ಸೆಂಚುರಿಯನ್: ಬಾಕ್ಸಿಂಗ್ ಡೇ ಟೆಸ್ಟ್ 3ನೇ ದಿನ ದಕ್ಷಿಣ ಆಫ್ರಿಕಾದ ವೇಗಿಗಳಾದ ಕಗಿಸೊ ರಬಾಡ ಮತ್ತು ಲುಂಗಿ ಎಂಗಿಡಿ ದಾಳಿಗೆ ಸಿಲುಕಿದ ಟೀಂ ಇಂಡಿಯಾ 327ರನ್ಗಳಿಗೆ ಆಲೌಟ್ ಆಗಿದೆ.
ಮೊದಲ ದಿನ ಭಾರತ 3 ವಿಕೆಟ್ ಕಳೆದುಕೊಂಡು 272 ರನ್ಗಳಿಸಿತ್ತು. ಮಯಾಂಕ್ 60, ಕೊಹ್ಲಿ 35, ರಾಹುಲ್ ಅಜೇಯ 122 ಮತ್ತು ರಹಾನೆ ಅಜೇಯ 40 ರನ್ಗಳಿಸಿದ್ದರು. 2ನೇ ದಿನ ಮಳೆಗೆ ಆಹುತಿಯಾದರೆ, 3ನೇ ದಿನ ಕೊಹ್ಲಿ ಹಿಂದಿನ ಮೊತ್ತಕ್ಕೆ ಕೇವಲ 55 ರನ್ ಸೇರಿಸಿ ಉಳಿದ 7 ವಿಕೆಟ್ ಕಳೆದುಕೊಂಡಿತು.
-
India lost their last seven wickets for 55 runs.
— ICC (@ICC) December 28, 2021 " class="align-text-top noRightClick twitterSection" data="
Lungi Ngidi finished with figures of 6/71 💥#WTC23 | #SAvIND | https://t.co/fMLQOADpkL pic.twitter.com/erHwgAJSzb
">India lost their last seven wickets for 55 runs.
— ICC (@ICC) December 28, 2021
Lungi Ngidi finished with figures of 6/71 💥#WTC23 | #SAvIND | https://t.co/fMLQOADpkL pic.twitter.com/erHwgAJSzbIndia lost their last seven wickets for 55 runs.
— ICC (@ICC) December 28, 2021
Lungi Ngidi finished with figures of 6/71 💥#WTC23 | #SAvIND | https://t.co/fMLQOADpkL pic.twitter.com/erHwgAJSzb
ಮಂಗಳವಾರ 122 ರನ್ಗಳೊಂದಿಗೆ ಬ್ಯಾಟಿಂಗ್ ಆರಂಭಿಸಿದ ಉಪನಾಯಕ ಕೆಎಲ್ ರಾಹುಲ್ ಒಂದು ರನ್ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು. ಅಜೇಯ 40 ರನ್ಗಳಿಸಿದ್ದ ರಹಾನೆ 48 ರನ್ಗಳಿಸಿ ಎಂಗಿಡಿಗೆ ವಿಕೆಟ್ ಒಪ್ಪಿಸಿದರು. ಇವರಿಬ್ಬರ ವಿಕೆಟ್ ಪತನದ ನಂತರ ಭಾರತ ಸತತ 4 ಓವರ್ಗಳಲ್ಲಿ ಅಶ್ವಿನ್(4), ರಿಷಭ್ ಪಂತ್(8), ಶಾರ್ದೂಲ್ ಠಾಕೂರ್(4) ಮತ್ತು ಮೊಹಮ್ಮದ್ ಶಮಿ(8) ವಿಕೆಟ್ ಕಳೆದುಕೊಂಡಿತು.
ಕೊನೆಯ ವಿಕೆಟ್ಗೆ ಜಸ್ಪ್ರೀತ್ ಬುಮ್ರಾ(14) ಮತ್ತು ಮೊಹಮ್ಮದ್ ಸಿರಾಜ್ (4) 19 ರನ್ ಸೇರಿಸಿ ಭಾರತದ ಇನ್ನಿಂಗ್ಸ್ಅನ್ನು ಮತ್ತಷ್ಟು ಹೊತ್ತು ಮುಂದಕ್ಕೆ ಕೊಂಡೊಯ್ದರು.
ದಕ್ಷಿಣ ಆಫ್ರಿಕಾ ಪರ ಲುಂಗಿ ಎಂಗಿಡಿ 71ಕ್ಕೆ6 ವಿಕೆಟ್, ರಬಾಡ 72ಕ್ಕೆ3 ವಿಕೆಟ್ ಮತ್ತು ಮ್ಯಾಕ್ರೋ ಜಾನ್ಸನ್ 69ಕ್ಕೆ 1 ವಿಕೆಟ್ ಪಡೆದರು.
ಇದನ್ನೂ ಓದಿ:ಇಂಗ್ಲೆಂಡ್ಗೆ ಹೀನಾಯ ಸೋಲು.. ಆ್ಯಶಸ್ ಕಪ್ ಮರಳಿ ಪಡೆದ ಆಸ್ಟ್ರೇಲಿಯಾ!