ETV Bharat / sports

T-20ಯಲ್ಲಿ 100ನೇ ಜಯದತ್ತ ಭಾರತದ ಚಿತ್ತ.. ಲಂಕಾ ದಹನ ಮಾಡಿ ಹೊಸ ದಾಖಲೆ ಬರೆಯುತ್ತಾ ರೋಹಿತ್ ಪಡೆ? - ಭಾರತ ಶ್ರೀಲಂಕಾ ಟಿ20 ಸರಣಿ

ಧರ್ಮಾಶಾಲಾ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ಭಾರತ 2ನೇ ಟಿ20 ಪಂದ್ಯದಲ್ಲಿ ಭಾಗಿಯಾಗಲಿದ್ದು, ಅದಕ್ಕಾಗಿ ಉಭಯ ತಂಡಗಳು ಸನ್ನದ್ಧವಾಗಿವೆ.

India vs Sri lanka
India vs Sri lanka
author img

By

Published : Feb 25, 2022, 8:15 PM IST

ಧರ್ಮಶಾಲಾ: ಪ್ರವಾಸಿ ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ನಾಳೆ ಎರಡನೇ ಟಿ-20 ಪಂದ್ಯದಲ್ಲಿ ಭಾಗಿಯಾಗಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲು ಮಾಡಿ ಟೀಂ ಇಂಡಿಯಾ ಹೊಸದೊಂದು ದಾಖಲೆ ಬರೆಯುವ ತವಕದಲ್ಲಿದೆ.

ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ಭಾರತ ತಂಡ ಸರಣಿಯಲ್ಲಿ 1-0 ಅಂತರದ ಮುನ್ನಡೆಯಲಿದ್ದು, ನಾಳೆ ಧರ್ಮಶಾಲಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲುವಿನ ನಗೆ ಬೀರುವ ತವಕದಲ್ಲಿದೆ. ಈ ಮೂಲಕ ಚುಟುಕು ಕ್ರಿಕೆಟ್​​ನಲ್ಲಿ ಈಗಾಗಲೇ ವಿಶೇಷ ಸಾಧನೆ ಮಾಡಿರುವ ಪಾಕಿಸ್ತಾನ ಕ್ರಿಕೆಟ್​​ ತಂಡದ ಸಾಲಿಗೆ ಸೇರಲಿದೆ.

ಟಿ-20 ಕ್ರಿಕೆಟ್​​ನಲ್ಲಿ ಪಾಕ್​ ತಂಡ ಇಲ್ಲಿಯವರೆಗೆ 189 ಪಂದ್ಯಗಳಿಂದ 117 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದು, 100ಕ್ಕೂ ಅಧಿಕ ಪಂದ್ಯಗಳಲ್ಲಿ ಜಯ ಸಾಧಿಸಿರುವ ಮೊದಲ ತಂಡವಾಗಿದೆ. ಇನ್ನು ಭಾರತ 157 ಪಂದ್ಯಗಳಿಂದ 99 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದು, ನಾಳೆಯ ಪಂದ್ಯದಲ್ಲಿ ಗೆದ್ದು, 100 ಟಿ-20 ಪಂದ್ಯ ಗೆದ್ದ ಸಾಲಿಗೆ ಸೇರಿಕೊಳ್ಳಲಿದೆ.

ಇದನ್ನೂ ಓದಿರಿ: ಭಾರತ ವಿರುದ್ಧದ ಟೆಸ್ಟ್​ ಸರಣಿ : 18 ಸದಸ್ಯರ ತಂಡ ಪ್ರಕಟಿಸಿದ ಶ್ರೀಲಂಕಾ ಕ್ರಿಕೆಟ್ ಬೋರ್ಡ್​

ಇದರ ಜೊತೆಗೆ ನಾಳೆಯ ಪಂದ್ಯದಲ್ಲಿ ಭಾರತ ಗೆಲುವು ದಾಖಲು ಮಾಡಿದರೆ, ತವರಿನಲ್ಲಿ ನ್ಯೂಜಿಲ್ಯಾಂಡ್ ತಂಡ ನಿರ್ಮಿಸಿರುವ ಸಾಧನೆಯ ಸಾಲಿಗೆ ಸೇರಲಿದೆ. ನ್ಯೂಜಿಲ್ಯಾಂಡ್​ ತಂಡ ತವರಿನಲ್ಲೇ 73 ಪಂದ್ಯಗಳನ್ನಾಡಿದ್ದು ಇದರಲ್ಲಿ 39ರಲ್ಲಿ ಗೆಲುವು ದಾಖಲು ಮಾಡಿದೆ. ಭಾರತ ಆಡಿರುವ 59 ಪಂದ್ಯಗಳಿಂದ 38 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಟಿ-20ಯಲ್ಲಿ ಪಾಕ್ ಇಲ್ಲಿಯವರೆಗೆ 189 ಪಂದ್ಯಗಳಿಂದ 117ರಲ್ಲಿ ಜಯ ಸಾಧಿಸಿದ್ದು, 64 ಪಂದ್ಯ ಕೈಚೆಲ್ಲಿದೆ. ಭಾರತ 157 ಪಂದ್ಯಗಳಿಂದ 99ರಲ್ಲಿ ಗೆಲುವು ಸಾಧಿಸಿದ್ದು, 51 ಪಂದ್ಯಗಳಲ್ಲಿ ಸೋಲು ಕಂಡಿದೆ. ಉಳಿದಂತೆ ದಕ್ಷಿಣ ಆಫ್ರಿಕಾ 147 ಪಂದ್ಯಗಳ ಪೈಕಿ 85ರಲ್ಲಿ ಗೆಲುವು ದಾಖಲಿಸಿದ್ದು, 60 ಪಂದ್ಯಗಳಲ್ಲಿ ಸೋತಿದೆ. ನಾಳೆ ಸಂಜೆ 7 ಗಂಟೆಗೆ ಎರಡನೇ ಟಿ20 ಪಂದ್ಯ ಆರಂಭಗೊಳ್ಳಲಿದ್ದು, ಪಂದ್ಯಕ್ಕೆ ವರುಣನ ಕಾಟ ಅಡ್ಡಿಯಾಗುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.