ETV Bharat / sports

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆಸ್ಟ್ರೇಲಿಯಾದ ಆ್ಯರೋನ್​ ಫಿಂಚ್​ ವಿದಾಯ - Aaron Finch retirement from international cricket

ಆಸ್ಟ್ರೇಲಿಯಾ ತಂಡದ ಕ್ರಿಕೆಟಿಗ ಆ್ಯರೋನ್​ ಫಿಂಚ್​- ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ- ಮೂರೂ ಮಾದರಿಯ ಕ್ರಿಕೆಟ್​ಗೆ ಫಿಂಚ್​ ವಿದಾಯ- ಕಳೆದ ವರ್ಷ ಏಕದಿನಕ್ಕೆ ಗುಡ್​ಬೈ

aaron-finch-announces-retirement
ಆ್ಯರೋನ್​ ಫಿಂಚ್​ ವಿದಾಯ
author img

By

Published : Feb 7, 2023, 10:06 AM IST

Updated : Feb 7, 2023, 8:16 PM IST

ಮೆಲ್ಬೋರ್ನ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಆ್ಯರೋನ್ ಫಿಂಚ್ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ಪರವಾಗಿ ದಾಖಲೆಯ 76 ಟಿ20 ಮತ್ತು 55 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಫಿಂಚ್​ ಕ್ರಿಕೆಟ್​ ವೃತ್ತಿ ಬದುಕಿನಿಂದ ಹಿಂದೆ ಸರಿದಿದ್ದಾರೆ. ಇದಲ್ಲದೆ, ಮೂರು ಸ್ವರೂಪಗಳಲ್ಲಿ 254 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದು, 5 ಟೆಸ್ಟ್, 146 ಏಕದಿನ ಮತ್ತು 103 ಟಿ20 ಪಂದ್ಯಗಳನ್ನು ಆಡಿದ್ದಾರೆ.

"ನಾನು 2024 ರ ಮುಂದಿನ ಟಿ20 ವಿಶ್ವಕಪ್‌ನವರೆಗೆ ಆಡುವುದಿಲ್ಲ ಎಂದು ಅರಿತುಕೊಂಡಿದ್ದೇನೆ. ಹೀಗಾಗಿ ಕ್ರಿಕೆಟ್​ನಿಂದ ದೂರ ಸರಿಯಲು ಇದೇ ಉತ್ತಮ ಸಮಯವಾಗಿದೆ. ತಂಡಕ್ಕೆ ಹೊಸ ನಾಯಕ, ಆಟಗಾರನ ಆಯ್ಕೆಗೂ ಇದು ಸಕಾಲವಾಗಿದೆ. ಅಂತಾರಾಷ್ಟ್ರೀಯ ವೃತ್ತಿ ಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಫಿಂಚ್ ಹೇಳಿದ್ದಾರೆ.

ಜನವರಿ 2011 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಫಿಂಚ್ 17 ಏಕದಿನ ಶತಕಗಳು ಮತ್ತು ಎರಡು ಟಿ20 ಶತಕಗಳನ್ನು ಒಳಗೊಂಡಂತೆ 8,804 ರನ್ ಗಳಿಸಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಫಿಂಚ್ ಏಕದಿನ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿ, T20 ಯಲ್ಲಿ ತಂಡದ ನಾಯಕತ್ವವನ್ನು ಮುಂದುವರೆಸಿದ್ದರು.

2020 ರಲ್ಲಿ ಫಿಂಚ್​ ಐಸಿಸಿ ಪುರುಷರ ಟಿ20 ದಶಕದ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. 2021 ರಲ್ಲಿ ಫಿಂಚ್​ ನಾಯಕತ್ವದಲ್ಲಿ ತಂಡ ಟಿ20 ವಿಶ್ವಕಪ್ ಗೆಲುವು ಸಾಧಿಸಿತ್ತು. 2015 ರ ಏಕದಿನ ವಿಶ್ವಕಪ್​ ಗೆದ್ದ ತಂಡದಲ್ಲೂ ಇದ್ದರು. 12 ವರ್ಷಗಳ ವೃತ್ತಿ ಬದುಕಿಗೆ ಕ್ರಿಕೆಟಿಗ ತೆರೆ ಎಳೆದಿದ್ದಾರೆ.

ಕಳೆದ ವರ್ಷ ಏಕದಿನಕ್ಕೆ ಗುಡ್​ಬೈ: ಬ್ಯಾಟಿಂಗ್ ವೈಫಲ್ಯದಿಂದಾಗಿ ಆಸ್ಟ್ರೇಲಿಯಾದ ಸೀಮಿತ ಓವರ್​​​ಗಳ ನಾಯಕ ಆ್ಯರೋನ್​ ಪಿಂಚ್​​ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಏಕದಿನ ಕ್ರಿಕೆಟ್​ನಿಂದ ದಿಢೀರ್​​ ನಿವೃತ್ತಿ ಘೋಷಿಸಿದ್ದರು. ಈ ಕುರಿತು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದರು.

ನ್ಯೂಜಿಲ್ಯಾಂಡ್ ತಂಡದ ಎದುರಿನ ಕೊನೆಯ ಏಕದಿನ ಪಂದ್ಯವಾಡುವ ಮೂಲಕ ಫಿಂಚ್​ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​​ನಿಂದ ಅವರು ಹೊರಗುಳಿದಿದ್ದರು. ಆ್ಯರೋನ್​ ಫಿಂಚ್ ಕಳೆದ ಕೆಲ ತಿಂಗಳುಗಳಿಂದ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಆಸ್ಟ್ರೇಲಿಯಾ ತಂಡದ ಪರ ಫಿಂಚ್​ ಒಟ್ಟು 145 ಏಕದಿನ ಪಂದ್ಯಗಳನ್ನಾಡಿದ್ದು, 5401 ರನ್​​​ಗಳಿಸಿದ್ದಾರೆ. ಇದರಲ್ಲಿ 17 ಶತಕ ಸೇರಿಕೊಂಡಿವೆ. 2020ರಲ್ಲಿ ಏಕದಿನ ಕ್ರಿಕೆಟ್​​ನ ಪ್ಲೇಯರ್​ ಆಫ್​ ದಿ ಇಯರ್​ ಪ್ರಶಸ್ತಿ ಗೆದ್ದಿದ್ದರು. ಜೊತೆಗೆ 2015ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್​ ವಿಜೇತ ತಂಡದ ಭಾಗವಾಗಿದ್ದರು.

ಐಪಿಎಲ್​ನಲ್ಲಿ ಆ್ಯರೋನ್​ ಫಿಂಚ್​: ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಆ್ಯರೋನ್​ ಫಿಂಚ್​ ಇಂಡಿಯನ್​​ ಪ್ರೀಮಿಯರ್ ಲೀಗ್​(ಐಪಿಎಲ್) ​ನಲ್ಲಿ ವಿಶಿಷ್ಟ ದಾಖಲೆ ಮಾಡಿದ್ದರು. ಇರುವ 10 ತಂಡಗಳ ಪೈಕಿ 9 ತಂಡಗಳ ಪರವಾಗಿ ಕಣಕ್ಕಿಳಿದಿದ್ದಾರೆ. ಈ ಬಾರಿಯ ಸೀಸನ್​ನ ಮೆಗಾ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗ ಅಲೆಕ್ಸ್​ ಹೇಲ್ಸ್​ ಬದಲಾಗಿ ಈಗ ಕೆಕೆಆರ್​ ತಂಡ ಸೇರಿದ್ದಾರೆ.

ಆ್ಯರನ್​ ಫಿಂಚ್​ ಮೊದಲ ಬಾರಿಗೆ ರಾಜಸ್ಥಾನ್ ರಾಯಲ್ಸ್ (2010) ತಂಡ ಸೇರಿಕೊಂಡಿದ್ದರು. ಬಳಿಕ ಡೆಲ್ಲಿ ಡೇರ್‌ಡೆವಿಲ್ಸ್ (2011-12), ಪುಣೆ ವಾರಿಯರ್ಸ್ (2013), ಸನ್‌ರೈಸರ್ಸ್ ಹೈದರಾಬಾದ್ (2014), ಮುಂಬೈ ಇಂಡಿಯನ್ಸ್ (2015), ಗುಜರಾತ್ ಲಯನ್ಸ್ (2016-17), ಕಿಂಗ್ಸ್ ಇಲೆವೆನ್​​ ಪಂಜಾಬ್​ (2018) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (2020) ಪರವಾಗಿ ಆಡಿದ್ದರು. ಇದೀಗ ಈ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಐಪಿಎಲ್​ನಲ್ಲಿ ಆಡುತ್ತಿದ್ದಾರೆ.

ಓದಿ: ಅಂತಾರಾಷ್ಟ್ರೀಯ ODI ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿದ ಆ್ಯರೋನ್​​ ಫಿಂಚ್

Last Updated : Feb 7, 2023, 8:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.