ಮೀರ್‌ಪುರ್ (ಬಾಂಗ್ಲಾದೇಶ): ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಮಹಿಳಾ ತಂಡ ಗೆದ್ದಿದೆ. ಮಂಗಳವಾರ ಮೀರ್ಪುರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ 8 ವಿಕೆಟ್ಗಳ ರೋಚಕ ಗೆಲುವು ದಾಖಲಿಸಿ, ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಜುಲೈ 13ರಂದು ಕೊನೆಯ ಹಾಗೂ ಅಂತಿಮ ಪಂದ್ಯ ನಡೆಯಲಿದ್ದು, ಕ್ಲೀನ್ಸ್ವಿಪ್ ಭಾರತೀಯ ವನಿತೆಯರು ಕಣ್ಣಿಟ್ಟಿದ್ದಾರೆ.
-
𝐀 𝐭𝐡𝐫𝐢𝐥𝐥𝐢𝐧𝐠 𝐯𝐢𝐜𝐭𝐨𝐫𝐲 𝐚𝐧𝐝 𝐈𝐧𝐝𝐢𝐚 𝐭𝐚𝐤𝐞 𝐚𝐧 𝐮𝐧𝐚𝐬𝐬𝐚𝐢𝐥𝐚𝐛𝐥𝐞 𝟐-𝟎 𝐥𝐞𝐚𝐝.#TeamIndia successfully defend 95 to win the 2nd T20I by 8 runs. @Deepti_Sharma06 adjudged Player of the Match.👏👏 #INDvBAN
— BCCI Women (@BCCIWomen) July 11, 2023 " class="align-text-top noRightClick twitterSection" data="
Details - https://t.co/xwadd5DBlH pic.twitter.com/I4SX0BBger
">𝐀 𝐭𝐡𝐫𝐢𝐥𝐥𝐢𝐧𝐠 𝐯𝐢𝐜𝐭𝐨𝐫𝐲 𝐚𝐧𝐝 𝐈𝐧𝐝𝐢𝐚 𝐭𝐚𝐤𝐞 𝐚𝐧 𝐮𝐧𝐚𝐬𝐬𝐚𝐢𝐥𝐚𝐛𝐥𝐞 𝟐-𝟎 𝐥𝐞𝐚𝐝.#TeamIndia successfully defend 95 to win the 2nd T20I by 8 runs. @Deepti_Sharma06 adjudged Player of the Match.👏👏 #INDvBAN
— BCCI Women (@BCCIWomen) July 11, 2023
Details - https://t.co/xwadd5DBlH pic.twitter.com/I4SX0BBger𝐀 𝐭𝐡𝐫𝐢𝐥𝐥𝐢𝐧𝐠 𝐯𝐢𝐜𝐭𝐨𝐫𝐲 𝐚𝐧𝐝 𝐈𝐧𝐝𝐢𝐚 𝐭𝐚𝐤𝐞 𝐚𝐧 𝐮𝐧𝐚𝐬𝐬𝐚𝐢𝐥𝐚𝐛𝐥𝐞 𝟐-𝟎 𝐥𝐞𝐚𝐝.#TeamIndia successfully defend 95 to win the 2nd T20I by 8 runs. @Deepti_Sharma06 adjudged Player of the Match.👏👏 #INDvBAN
— BCCI Women (@BCCIWomen) July 11, 2023
Details - https://t.co/xwadd5DBlH pic.twitter.com/I4SX0BBger
ಟಾಸ್ ಗೆದ್ದ ಟೀಂ ಇಂಡಿಯಾದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲ ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಬ್ಯಾಟಿಂಗ್ನಲ್ಲಿ ಭಾರತೀಯ ಆಟಗಾರ್ತಿಯರು ಸಂಪೂರ್ಣ ವಿಫಲರಾದರು. ಯಾರೊಬ್ಬರು ಸಹ 20 ರನ್ಗಳ ಗಡಿದಾಟಲು ಸಾಧ್ಯವಾಗಲಿಲ್ಲ. ಪರಿಣಾಮ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು ಕೇವಲ 95 ರನ್ ಕಲೆ ಹಾಕಲು ಮಾತ್ರ ಭಾರತಕ್ಕೆ ಸಾಧ್ಯವಾಯಿತು. ಬಾಂಗ್ಲಾ ತಂಡ 87 ರನ್ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು.
ಆರಂಭಿಕರಾದ ಸ್ಮೃತಿ ಮಂಧಾನ 13 ರನ್ ಕಲೆ ಹಾಕಿ ವಿಕೆಟ್ ಒಪ್ಪಿಸಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಶಫಾಲಿ ವರ್ಮಾ ಸಹ 19 ರನ್ಗಳಿಸಿ ನಿರ್ಗಮಿಸಿದರು. ಮತ್ತೊಂದೆಡೆ, ನಾಯಕಿ ಹರ್ಮನ್‌ಪ್ರೀತ್ ಕೌರ್ ಶೂನ್ಯಕ್ಕೆ ಪೆವಿಲಿಯನ್ ಹಾದಿ ಹಿಡಿದರು. ಆಗ ಭಾರತ ತಂಡದ ಮೊತ್ತ ಕೇವಲ 33 ರನ್ ಆಗಿತ್ತು. ನಂತರದಲ್ಲಿ ಯಾಸ್ತಿಕಾ ಭಾಟಿಯಾ (11), ರಾಡ್ರಿಗಸ್ (8), ಹರ್ಲೀನ್ ಡಿಯೋಲ್ (6), ದೀಪ್ತಿ ಶರ್ಮಾ (10), ಅಮನ್ಜೋತ್ ಕೌರ್ 14 ರನ್ಗಳಿಗೆ ಔಟಾದರು. ಪೂಜಾ ವಸ್ತ್ರಕರ್ ಅಜೇಯ 7 ರನ್ ಮಿನ್ನು ಮಣಿ ಅಜೇಯ 5 ರನ್ ಕೊಡುಗೆ ನೀಡಿದರು.
ಅಂತಿಮವಾಗಿ ಭಾರತೀಯ ವನಿತೆಯರು 95 ರನ್ ಕಲೆ ಪೇರಿಸಿದರು. ಇದು ಟಿ- 20 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತದ ಅತ್ಯಂತ ಕನಿಷ್ಠ ಮೊತ್ತ ಇದಾಗಿದೆ. ಬಾಂಗ್ಲಾ ಪರವಾಗಿ ಸುಲ್ತಾನಾ ಖಾತುನ್ ಮೂರು ವಿಕೆಟ್, ಫಾತೀಮಾ ಖುತಾನ್ ಎರಡು ವಿಕೆಟ್ ಪಡೆದು ಮಿಂಚಿದರು. ಮಾರುಫಾ ಆಕ್ಟರ್, ನಹಿದಾ ಆಕ್ಟರ್ ಹಾಗೂ ರಬೇಯಾ ಖಾನ್ ತಲಾ ವಿಕೆಟ್ ಪಡೆದರು.
ಬೌಲಿಂಗ್ನಲ್ಲಿ ಮಿಂಚು: ಹರ್ಮನ್‌ಪ್ರೀತ್ ಕೌರ್ ಪಡೆ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡರೂ ಬೌಲಿಂಗ್ನಲ್ಲಿ ಮಿಂಚಿತು. 96 ರನ್ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಆಟಗಾರ್ತಿಯರನ್ನು ಬೌಲರ್ಗಳು 87 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ನಾಯಕಿ ನಿಗರ್ ಸುಲ್ತಾನಾ (38 ರನ್) ಹೊರತು ಪಡಿಸಿ ಯಾವುದೇ ಬ್ಯಾಟರ್ ಎರಡಂಕಿ ತಲುಪಲು ವಿಫಲರಾದರು.
ಡೆತ್ ಓವರ್‌ಗಳಲ್ಲಿ ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ ಮತ್ತು ಶಫಾಲಿ ವರ್ಮಾ ಬಾಂಗ್ಲಾ ಆಟಗಾರ್ತಿಯರನ್ನು ಕಾಡಿದರು. ಪರಿಣಾಮವಾಗಿ ಬಾಂಗ್ಲಾದೇಶ ತನ್ನ ಕೊನೆಯ ಐದು ವಿಕೆಟ್‌ಗಳನ್ನು ಕೇವಲ ಒಂದು ರನ್‌ಗೆ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. 55 ಎಸೆತಗಳಲ್ಲಿ 38 ರನ್ ಕಲೆ ಹಾಕಿದ್ದ ನಾಯಕಿ ನಿಗರ್ ಸುಲ್ತಾನಾ ನೆರವಿನಿಂದ ಬಾಂಗ್ಲಾ 18.5 ಓವರ್‌ಗಳಲ್ಲಿ 86 ರನ್ ಕಲೆ ಹಾಕಿತ್ತು. ಆದರೆ, ದೀಪ್ತಿ ಶರ್ಮಾ ಎಸೆತದಲ್ಲಿ ನಿಗರ್ ಸುಲ್ತಾನಾ ಕ್ಯಾಚಿತ್ತರು.
ಕೊನೆಯ ಓವರ್‌ಗಳಲ್ಲಿ ಬಾಂಗ್ಲಾ ತಂಡದ ಗೆಲುವಿಗೆ 10 ರನ್ಗಳ ಅಗತ್ಯ ಇತ್ತು. ನಾಯಕಿ ನಿಗರ್ ಸುಲ್ತಾನಾ ನಿರ್ಗಮಿಸಿದ ಬಳಿಕ ತಂಡ ದಿಢೀರ್ ಕುಸಿತ ಕಂಡಿತು. 19ನೇ ಓವರ್ನ ಎಸೆತದಲ್ಲಿ ಒಂದು ರನ್ ಬಂತು. ಆದರೆ, ಎರಡನೇ ರನ್ ಕದಿಯಲು ಯತ್ನಿಸಿ ರಾಬೆಯಾ ಖಾನ್ ರನೌಟ್ ಆದರು. ನಂತರದಲ್ಲಿ ಯಾವುದೇ ರನ್ ನೀಡಿದ ಶಫಾಲಿ ವರ್ಮಾ ಮೂರು ವಿಕೆಟ್‌ಗಳನ್ನು ಉರುಳಿಸಿದರು. ಹೀಗಾಗಿ 87 ರನ್ಗಳಿಗೆ ಸರ್ವಪತನ ಕಂಡಿತು. ಭಾರತ ಪರ ದೀಪ್ತಿ ಶರ್ಮಾ ಮತ್ತು ಶಫಾಲಿ ವರ್ಮಾ ತಲಾ ಮೂರು ವಿಕೆಟ್ ಹಾಗೂ ಮಿನ್ನು ಮಣಿ ಎರಡು ವಿಕೆಟ್ ಕಬಳಿಸಿದರೆ, ಅನುಷಾ ಬಾರೆಡ್ಡಿ ಒಂದು ವಿಕೆಟ್ ಪಡೆದು ಗೆಲುವಿಗೆ ಕಾರಣವಾದರು.
ಇದನ್ನೂ ಓದಿ: ಐಸಿಸಿ ಮಹಿಳಾ ರ‍್ಯಾಂಕಿಂಗ್: ಟಾಪ್ ಟೆನ್ನಲ್ಲಿ ಸ್ಥಾನ ಪಡೆದ ಹರ್ಮನ್‌ಪ್ರೀತ್ ಕೌರ್..