ETV Bharat / sports

West Indies tour: ಐವರು ವೇಗಿಗಳಿಗೆ ಸ್ಥಾನ: ಸೈನಿ, ಮುಕೇಶ್​, ಜಯದೇವ್​​ರಲ್ಲಿ ಪ್ಲೇಯಿಂಗ್​ 11 ಸೇರೋರ್ಯಾರು?

ಭಾರತ ಮುಂದಿನ ತಿಂಗಳ 12 ರಿಂದ ವೆಸ್ಟ್​ ಇಂಡೀಸ್​ ಪ್ರವಾಸ ಕೈಗೊಳ್ಳಲಿದೆ. 15 ಆಟಗಾರರ ತಂಡದಲ್ಲಿ ಐವರು ವೇಗಿಗಳಿಗೆ ಅವಕಾಶ ನೀಡಲಾಗಿದ್ದು, ಯಾರಿಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಗಲಿದೆ ಎಂಬುದು ಪ್ರಶ್ನೆಯಾಗಿದೆ.

west indies tour
west indies tour
author img

By

Published : Jun 24, 2023, 5:58 PM IST

ನವದೆಹಲಿ: ವಿಶ್ವ ಟೆಸ್ಟ್​ ಚಾಂಪಿಯನ್ ಸೋತಿರುವ ಭಾರತ ಮುಂದಿನ ಡಬ್ಲ್ಯೂಟಿಸಿಗಾಗಿ ವೆಸ್ಟ್​ ಇಂಡೀಸ್​ ಸರಣಿ ಮೂಲಕವೇ ಶುಭಾರಂಭ ಮಾಡುವ ಹಾದಿಯಲ್ಲಿದೆ. ತಂಡದ ಹಿರಿಯ ಆಟಗಾರ ಚೇತೇಶ್ವರ್​​ ಪೂಜಾರಾರನ್ನು ಕೈಬಿಡಲಾಗಿದ್ದು, ಮೊಹಮದ್​ ಶಮಿಗೆ ವಿಶ್ರಾಂತಿ ನೀಡಲಾಗಿದೆ. 5 ಯುವ ಬೌಲರ್​ಗಳಿಗೆ ಸರಣಿಯಲ್ಲಿ ಸ್ಥಾನ ನೀಡಲಾಗಿದೆ. ಐವರಲ್ಲಿ ಆಡುವ 11 ರಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎಂಬುದು ಕುತೂಹಲವಾಗಿದೆ.

ಭಾರತ ತಂಡ ಜುಲೈ 12 ರಿಂದ ಆಗಸ್ಟ್ 13 ರವರೆಗೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ. ಜುಲೈ 12ರಿಂದ ಆರಂಭವಾಗಲಿರುವ ಪ್ರವಾಸದಲ್ಲಿ 2 ಟೆಸ್ಟ್ ಪಂದ್ಯಗಳ ಮೊದಲ ಸರಣಿ ನಡೆಯಲಿದೆ. ಬಿಸಿಸಿಐ ಟೆಸ್ಟ್ ಸರಣಿಗೆ 16 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ 5 ವೇಗದ ಬೌಲರ್‌ಗಳನ್ನು ಆಯ್ಕೆ ಮಾಡಲಾಗಿದೆ. ಯಾವ ವೇಗದ ಬೌಲರ್‌ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆದು ಮಿಂಚಲಿದ್ದಾನೆ ಎಂಬುದು ಕಾದು ನೋಡಬೇಕಿದೆ.

ಹಿರಿಯ ವೇಗಿ ಮೊಹಮದ್​ ಶಮಿಗೆ ವೆಸ್ಟ್​ ಇಂಡಿಸ್​ ಸರಣಿಯಿಂದಲೇ ವಿಶ್ರಾಂತಿ ನೀಡಲಾಗಿದೆ. ಇದರಿಂದ ಯುವ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್​ ನೇತೃತ್ವ ವಹಿಸಲಿದ್ದಾರೆ. ಇನ್ನೊಬ್ಬ ವೇಗಿ ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್, ನವದೀಪ್ ಸೈನಿ ಮತ್ತು ಅನ್‌ಕ್ಯಾಪ್ಡ್ ಆಟಗಾರ ಮುಖೇಶ್ ಕುಮಾರ್ ಅವರು ಟೆಸ್ಟ್ ಸರಣಿಗಾಗಿ ಪ್ರಕಟಿಸಲಾದ 16 ಸದಸ್ಯರ ಭಾರತ ತಂಡದಲ್ಲಿ ಆಯ್ಕೆಯಾಗಿದ್ದಾರೆ.

  • NEWS - India’s squads for West Indies Tests and ODI series announced.

    TEST Squad: Rohit Sharma (Capt), Shubman Gill, Ruturaj Gaikwad, Virat Kohli, Yashasvi Jaiswal, Ajinkya Rahane (VC), KS Bharat (wk), Ishan Kishan (wk), R Ashwin, R Jadeja, Shardul Thakur, Axar Patel, Mohd.… pic.twitter.com/w6IzLEhy63

    — BCCI (@BCCI) June 23, 2023 " class="align-text-top noRightClick twitterSection" data=" ">

6+2+3 ಸೂತ್ರ: ಇದಲ್ಲದೇ, ತಂಡದಲ್ಲಿ ಇಬ್ಬರು ಹಿರಿಯ ಸ್ಪಿನ್ನರ್‌ಗಳಾದ ಆರ್​. ಅಶ್ವಿನ್​, ರವೀಂದ್ರ ಜಡೇಜಾ, ಜೊತೆಗೆ ಅಕ್ಷರ್​ ಪಟೇಲ್​ ಕೂಡ ಇದ್ದಾರೆ. ಮೂವರು ವೇಗದ ಬೌಲರ್‌ಗಳೊಂದಿಗೆ ತಂಡ ಮೈದಾನಕ್ಕಿಳಿದರೆ, ಅನುಭವಿ ಆಟಗಾರ ಶಾರ್ದೂಲ್ ಠಾಕೂರ್‌ಗೆ ಪ್ಲೇಯಿಂಗ್11ನಲ್ಲಿ ಆದ್ಯತೆ ಸಿಗಲಿದೆ. ಉಳಿದ ಮೂವರು ಬೌಲರ್‌ಗಳಲ್ಲಿ ಜಯದೇವ್ ಉನದ್ಕತ್, ನವದೀಪ್ ಸೈನಿ ಮತ್ತು ಮುಖೇಶ್ ಕುಮಾರ್​​ರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ.

ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಎಡಗೈ ವೇಗದ ಬೌಲರ್ ಅನ್ನು ತಂಡದಲ್ಲಿ ಉಳಿಸಿಕೊಳ್ಳಲು ಬಯಸಿದರೆ, ಜಯದೇವ್ ಉನದ್ಕತ್ ಮೊದಲ ಆಯ್ಕೆಯಾಗಲಿದ್ದಾರೆ. ಮತ್ತೊಂದೆಡೆ, ಇಬ್ಬರು ಹೊಸ ಮುಖವನ್ನು ಪರಿಚಯಿಸಲು ಮುಂದಾದರೆ, ನವದೀಪ್ ಸೈನಿ ಮತ್ತು ಮುಖೇಶ್ ಕುಮಾರ್ ಅವರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು.

ಮೂವರು ಸ್ಪಿನ್ ಬೌಲರ್‌ಗಳಲ್ಲಿ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮೊದಲ ಆಯ್ಕೆಯಾಗಿದ್ದರೆ, ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಪಡೆಯುವುದು ತುಸು ಕಷ್ಟವೇ. ವೆಸ್ಟ್ ಇಂಡೀಸ್ ಪರಿಸ್ಥಿತಿಯನ್ನು ಪರಿಗಣಿಸಿ ಭಾರತ ತಂಡ 2 ಸ್ಪಿನ್ನರ್‌ಗಳು ಮತ್ತು 3 ವೇಗದ ಬೌಲರ್‌ಗಳ ಸಂಯೋಜನೆಯೊಂದಿಗೆ ಮೈದಾನಕ್ಕೆ ಇಳಿಯುವ ನಿರೀಕ್ಷೆಯಿದೆ.

ಭಾರತ ಟೆಸ್ಟ್ ತಂಡ ಇಂತಿದೆ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆ.ಎಸ್. ಭರತ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.

ಇದನ್ನೂ ಓದಿ: ವೆಸ್ಟ್‌ ಇಂಡೀಸ್ ಪ್ರವಾಸ: ಏಕದಿನ, ಟೆಸ್ಟ್‌ಗೆ ಟೀಂ ಇಂಡಿಯಾ ಪ್ರಕಟ- ಜೈಸ್ವಾಲ್, ರುತುರಾಜ್‌ ಇನ್, ಪೂಜಾರಾ ಔಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.