ಕೆರಿಬಿಯನ್ ನಾಡಿನ ದೈತ್ಯ ಆಲ್ರೌಂಡರ್ ಆ್ಯಂಡ್ರೆ ರಸೆಲ್ ತಾವು ಎಂದಿಗೂ ಡೇಂಜರಸ್ ಬ್ಯಾಟರ್ ಎಂಬುದನ್ನು ಮತ್ತೆ ಸಾಬೀತು ಮಾಡಿದರು. ಪವರ್ ಹಿಟ್ಟಿಂಗ್ಗೆ ಹೆಸರುವಾಸಿಯಾದ ರಸೆಲ್ 6IXTY ಟೂರ್ನಿಯಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ್ದಾರೆ. ಇದರ ಜೊತೆಗೆ ಕೇವಲ 24 ಬಾಲ್ಗಳಲ್ಲಿ 72 ರನ್ ಕಲೆ ಹಾಕಿದರು.
ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ 6IXTY ಪಂದ್ಯಾವಳಿಯ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ವಿರುದ್ಧದ ಶನಿವಾರ ನಡೆದ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನ ರಸೆಲ್ ಸಿಕ್ಸರ್ಗಳ ಸುರಿಮಳೆ ಸುರಿಸಿದರು. ಬೌಲರ್ ಡೊಮಿನಿಕ್ ಡ್ರೇಕ್ಸ್ ಎಸೆದ 7 ನೇ ಓವರ್‌ನಲ್ಲಿ ರಸೆಲ್ ಕೊನೆಯ ಮೂರು ಎಸೆತಗಳನ್ನು ಸಿಕ್ಸರ್ಗಟ್ಟಿದರು. ಮರು ಓವರ್ನ ಮೂರು ಎಸೆತಗಳನ್ನು ಸತತವಾಗಿ ಸಿಕ್ಸರ್ ಗೆರೆ ದಾಟಿಸಿದರು. 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದರೂ ಇದು ಒಂದೇ ಓವರ್ ಆಗದ ಕಾರಣ ದಾಖಲೆ ಪುಟ ಸೇರಲಿಲ್ಲ. ಪಂದ್ಯದಲ್ಲಿ ಒಟ್ಟು 8 ಸಿಕ್ಸ್ ಸಿಡಿಸಿದ ರಸೆಲ್ 17 ಎಸೆತಗಳಲ್ಲಿ 50 ರನ್ ಬಾರಿಸಿ ಅತಿವೇಗದ ಅರ್ಧಶತಕ ಸಾಧನೆ ಮಾಡಿದರು.
-
Andre Russell SIX SIXES off consecutive SIX balls in the SIXTY tournament.
— 𝗔𝗱𝗶𝘁𝘆𝗮⎊ (@StarkAditya_) August 28, 2022 " class="align-text-top noRightClick twitterSection" data="
8 SIXES and 5 FOURS.@TKRiders pic.twitter.com/jBKyzqwPOj
">Andre Russell SIX SIXES off consecutive SIX balls in the SIXTY tournament.
— 𝗔𝗱𝗶𝘁𝘆𝗮⎊ (@StarkAditya_) August 28, 2022
8 SIXES and 5 FOURS.@TKRiders pic.twitter.com/jBKyzqwPOjAndre Russell SIX SIXES off consecutive SIX balls in the SIXTY tournament.
— 𝗔𝗱𝗶𝘁𝘆𝗮⎊ (@StarkAditya_) August 28, 2022
8 SIXES and 5 FOURS.@TKRiders pic.twitter.com/jBKyzqwPOj
ಏನಿದು 6IXTY ಟೂರ್ನಿ?: ಈ ಟೂರ್ನಿಯು 20 ಓವರ್ಗಳಾಗಿದ್ದು, ತಂಡಗಳು ತಲಾ 10 ಓವರ್ ಆಡುತ್ತವೆ. ಒಂದು ತಂಡದಲ್ಲಿ 6 ಆಟಗಾರರು ಮಾತ್ರ ಇರುತ್ತಾರೆ. ಬೌಲ್ ಮಾಡುವ ತಂಡ ಮೊದಲ ಐದು ಓವರ್ಗಳನ್ನು ಒಂದೇ ತುದಿಯಿಂದ 5 ಓವರ್ ಬೌಲ್ ಮಾಡಬೇಕು. ಬಳಿಕ ಇನ್ನೊಂದು ತುದಿಯಿಂದ 5 ಓವರ್ ಮುಗಿಸಬೇಕು. 10 ಓವರ್ಗಳನ್ನು 45 ನಿಮಿಷದೊಳಗೆ ಪೂರ್ಣಗೊಳಿಸಬೇಕು.
ಇಲ್ಲವಾದಲ್ಲಿ ಕೊನೆಯ ಓವರ್‌ನಲ್ಲಿ ಕ್ಷೇತ್ರರಕ್ಷಕರಿಲ್ಲದೇ ಓವರ್ ಹಾಕಬೇಕು. ಇದು ಬ್ಯಾಟಿಂಗ್ ತಂಡಕ್ಕೆ ಭಾರೀ ಲಾಭವಾಗಲಿದೆ. ಮೊದಲೆರಡು ಓವರ್ಗಳಲ್ಲಿ ತಲಾ 2 ಸಿಕ್ಸರ್ ಸಿಡಿಸಿದರೆ ಪವರ್ಪ್ಲೇ ನೀಡಲಾಗುತ್ತದೆ. ಬಳಿಕ 9 ನೇ ಓವರ್‌ನಲ್ಲಿ ಸಿಕ್ಸರ್ ಸಿಡಿಸಿದರೆ ಮತ್ತೆ ಪವರ್ಪ್ಲೇ ಸಿಗುತ್ತದೆ.
ಇದನ್ನೂ ಓದಿ: ಕೊರೊನಾದಿಂದ ಗುಣಮುಖ: ದುಬೈನಲ್ಲಿ ಭಾರತ ತಂಡ ಸೇರಿದ ಕೋಚ್ ರಾಹುಲ್ ದ್ರಾವಿಡ್