ETV Bharat / sports

'ಬಿ ಟೀಮ್' ಹೇಳಿಕೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿರಬೇಕು: ರಣತುಂಗಾ ಕಾಲೆಳೆದ ಚೋಪ್ರಾ - ಪೃಥ್ವಿ ಶಾ

ಶ್ರೀಲಂಕಾ ನೀಡಿದ 263 ರನ್​ಗಳ ಗುರಿ ಬೆನ್ನತ್ತಿದ ಭಾರತ ತಂಡ 36.4 ಓವರ್​ಗಳಲ್ಲಿ ಗುರಿ ತಲುಪಿತು. ಪೃಥ್ವಿ ಶಾ ಕೇವಲ 24 ಎಸೆತಗಳಲ್ಲಿ 43, ಇಶಾನ್ ಕಿಶನ್ 42 ಎಸೆತಗಳಲ್ಲಿ 59 ಮತ್ತು ನಾಯಕ ಶಿಖರ್ ಧವನ್ ಅಜೇಯ 86 ರನ್​ಗಳಿಸಿ ಸುಲಭ ಜಯ ತಂದುಕೊಟ್ಟರು.

Team india
ಭಾರತ ತಂಡ
author img

By

Published : Jul 19, 2021, 9:14 PM IST

ಮುಂಬೈ: ಭಾರತ ತಂಡವನ್ನು ಬಿ ಟೀಮ್ ಎಂದು ಕರೆದಿದ್ದನ್ನು ಗಂಭೀರವಾಗಿ ಪರಿಗಣಿಸಿ ಭಾರತೀಯ ಬ್ಯಾಟ್ಸ್​ಮನ್​ಗಳು ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿರಬೇಕೆಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಲಂಕಾ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗಾ ಅವರ ಕಾಲೆಳೆದಿದ್ದಾರೆ.

ಭಾರತ ಮತ್ತು ಏಕದಿನ ಸರಣಿ ಆರಂಭಕ್ಕೂ ಮುನ್ನ ರಣತುಂಗಾ, ಬಿಸಿಸಿಐ ಭಾರತದ ದ್ವಿತೀಯ ದರ್ಜೆ ತಂಡವನ್ನು ಕಳುಹಿಸಿ ಶ್ರೀಲಂಕಾ ಕ್ರಿಕೆಟ್​ ಮಂಡಳಿಗೆ ಅವಮಾನ ಮಾಡಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಭಾರತೀಯ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ತೀವ್ರವಾಗಿ ಖಂಡಿಸಿದ್ದರು. ಭುವನೇಶ್ವರ್, ಧವನ್, ಪಾಂಡ್ಯ ಬ್ರದರ್ಸ್, ಕುಲ್ದೀಪ್, ಚಹಲ್ ಅಂತಹ ಆಟಗಾರರಿರುವ ಭಾರತ ತಂಡವನ್ನು ದ್ವೀತಿಯ ದರ್ಜೆ ತಂಡ ಎನ್ನುವುದಕ್ಕೂ ಮೊದಲು ಪ್ರಸ್ತುತ ಶ್ರೀಲಂಕಾ ತಂಡದಲ್ಲಿರುವ ಆಟಗಾರರಿಗೆ ಎಷ್ಟು ಅನುಭವವಿದೆ ಎಂದು ಮೊದಲು ಹೋಲಿಕೆ ಮಾಡಿ ಎಂದು ಕಿಡಿಕಾರಿದ್ದರು.

ಇದೀಗ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ ನೀಡಿದ್ದ 263 ರನ್​ಗಳ ಗುರಿಯನ್ನು ಇನ್ನೂ 13.2 ಓವರ್​ಗಳಿರುವಂತೆ ಗೆಲ್ಲುವ ಮೂಲಕ ಭಾರತ ತಂಡದ ಪ್ರಾಬಲ್ಯ ಮೆರೆದಿತ್ತು. ಮೊದಲ ಪಂದ್ಯದ ವಿಶ್ಲೇಷಣೆ ಮಾಡುವ ಸಂದರ್ಭದಲ್ಲಿ ಆಕಾಶ್ ಚೋಪ್ರಾ, ಅರ್ಜುನ್ ರಣತುಂಗಾ ಅವರ ಹೇಳಿಕೆ ಭಾರತೀಯ ಆಟಗಾರರ ಹೃದಯಕ್ಕೆ ತಾಗಿರಬಹುದು ಎಂದು ಕಿಚಾಯಿಸಿದ್ದಾರೆ.

"ಭಾರತೀಯ ಆಟಗಾರರು ರಣತುಂಗಾ ಅವರ ಮಾತುಗಳನ್ನು ಹೃದಯಕ್ಕೆ ತೆಗೆದುಕೊಂಡಿದ್ದೀರಾ? ಏಕೆಂದರೆ 262 ಅಷ್ಟು ಕಡಿಮೆ ಮೊತ್ತವಲ್ಲ. ಆದರೆ ನೀವು ಅದನ್ನು 7 ವಿಕೆಟ್‌ ಮತ್ತು 15 ಓವರ್‌ಗಳು ಬಾಕಿ ಇರುವಾಗ ಪಂದ್ಯ ಗೆದ್ದಿದ್ದೀರಿ" ಎಂದು ಭಾರತೀಯರ ಆಟಗಾರರನ್ನು ಕೇಳುವ ರೀತಿಯಲ್ಲಿ ಶ್ರೀಲಂಕಾ ಮಾಜಿ ನಾಯಕನ ಕಾಲೆಳೆದಿದ್ದಾರೆ.

ಭಾರತ ಯುವ ತಂಡ ಆತಿಥೇಯರನ್ನು ಹೇಗೆ ನಿಶ್ಯಬ್ಧರಾಗಿಸಬೇಕೆಂದು ತೋರಿಸಿಕೊಟ್ಟಿದೆ. ಎದುರಾಳಿ ವಿರುದ್ಧ ಭಾರತ ತೋರಿದ ಪ್ರದರ್ಶನ ಖಂಡಿತ ಅದ್ಭುತವಾಗಿತ್ತು ಎಂದು ಚೋಪ್ರಾ ಭಾರತೀಯ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

263 ರನ್​ಗಳ ಗುರಿ ಬೆನ್ನತ್ತಿದ ಭಾರತ ತಂಡ 36.4 ಓವರ್​ಗಳಲ್ಲಿ ಗುರಿ ತಲುಪಿತು. ಪೃಥ್ವಿ ಶಾ ಕೇವಲ 24 ಎಸೆತಗಳಲ್ಲಿ 43, ಇಶಾನ್ ಕಿಶನ್ 42 ಎಸೆತಗಳಲ್ಲಿ 59 ಮತ್ತು ನಾಯಕ ಶಿಖರ್ ಧವನ್ ಅಜೇಯ 86 ರನ್​ಗಳಿಸಿ ಸುಲಭ ಜಯ ತಂದುಕೊಟ್ಟರು.

ಇದನ್ನೂ ಓದಿ: ಭಾರತ ತಂಡದ ಮುಖ್ಯ ಕೋಚ್ ಆಗಲು ದ್ರಾವಿಡ್ ಪರೀಕ್ಷೆಗೊಳಗಾಗುವ ಅಗತ್ಯವಿಲ್ಲ : ಅಗರ್ಕರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.