ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಎರಡನೇ ಮತ್ತು ಅಂತಿಮ ಟೆಸ್ಟ್ ಎರಡೇ ದಿನದಲ್ಲಿ ಮುಕ್ತಾಯವಾಗಿದೆ. ಎರಡೂ ತಂಡಗಳ ಬೌಲರ್ಗಳು ಪ್ರಾಬಲ್ಯ ಮೆರೆದಿದ್ದರಿಂದ ಇನ್ನೂ ಮೂರು ದಿನಗಳ ಬಾಕಿ ಇರುವಾಗಲೇ ಟೆಸ್ಟ್ ಅಂತ್ಯಗೊಂಡಿದೆ. ಈ ಪಂದ್ಯವನ್ನು ಗೆದ್ದ ರೋಹಿತ್ ಶರ್ಮಾ ಪಡೆ ಸರಣಿಯನ್ನು1-1 ಅಂತರದಿಂದ ಸಮಬಲ ಮಾಡಿಕೊಂಡಿದೆ.
ಕೇಪ್ ಟೌನ್ನಲ್ಲಿ ನಡೆದ ಪಂದ್ಯದಲ್ಲಿ ಬುಧವಾರ ಟಾಸ್ ಗೆದ್ದು ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 55 ರನ್ಗಳಿಗೆ ಆಲೌಟ್ ಆಗಿದ್ದರು. ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 153 ರನ್ಗಳನ್ನು ಮಾತ್ರ ಕಲೆ ಹಾಕಿ 98 ರನ್ಗಳ ಮುನ್ನಡೆ ಸಾಧಿಸಿತ್ತು. ಇಂದು ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 176 ರನ್ಗಳಿಗೆ ಹರಿಣಗಳು ಸರ್ವಪತನ ಕಂಡು ರೋಹಿತ್ ಪಡೆ ಗೆಲುವಿಗೆ 79 ರನ್ಗಳ ಗುರಿ ನೀಡಿತ್ತು. ಇದನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾ 12 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 80 ರನ್ಗಳನ್ನು ಗಳಿಸಿ ಗೆಲುವು ಸಾಧಿಸಿದೆ.
-
India emerge victorious within five sessions of play in the Cape Town Test to level the #SAvIND series 👊#WTC25 | 📝: https://t.co/eiCgIxfJNY pic.twitter.com/XpqaIEBeGk
— ICC (@ICC) January 4, 2024 " class="align-text-top noRightClick twitterSection" data="
">India emerge victorious within five sessions of play in the Cape Town Test to level the #SAvIND series 👊#WTC25 | 📝: https://t.co/eiCgIxfJNY pic.twitter.com/XpqaIEBeGk
— ICC (@ICC) January 4, 2024India emerge victorious within five sessions of play in the Cape Town Test to level the #SAvIND series 👊#WTC25 | 📝: https://t.co/eiCgIxfJNY pic.twitter.com/XpqaIEBeGk
— ICC (@ICC) January 4, 2024
ಎರಡೂ ದಿನವೂ ಬೌಲರ್ಗಳ ಮೆರೆದಾಟ: ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದು ಸರಣಿಯಲ್ಲಿ 1-0 ಮುನ್ನಡೆಯಲ್ಲಿತ್ತು. ಹೀಗಾಗಿ ರೋಹಿತ್ ಬಳಗ ಎರಡನೇ ಪಂದ್ಯವನ್ನು ಗೆಲ್ಲುವ ಒತ್ತಡದೊಂದಿಗೆ ಗುರಿಯನ್ನು ಹೊಂದಿತ್ತು. ಇದಕ್ಕೆ ಮೊದಲ ದಿನವೇ ಬೌಲರ್ಗಳು ಉತ್ತಮ ಸಾಥ್ ನೀಡಿತು. ಅದರಲ್ಲೂ, ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ಮೂಲಕ 6 ವಿಕೆಟ್ ಕಿತ್ತು ಹರಿಣಗಳನ್ನು ಕಾಡಿದರು.
-
𝘼 𝙘𝙧𝙖𝙘𝙠𝙚𝙧 𝙤𝙛 𝙖 𝙬𝙞𝙣! ⚡️ ⚡️#TeamIndia beat South Africa by 7⃣ wickets in the second #SAvIND Test to register their first Test win at Newlands, Cape Town. 👏 👏
— BCCI (@BCCI) January 4, 2024 " class="align-text-top noRightClick twitterSection" data="
Scorecard ▶️ https://t.co/PVJRWPfGBE pic.twitter.com/vSMQadKxu8
">𝘼 𝙘𝙧𝙖𝙘𝙠𝙚𝙧 𝙤𝙛 𝙖 𝙬𝙞𝙣! ⚡️ ⚡️#TeamIndia beat South Africa by 7⃣ wickets in the second #SAvIND Test to register their first Test win at Newlands, Cape Town. 👏 👏
— BCCI (@BCCI) January 4, 2024
Scorecard ▶️ https://t.co/PVJRWPfGBE pic.twitter.com/vSMQadKxu8𝘼 𝙘𝙧𝙖𝙘𝙠𝙚𝙧 𝙤𝙛 𝙖 𝙬𝙞𝙣! ⚡️ ⚡️#TeamIndia beat South Africa by 7⃣ wickets in the second #SAvIND Test to register their first Test win at Newlands, Cape Town. 👏 👏
— BCCI (@BCCI) January 4, 2024
Scorecard ▶️ https://t.co/PVJRWPfGBE pic.twitter.com/vSMQadKxu8
ಪರಿಣಾಮ ಎಂಬಂತೆ ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್ಅನ್ನು 55 ರನ್ಗಳಿಗೆ ಮುಗಿಸಿತ್ತು. ಆದರೆ, ಎದುರಾಳಿ ತಂಡವನ್ನು ಅತ್ಯಲ್ಪ ಮೊತ್ತವನ್ನು ಕಟ್ಟಿಹಾಕುವಲ್ಲಿ ಯಶಸ್ಸಿಯಾಗಿದ್ದ ರೋಹಿತ್ ಪಡೆ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಹರಿಣಗಳ ಬೌಲರ್ಗಳ ಸಹ ಮೇಲುಗೈ ಸಾಧಿಸಿದರು. ಇದರಿಂದ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಹೊರತುಪಡಿಸಿ ಉಳಿದ ಏಳು ಆಟಗಾರರು ರನ್ಗಳ ಖಾತೆಯನ್ನೇ ತೆರೆಯಲಿಲ್ಲ. ಹೀಗಾಗಿ 153 ರನ್ಗಳಿಗೆ ಭಾರತ ಕೂಡ ಸರ್ವಪತನ ಕಂಡಿತ್ತು. ಆದರೂ, ಎರಡನೇ ಇನ್ನಿಂಗ್ಸ್ಗೆ 98 ರನ್ಗಳ ಮುನ್ನಡೆ ಪಡೆದಿತ್ತು.
-
2⃣ Tests
— BCCI (@BCCI) January 4, 2024 " class="align-text-top noRightClick twitterSection" data="
1⃣2⃣ Wickets @Jaspritbumrah93 led the charge with the ball for #TeamIndia & shared the Player of the Series award with Dean Elgar 🙌 🙌#SAvIND pic.twitter.com/emy6644GXh
">2⃣ Tests
— BCCI (@BCCI) January 4, 2024
1⃣2⃣ Wickets @Jaspritbumrah93 led the charge with the ball for #TeamIndia & shared the Player of the Series award with Dean Elgar 🙌 🙌#SAvIND pic.twitter.com/emy6644GXh2⃣ Tests
— BCCI (@BCCI) January 4, 2024
1⃣2⃣ Wickets @Jaspritbumrah93 led the charge with the ball for #TeamIndia & shared the Player of the Series award with Dean Elgar 🙌 🙌#SAvIND pic.twitter.com/emy6644GXh
ಬಳಿಕ ತನ್ನ ಎರಡನೇ ಇನ್ನಿಂಗ್ಸ್ನಲ್ಲೂ ಭಾರತೀಯ ಬೌಲರ್ಗಳು ಮೆರೆದಾಡಿದರು. ಜಸ್ಪ್ರೀತ್ ಬುಮ್ರಾ ಆರು ವಿಕೆಟ್ ಕಿತ್ತು ಮಿಂಚಿದರು. ಇದರಿಂದ ಎರಡನೇ ದಿನದ ಮೊದಲ ಅವಧಿಯಲ್ಲೇ 36.5 ಓವರ್ಗಳಲ್ಲಿ 176 ರನ್ಗಳಿಗೆ ದಕ್ಷಿಣ ಆಫ್ರಿಕಾ ಆಲೌಟ್ ಆಗಿತ್ತು. ಟೀಂ ಇಂಡಿಯಾ ಗೆಲುವಿಗೆ ಎರಡನೇ ಇನ್ನಿಂಗ್ಸ್ನಲ್ಲಿ 79 ರನ್ಗಳು ಗುರಿ ನೀಡಿತ್ತು. ತಂಡ ಪರ ಯಶಸ್ವಿ ಜೈಸ್ವಾಲ್ 28, ಶುಭಮನ್ ಗಿಲ್ 10, ವಿರಾಟ್ ಕೊಹ್ಲಿ 12 ರನ್ ಓಟಾದರು. ರೋಹಿತ್ ಶರ್ಮಾ 17, ಶ್ರೇಯಸ್ ಅಯ್ಯರ್ 4 ರನ್ ಗಳಿಸಿ ಅಜೇಯರಾಗಿ ಉಳಿದರು.
ಟೆಸ್ಟ್ ಇತಿಹಾಸದಲ್ಲೇ ಕಿರಿಯ ಪಂದ್ಯ: 2024ರ ಹೊಸ ವರ್ಷದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಇದಾಗಿದೆ. ಇದು ನಾಲ್ಕೂವರೆ ಸೆಷನ್‌ಗಳ ಒಳಗೆ ಆಟ ಮುಗಿದಿದ್ದು, ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಗೆ ಅಂತ್ಯವಾದ ಪಂದ್ಯವೂ ಇದಾಗಿದೆ. ನಾಲ್ಕು ಇನ್ನಿಂಗ್ಗಳಲ್ಲಿ 642 ಎಸೆತಗಳು ಮಾತ್ರ ಎಸೆಯಲ್ಪಟ್ಟಿವೆ. 1932ರಲ್ಲಿ ಮೆಲ್ಬೋರ್ನ್ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ 656 ಬಾಲ್ಗಳಲ್ಲಿ ಟೆಸ್ಟ್ ಮುಗಿದಿತ್ತು.
-
For his breathtaking bowling display, which saw him scalp 7️⃣ wickets in the match, Mohd. Siraj bags the Player of the Match award as #TeamIndia win the second #SAvIND Test 👏 👏
— BCCI (@BCCI) January 4, 2024 " class="align-text-top noRightClick twitterSection" data="
Scorecard ▶️ https://t.co/PVJRWPfGBE pic.twitter.com/YGVZZ7hRCg
">For his breathtaking bowling display, which saw him scalp 7️⃣ wickets in the match, Mohd. Siraj bags the Player of the Match award as #TeamIndia win the second #SAvIND Test 👏 👏
— BCCI (@BCCI) January 4, 2024
Scorecard ▶️ https://t.co/PVJRWPfGBE pic.twitter.com/YGVZZ7hRCgFor his breathtaking bowling display, which saw him scalp 7️⃣ wickets in the match, Mohd. Siraj bags the Player of the Match award as #TeamIndia win the second #SAvIND Test 👏 👏
— BCCI (@BCCI) January 4, 2024
Scorecard ▶️ https://t.co/PVJRWPfGBE pic.twitter.com/YGVZZ7hRCg
ಇನ್ನು, ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಮೊದಲ ಏಷ್ಯಾದ ತಂಡ ಎಂಬ ಹೆಗ್ಗಳಿಕೆಯನ್ನು ಭಾರತ ಬರೆದಿದೆ. ಎರಡು ಪಂದ್ಯಗಳ 12 ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ ಅವರು ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್ ಅವರೊಂದಿಗೆ ಸರಣಿಯ ಆಟಗಾರ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಏಳು ವಿಕೆಟ್ ಪಡೆದ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ-ಭಾರತ 2ನೇ ಟೆಸ್ಟ್: ಮೊದಲ ದಿನವೇ 23 ವಿಕೆಟ್ಗಳು ಪತನ, ಹರಿಣಗಳಿಗೆ 36 ರನ್ಗಳ ಹಿನ್ನಡೆ