ETV Bharat / sports

ವಿರಾಟ್​​ನಂತಹ ಕ್ರಿಕೆಟಿಗರು ಪೀಳಿಗೆಗೆ ಒಮ್ಮೆ ಬರುತ್ತಾರೆ.. ಕಿಂಗ್ ಕೊಹ್ಲಿ ಶ್ಲಾಘಿಸಿದ ಬಿಸಿಸಿಐ..

ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುವ ವಿರಾಟ್ ಕೊಹ್ಲಿ ಅವರ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಭಾರತದ ನಾಯಕನಾಗಿ ಅದ್ಭುತ ಕೊಡುಗೆ ನೀಡಿರುವ ಕೊಹ್ಲಿಯನ್ನು ಶ್ಲಾಘಿಸಿದೆ ಹಾಗೂ ಅವರ ಟೆಸ್ಟ್ ನಾಯಕತ್ವವನ್ನು ತೊರೆಯುವ ನಿರ್ಧಾರವನ್ನು ಸ್ವಾಗತಿಸಿದೆ..

BCCI on Virat Kohli stepping down as Test captain
ವಿರಾಟ್ ಕೊಹ್ಲಿ
author img

By

Published : Jan 16, 2022, 1:54 PM IST

ಭಾರತದ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯುವ ವಿರಾಟ್ ಕೊಹ್ಲಿ ಅವರ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ವಿರಾಟ್ ಅವರಂತಹ ಕ್ರಿಕೆಟಿಗರು ಪೀಳಿಗೆಗೆ ಒಮ್ಮೆ ಬರುತ್ತಾರೆ ಮತ್ತು ಭಾರತೀಯ ಕ್ರಿಕೆಟ್ ಅವರನ್ನು ಪಡೆಯಲು ಅದೃಷ್ಟ ಮಾಡಿದೆ ಎಂದು ಹೇಳಿದೆ.

ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಬಿಸಿಸಿಐ, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ನಾಯಕನಾಗಿ ಅದ್ಭುತ ಕೊಡುಗೆ ನೀಡಿರುವ ಕೊಹ್ಲಿಯನ್ನು ಶ್ಲಾಘಿಸಿದೆ ಹಾಗೂ ಅವರ ಟೆಸ್ಟ್ ನಾಯಕತ್ವವನ್ನು ತೊರೆಯುವ ನಿರ್ಧಾರವನ್ನು ಸ್ವಾಗತಿಸಿದೆ.

ಟೀಂ ಇಂಡಿಯಾದ ಟೆಸ್ಟ್ ನಾಯಕನಾಗಿ ಅತ್ಯುತ್ತಮ ವೃತ್ತಿಜೀವನ ಹೊಂದಿದ್ದ ವಿರಾಟ್ ಕೊಹ್ಲಿಯನ್ನು ಬಿಸಿಸಿಐ ಅಭಿನಂದಿಸುತ್ತದೆ. ನಾಯಕತ್ವದ ಪಾತ್ರದಿಂದ ಹಿಂದೆ ಸರಿಯುವ ಅವರ ನಿರ್ಧಾರವನ್ನು ಬಿಸಿಸಿಐ ಮತ್ತು ಆಯ್ಕೆ ಸಮಿತಿಯು ಗೌರವಿಸುತ್ತದೆ.

ಅವರು ಆಟಗಾರನಾಗಿ ತಮ್ಮ ಕೊಡುಗೆಯನ್ನು ಮುಂದುವರಿಸುತ್ತಾರೆ ಮತ್ತು ಭಾರತೀಯ ಕ್ರಿಕೆಟ್ ಹೆಚ್ಚಿನ ಎತ್ತರವನ್ನು ತಲುಪಲು ಸಹಾಯ ಮಾಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸವನ್ನು ಹೊಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಟೆಸ್ಟ್ ತಂಡದ ನಾಯಕತ್ವಕ್ಕೆ ವಿರಾಟ್‌ ರಾಜೀನಾಮೆ ಅವರ ವೈಯಕ್ತಿಕ ನಿರ್ಧಾರ - ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ

ವಿರಾಟ್ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಾಗಿದ್ದಾರೆ. ಎಂಎಸ್ ಧೋನಿ ಬಳಿಕ ಅಧಿಕಾರ ವಹಿಸಿಕೊಂಡ ನಂತರ, ಅವರು 68 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿ 40 ಪಂದ್ಯಗಳನ್ನು ಗೆಲ್ಲುವಂತೆ ಮಾಡಿದ್ದಾರೆ.

ಟೆಸ್ಟ್ ನಾಯಕನಾಗಿ, ಅವರು 2015ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ಸರಣಿ ಜಯವನ್ನು ದಾಖಲಿಸಿದರು. ಇದು ಭಾರತವು 22 ವರ್ಷಗಳ ನಂತರ ಎಮರಾಲ್ಡ್ ಐಲ್ಯಾಂಡ್‌ನಲ್ಲಿ ದಾಖಲಿಸಿದ ವಿಜಯವಾಗಿದೆ ಎಂದು ಬಿಸಿಸಿಐ ಕೊಹ್ಲಿ ಸಾಧನೆಯನ್ನು ಎತ್ತಿ ಹಿಡಿದಿದೆ.

ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ 2018ರಲ್ಲಿ ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್ ಸರಣಿ ಗೆದ್ದು ಇತಿಹಾಸ ಬರೆಯಿತು. ವೆಸ್ಟ್ ಇಂಡೀಸ್‌ನಲ್ಲಿಯೂ ಸರಣಿಯನ್ನು ತನ್ನ ಪಾಲು ಮಾಡಿಕೊಂಡು, ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಪಡೆಯಿತು.

2021ರಲ್ಲಿ ಐಸಿಸಿ ವರ್ಲ್ಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ಗೆ ಕಾಲಿಟ್ಟಿತು. ನಾಯಕನಾಗಿ ತವರಿನಲ್ಲಿ ಆಡಿದ 31 ಟೆಸ್ಟ್‌ಗಳಲ್ಲಿ 24 ಪಂದ್ಯಗಳನ್ನು ಗೆದ್ದಿರುವ ದಾಖಲೆಯನ್ನು ಕೊಹ್ಲಿ ಹೊಂದಿದ್ದಾರೆ ಎಂದು ಬಿಸಿಸಿಐ ಹೇಳಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.