ಕೇಪ್ಟೌನ್(ದಕ್ಷಿಣ ಆಫ್ರಿಕಾ): ಹರಿಣಗಳ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ಟೀಂ ಇಂಡಿಯಾ 4 ರನ್‌ಗಳ ಅಂತರದ ಸೋಲು ಕಾಣುವ ಮೂಲಕ 3-0 ಅಂತರದಿಂದ ಸರಣಿ ಕೈಚೆಲ್ಲಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀ ಕ್ರಿಕೆಟ್ ಮಂಡಳಿಯಿಂದಲೂ ಫೈನಲ್ ಪಂದ್ಯದ ಶೇ. 40ರಷ್ಟು ದಂಡಕ್ಕೊಳಗಾಗಿದೆ.
-
India fined for slow over-rate in third ODI https://t.co/SsmaMz7oSl via @ICC
— ICC Media (@ICCMediaComms) January 24, 2022 " class="align-text-top noRightClick twitterSection" data="
">India fined for slow over-rate in third ODI https://t.co/SsmaMz7oSl via @ICC
— ICC Media (@ICCMediaComms) January 24, 2022India fined for slow over-rate in third ODI https://t.co/SsmaMz7oSl via @ICC
— ICC Media (@ICCMediaComms) January 24, 2022
ಫೈನಲ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ಟೀಂ ಇಂಡಿಯಾಗೆ ಪಂದ್ಯದ ಶೇ.40ರಷ್ಟು ದಂಡ ವಿಧಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ. ಪಂದ್ಯದ ಮ್ಯಾಚ್ ರೆಫ್ರಿ ನೀಡಿರುವ ಮಾಹಿತಿ ಆಧಾರದ ಮೇಲೆ ದಂಡ ವಿಧಿಸಲಾಗಿದೆ.
ಐಸಿಸಿ ನೀತಿ ಸಂಹಿತೆ 2.22 ಉಲ್ಲಂಘನೆ ನಿಯಮ ಇದರಲ್ಲಿ ಸೇರಿಕೊಂಡಿದೆ. ಟೀಂ ಇಂಡಿಯಾಗೆ 50 ಓವರ್ ಎಸೆಯಲು ನೀಡಿದ್ದ ಸಮಯಕ್ಕಿಂತಲೂ ಹೆಚ್ಚಿನ ಸಮಯಾವಕಾಶ ತೆಗೆದುಕೊಂಡು ಕೊನೆಯ ಎರಡು ಓವರ್ ಎಸೆದಿದೆ. ಹೀಗಾಗಿ, ಈ ದಂಡ ಹಾಕಲಾಗಿದೆ ಎಂದು ಐಸಿಸಿ ತಿಳಿಸಿದೆ.
ಇದನ್ನೂ ಓದಿರಿ: ಸಮಾಜಸೇವೆ ಎಂಬುದು ನಮ್ಮ ರಕ್ತದಲ್ಲಿದೆ : ನಟ ಸೋನು ಸೂದ್
ಟೀಂ ಇಂಡಿಯಾ ವಿರುದ್ಧ ನಡೆದಿದ್ದ ಎರಡನೇ ಏಕದಿನ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾ ಕೂಡ ನಿಧಾನಗತಿಯ ಬೌಲಿಂಗ್ ಮಾಡಿತ್ತು. ಹೀಗಾಗಿ, ಐಸಿಸಿ ಪಂದ್ಯದ ಶೇ. 20ರಷ್ಟು ದಂಡ ವಿಧಿಸಿತ್ತು.
ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ 2-1 ಅಂತರದಲ್ಲಿ ಟೆಸ್ಟ್ ಸರಣಿ ಕೈಚೆಲ್ಲಿತ್ತು. ಇದಾದ ಬಳಿಕ ನಡೆದ ಏಕದಿನ ಸರಣಿಯಲ್ಲೂ 3-0 ಅಂತರದ ಸೋಲು ಕಂಡು ಮುಖಭಂಗಕ್ಕೊಳಗಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ