ETV Bharat / sports

ಕರ್ನಾಟಕ ಅಂಡರ್ 19 ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ಇಬ್ಬರಿಗೆ ಅವಕಾಶ - 2 player from Shivamogga selected state team

ಸಾಕಷ್ಟು ಪ್ರರಿಶ್ರಮ ಪಟ್ಟು ಲೀಗ್ ಮ್ಯಾಚ್ ಸೇರಿ ಹಲವು ಪಂದ್ಯಗಳಲ್ಲಿ ಹೆಚ್ಚು ವಿಕೆಟ್‌ ಪಡೆಯುವ ಮೂಲಕ ಮಿಥೇಶ್ ಕುಮಾರ್ ರಾಜ್ಯ ತಂಡಕ್ಕೆ ಆಯ್ಕೆ ಆಗಿದ್ದಾರೆ. ಈ ಇಬ್ಬರು ಕ್ರೀಡಾಪಟುಗಳು ಆದಷ್ಟು ಬೇಗ ಭಾರತೀಯ ತಂಡ ಪ್ರತಿನಿಧಿಸುವಂತಾಗಲಿ. ಈ ಇಬ್ಬರ ಆಯ್ಕೆ ಶಿವಮೊಗ್ಗಕ್ಕೆ ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ..

ಕರ್ನಾಟಕ ಅಂಡರ್​ 19 ತಂಡ
ಕರ್ನಾಟಕ ಅಂಡರ್​ 19 ತಂಡ
author img

By

Published : Sep 20, 2021, 4:29 PM IST

Updated : Sep 20, 2021, 4:57 PM IST

ಶಿವಮೊಗ್ಗ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ 19 ವರ್ಷದೊಳಗಿನ ರಾಜ್ಯ ತಂಡಕ್ಕೆ ಶಿವಮೊಗ್ಗ ವಲಯದ ಮಿಥೇಶ್ ಕುಮಾರ್ ಹಾಗೂ 19 ವರ್ಷದೊಳಗಿನ ಮಹಿಳಾ ರಾಜ್ಯ ತಂಡಕ್ಕೆ ಶಿವಮೊಗ್ಗದ ನಿರ್ಮಿತ ಸಿ ಜೆ ಅವಕಾಶ ಪಡೆದಿದ್ದಾರೆ ಎಂದು ಕೆಎಸ್​ಸಿಎ ಶಿವಮೊಗ್ಗ ವಲಯದ ಸಂಚಾಲಕರಾದ ಡಿ ಎಸ್ ಅರುಣ್ ತಿಳಿಸಿದ್ದಾರೆ.

ಈ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಶಿವಮೊಗ್ಗ ವಲಯಕ್ಕೆ ಇದೊಂದು ಹೆಮ್ಮೆಯ ವಿಷಯ. ಹಲವು ವರ್ಷಗಳಿಂದ ಇದ್ದ ಕೊರಗು ಈ ವರ್ಷ ನೀಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಶಿವಮೊಗ್ಗಕ್ಕೆ ಸಾಕಷ್ಟು ಸೌಲಭ್ಯ ಒದಗಿಸಿಕೊಟ್ಟಿದೆ.

ಹಾಗಾಗಿ, ಈ ವರ್ಷ ಶಿವಮೊಗ್ಗ ವಲಯದಿಂದ 19 ವರ್ಷದೊಳಗಿನ ಮಹಿಳಾ ತಂಡಕ್ಕೆ ನಿರ್ಮಿತಿ ಹಾಗೂ 19 ವರ್ಷದೊಳಗಿನ ಯುವಕರ ತಂಡಕ್ಕೆ ಮಿಥೇಶ್ ಕುಮಾರ್ ಆಯ್ಕೆ ಆಗಿರುವುದು ಸಂಸತದ ಸಂಗತಿ.

ಕೆಎಸ್​ಸಿಎ ಶಿವಮೊಗ್ಗ ವಲಯದ ಸಂಚಾಲಕರಾದ ಡಿ ಎಸ್ ಅರುಣ್

ಸಾಕಷ್ಟು ಪ್ರರಿಶ್ರಮ ಪಟ್ಟು ಲೀಗ್ ಮ್ಯಾಚ್ ಸೇರಿ ಹಲವು ಪಂದ್ಯಗಳಲ್ಲಿ ಹೆಚ್ಚು ವಿಕೆಟ್‌ ಪಡೆಯುವ ಮೂಲಕ ಮಿಥೇಶ್ ಕುಮಾರ್ ರಾಜ್ಯ ತಂಡಕ್ಕೆ ಆಯ್ಕೆ ಆಗಿದ್ದಾರೆ. ಈ ಇಬ್ಬರು ಕ್ರೀಡಾಪಟುಗಳು ಆದಷ್ಟು ಬೇಗ ಭಾರತೀಯ ತಂಡ ಪ್ರತಿನಿಧಿಸುವಂತಾಗಲಿ. ಈ ಇಬ್ಬರ ಆಯ್ಕೆ ಶಿವಮೊಗ್ಗಕ್ಕೆ ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:ಮಹಿಳೆಯರು ಡ್ಯಾನ್ಸ್​ ಮಾಡ್ತಾರೆ ಎಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ತಾಲಿಬಾನ್​

Last Updated : Sep 20, 2021, 4:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.