ಎಬಿಡಿ

ನೆಚ್ಚಿನ ಸ್ನೇಹಿತನ ಪ್ರಸ್ತುತ ಫಾರ್ಮ್​ ಸಮಸ್ಯೆಯ ಬಗ್ಗೆ ಎಎಫ್​ಪಿ ಸುದ್ದಿ ಏಜೆನ್ಸಿಯ ಜೊತೆ ಮಾತನಾಡಿರುವ ಎಬಿಡಿ, " ಒಬ್ಬ ಬ್ಯಾಟ್ಸ್‌ಮನ್ ಆಗಿ ನೀವು ಕೆಟ್ಟ ಫಾರ್ಮ್‌ನಿಂದ ಕೇವಲ ಒಂದು ಅಥವಾ ಎರಡು ಕೆಟ್ಟ ಆಟಗಳಿಂದ ದೂರದಲ್ಲಿದ್ದೀರಿ. ಇದು ಮುಂದುವರಿಯುತ್ತಿದ್ದರೆ ಕಮ್‌ಬ್ಯಾಕ್‌ ಮಾಡುವುದು ಕಷ್ಟ. ಇದು ಮನಸು ಮತ್ತು ಮಾನಸಿಕ ಶಕ್ತಿಯ ನಡುವಿನ ಹೋರಾಟವಾಗಿದೆ" ಎಂದು ತಿಳಿಸಿದ್ದಾರೆ.

author img

By

Published : May 4, 2022, 6:56 PM IST

ಎಬಿ ಡಿ ವಿಲಿಯರ್ಸ್ ವಿರಾಟ್ ಕೊಹ್ಲಿ

ಮುಂಬೈ: ಸತತ ವೈಫಲ್ಯಅನುಭವಿಸುತ್ತಿರುವ ಭಾರತ ತಂಡದ ಮಾಜಿ ನಾಯಕ ಹಾಗೂ ಆರ್​ಸಿಬಿ ಅನುಭವಿ ಬ್ಯಾಟರ್​ ವಿರಾಟ್​ ಕೊಹ್ಲಿ ಅವರಿಗೆ ನೆಚ್ಚಿನ ಸ್ನೇಹಿತರಾಗಿರುವ ಆರ್​ಸಿಬಿಯ ಮಾಜಿ ಬ್ಯಾಟರ್​ ಎಬಿ ಡಿ ವಿಲಿಯರ್ಸ್​ ಫಾರ್ಮ್​ಗೆ ಮರಳುವುದಕ್ಕೆ ಮಹತ್ವದ ಸಲಹೆ ನೀಡಿದ್ದಾರೆ.

ವಿರಾಟ್ ಕೊಹ್ಲಿ 2022ರ ಆವೃತ್ತಿಯಲ್ಲಿ 10 ಪಂದ್ಯಗಳನ್ನಾಡಿದ್ದು, ಒಂದೇ ಒಂದು ಅರ್ಧಶತಕದ ಸಹಿತ ಕೇವಲ 186 ರನ್​ಗಳಿಸಿದ್ದಾರೆ. ಬಂದಿರುವ ಒಂದು ಅರ್ಧಶತಕವನ್ನು ಅವರು 45 ಎಸೆತಗಳಲ್ಲಿ ಪಡೆದಿದ್ದಾರೆ. 2020ರಿಂದಲೂ ಕೊಹ್ಲಿ ಎಲ್ಲ ಸ್ವರೂಪದ ಕ್ರಿಕೆಟ್‌ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. 2019ರ ನವೆಂಬರ್‌ ತಿಂಗಳಲ್ಲಿ ಬಾಂಗ್ಲಾದೇಶ ವಿರುದ್ಧ ಅವರು ತಮ್ಮ ಕೊನೆಯ ಶತಕ ಸಿಡಿಸಿದ್ದರು. ಅಂದಿನಿಂದ ಇಲ್ಲಿಯವರೆಗೂ 100ಕ್ಕೂ ಹೆಚ್ಚು ಇನ್ನಿಂಗ್ಸ್ ಆಡಿದ್ದರೂ ಶತಕ ಗಳಿಸಲಾಗಿಲ್ಲ. ಮೂರಂಕಿ ವೈಯಕ್ತಿಕ ಮೊತ್ತ ದಾಖಲಿಸಲು ಸಾಧ್ಯವಾಗಿಲ್ಲ.

ನೆಚ್ಚಿನ ಸ್ನೇಹಿತನ ಪ್ರಸ್ತುತ ಫಾರ್ಮ್​ ಸಮಸ್ಯೆಯ ಬಗ್ಗೆ ಎಎಫ್​ಪಿ ಸುದ್ದಿ ಏಜೆನ್ಸಿಯ ಜೊತೆ ಮಾತನಾಡಿರುವ ಎಬಿಡಿ, " ಒಬ್ಬ ಬ್ಯಾಟ್ಸ್‌ಮನ್ ಆಗಿ ನೀವು ಕೆಟ್ಟ ಫಾರ್ಮ್‌ನಿಂದ ಕೇವಲ ಒಂದು ಅಥವಾ ಎರಡು ಕೆಟ್ಟ ಆಟಗಳಿಂದ ದೂರದಲ್ಲಿದ್ದೀರಿ. ಇದು ಮುಂದುವರಿಯುತ್ತಿದ್ದರೆ ಕಮ್‌ಬ್ಯಾಕ್‌ ಮಾಡುವುದು ಕಷ್ಟ. ಇದು ಮನಸು ಮತ್ತು ಮಾನಸಿಕ ಶಕ್ತಿಯ ನಡುವಿನ ಹೋರಾಟವಾಗಿದೆ" ಎಂದು ತಿಳಿಸಿದ್ದಾರೆ.

ಮುಂದುವರಿಸಿ, " ನೀವು ರಾತ್ರೋರಾತ್ರಿ ಕೆಟ್ಟ ಆಟಗಾರರಾಗಲು ಸಾಧ್ಯವಿಲ್ಲ. ಅದು ವಿರಾಟ್‌ ಕೊಹ್ಲಿಗೂ ಗೊತ್ತಿದೆ ಮತ್ತು ನನಗೂ ಗೊತ್ತು. ನೀವು ಯೋಚಿಸುವ ಹಾದಿ ಮತ್ತು ನಿಮ್ಮ ಮನಸನ್ನು ಸಜ್ಜುಗೊಳಿಸುವುದರ ಮೇಲೆ ಇದೆಲ್ಲವೂ ಅವಲಂಬಿತವಾಗಿದೆ. ನೀವು ಮೈದಾನಕ್ಕೆ ಬರುವಾಗ, ನಿಮ್ಮ ಮನಸನ್ನು ಸ್ಪಷ್ಟವಾಗಿರಬೇಕು ಹಾಗೂ ನೀವು ಆಡುವಾಗ ಉತ್ಸಾಹದಿಂದಿರಬೇಕು. ಆಗ ಮಾತ್ರ ನೀವು ಇದರಿಂದ ಹೊರಬರುವ ದಾರಿಯನ್ನು ಕಂಡುಕೊಳ್ಳಬಹುದು" ಎಂದು ಕೊಹ್ಲಿ ಹೇಗೆ ಫಾರ್ಮ್​ ಕಂಡುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ವೃದ್ಧಿಮಾನ್​ ಸಹಾಗೆ ಬೆದರಿಕೆ ಹಾಕಿದ ಪತ್ರಕರ್ತನನ್ನು 2 ವರ್ಷ ನಿಷೇಧಿಸಿದ ಬಿಸಿಸಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.