ETV Bharat / sports

ಐಪಿಎಲ್ 2024 ಹರಾಜು: 77 ಸ್ಥಾನಕ್ಕಾಗಿ 333 ಕ್ರಿಕೆಟಿಗರ ಬಿಡ್, ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ.. - ETV Bharath Kannada news

IPL 2024 players auction: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ 333 ಆಟಗಾರರು ಬಿಡ್​ನಲ್ಲಿ ಇರಲಿದ್ದಾರೆ ಎಂದು ಬಿಸಿಸಿಐ ಸೋಮವಾರ ಘೋಷಿಸಿದೆ.

IPL 2024 players auction
IPL 2024 players auction
author img

By ETV Bharat Karnataka Team

Published : Dec 11, 2023, 9:40 PM IST

ಹೈದರಾಬಾದ್: 2024ರ ಚುಟುಕು ಕ್ರಿಕೆಟ್​​ನ ಜಾತ್ರೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇದ್ದು ತಯಾರಿ ಜೋರಾಗಿಯೇ ನಡೆಯುತ್ತಿದೆ. ಡಿಸೆಂಬರ್ 19 ರಂದು ದುಬೈನ ಕೋಕಾ - ಕೋಲಾ ಅರೆನಾದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಆಟಗಾರರ ಹರಾಜಿನಲ್ಲಿ 333 ಕ್ರಿಕೆಟಿಗರು ಇರಲಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

  • 🚨 NEWS 🚨

    IPL 2024 Player Auction list announced.

    The roster for the Indian Premier League (IPL) 2024 Player Auction has been unveiled. The auction is set to take place in Dubai at the Coca-Cola Arena on December 19th, 2023.

    𝗔𝗹𝗹 𝗧𝗵𝗲 𝗗𝗲𝘁𝗮𝗶𝗹𝘀 🔽… pic.twitter.com/w26igPZRBH

    — IndianPremierLeague (@IPL) December 11, 2023 " class="align-text-top noRightClick twitterSection" data=" ">

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​​) ಹೆಚ್ಚಿನ ಮಹತ್ವ ಪಡೆಯುತ್ತಿದೆ. ಇದಕ್ಕೆ ಕಾರಣ ಐಪಿಎಲ್​ ಮುಗಿದ ಬೆನ್ನಲ್ಲೇ ವೆಸ್ಟ್​ ಇಂಡೀಸ್​ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​​. ಹೀಗಾಗಿ ಐಪಿಎಲ್​ನಲ್ಲಿ ಮಿಂಚಿದ ಆಟಗಾರರಿಗೆ ವಿಶ್ವಕಪ್​​ನಲ್ಲಿ ಆಡಲು ರಾಷ್ಟ್ರೀಯ ತಂಡಗಳು ಕರೆ ನೀಡುವ ಸಾಧ್ಯತೆ ಇದೆ.

333 ಆಟಗಾರರ ಪೈಕಿ 214 ಆಟಗಾರರು ಭಾರತೀಯರು ಮತ್ತು 119 ವಿದೇಶಿ ಆಟಗಾರರು. ಇಬ್ಬರು ಟೆಸ್ಟ್​ ಆಡದ (ಅಸೋಸಿಯೇಟ್) ರಾಷ್ಟ್ರಗಳ ಆಟಗಾರರು ಇದ್ದಾರೆ. ಇದರಲ್ಲಿ ಒಟ್ಟು 116 ಕ್ಯಾಪ್ಡ್ ಆಟಗಾರರು, 215 ಅನ್‌ಕ್ಯಾಪ್ಡ್ ಆಟಗಾರರು ಇಬ್ಬರು ಅಸೋಸಿಯೇಟ್ ರಾಷ್ಟ್ರಗಳ ಆಟಗಾರರು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೋಂದಾಯಿತರ ಸಂಖ್ಯೆ: ಸುಮಾರು 1,166 ಆಟಗಾರರು ಐಪಿಎಲ್​ ಮಿನಿ ಹರಾಜಿಗೆ ನೋಂದಾಯಿಸಿಕೊಂಡಿದ್ದರು. ಇದರಲ್ಲಿ 830 ಭಾರತೀಯರಿದ್ದು, 18 ಕ್ಯಾಪ್ಡ್ ಆಟಗಾರರು ಮತ್ತು 336 ವಿದೇಶಿ ಆಟಗಾರರಿದ್ದಾರೆ.

ಮಿನಿ ಹರಾಜು ನಡೆಯುತ್ತಿರುವುದರಿಂದ 10 ತಂಡಗಳಿಂದ ಖಾಲಿ ಇರುವುದು ಕೇವಲ 77 ಸ್ಥಾನಗಳು ಮಾತ್ರ. ಅದರಲ್ಲಿ 30 ವಿದೇಶಿ ಆಟಗಾರರು ಬಿಡ್​​ನಲ್ಲಿ ಬಿಕರಿ ಆಗಲಿದ್ದಾರೆ. ಉಳಿದ 47 ಆಟಗಾರರು ದೇಶೀಯರಾಗಿದ್ದಾರೆ. 23 ಆಟಗಾರರ ಮೂಲ ಬೆಲೆ 2 ಕೋಟಿಯಿಂದ ಆರಂಭವಾಗುತ್ತಿದೆ. 13 ಆಟಗಾರರು 1.5 ಕೋಟಿ ಮೂಲ ಬೆಲೆಯಲ್ಲಿದ್ದಾರೆ.

2 ಕೋಟಿ ರೂ.ಗಳ ಮೂಲ ಬೆಲೆಯ ಆಟಗಾರರು: ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್, ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್, ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್, ಆಸ್ಟ್ರೇಲಿಯಾದ ನಾಯಕ ಮತ್ತು ವೇಗಿ ಪ್ಯಾಟ್ ಕಮ್ಮಿನ್ಸ್ ಮತ್ತು ಎಡಗೈ ವೇಗಿ ಮಿಕ್ಥೆಲ್ ಸ್ಟಾರ್ಕ್ ಸೇರಿದ್ದಾರೆ. ಅಫ್ಘಾನಿಸ್ತಾನದ ಆಫ್ ಸ್ಪಿನ್ನರ್ ಮುಜೀಬ್ ರಹಮಾನ್ ಮತ್ತು ಇಂಗ್ಲೆಂಡ್ ಲೆಗ್ಗಿ ಆದಿಲ್ ರಶೀದ್ ಅವರ ಮೂಲ ಬೆಲೆ 2 ಕೋಟಿ ರೂ ಆಗಿದೆ.

ಮೊದಲ ಬಾರಿಗೆ ವಿದೇಶದಲ್ಲಿ ಹರಾಜು ಪ್ರಕ್ರಿಯೆ: ಐಪಿಎಲ್ ಹರಾಜು ಡಿಸೆಂಬರ್ 19 ರಂದು ಮಧ್ಯಾಹ್ನ 2.30ಕ್ಕೆ (ಭಾರತೀಯ ಕಾಲಮಾನ) ಆರಂಭವಾಗಲಿದೆ. ಬಿಸಿಸಿಐ ಇದೇ ಮೊದಲ ಬಾರಿಗೆ ಐಪಿಎಲ್​ ಹರಾಜನ್ನು ವಿದೇಶದಲ್ಲಿ ನಡೆಸುತ್ತಿದೆ. ಭಾರತದಲ್ಲಿ ಚುನಾವಣೆ ಇದ್ದಾಗ ಮತ್ತು ಕೋವಿಡ್​ ಸಂದರ್ಭದಲ್ಲಿ ಪಂದ್ಯಗಳಲ್ಲಿ ದುಬೈನಲ್ಲಿ ನಡೆಸಲಾಗಿತ್ತು.

ಇದನ್ನೂ ಓದಿ: ಐಪಿಎಲ್‌ನಿಂದ ನಿವೃತ್ತಿ ನಂತರ ಕ್ಯಾಪ್ಟನ್ ಕೂಲ್ ಈ ಲೀಗ್‌ನಲ್ಲಿ ಆಡ್ತಾರಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.