ETV Bharat / sports

ವಿಶ್ವ ಟೂರ್ ಫೈನಲ್ಸ್: ಶುಭಾರಂಭ ಮಾಡಿದ ಸಿಂಧು, ಶ್ರೀಕಾಂತ್ - ಕಿಡಂಬಿ ಶ್ರೀಕಾಂತ್​ಗೆ ಗೆಲುವು

ಹಾಲಿ ವಿಶ್ವ ಚಾಂಪಿಯನ್ ಸಿಂಧು 2018ರಲ್ಲಿ ಟೂರ್ ಫೈನಲ್ಸ್​ ಗೆದ್ದಿದ್ದರು. ಈ ಪ್ರಶಸ್ತಿಯನ್ನು ಗೆದ್ದಿರುವ ಏಕೈಕ ಭಾರತೀಯಳಾಗಿರುವ ಅವರು ಮುಂದಿನ ಸುತ್ತಿನಲ್ಲಿ ಜರ್ಮನಿಯ ಇವೋನ್​ ಲೀ ವಿರುದ್ಧ ಸೆಣಸಾಡಲಿದ್ದಾರೆ.

World Tour Finals
ವಿಶ್ವ ಟೂರ್ ಫೈನಲ್ಸ್
author img

By

Published : Dec 1, 2021, 6:08 PM IST

ಬಾಲಿ(ಇಂಡೋನೇಷಿಯಾ): ಭಾರತದ ಟಾಪ್​ ಶಟ್ಲರ್​ಗಳಾದ ಪಿವಿ ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಬಿಡಬ್ಲೂಎಫ್​ ವಿಶ್ವ ಟೂರ್​​ ಫೈನಲ್ಸ್​ನ ಸಿಂಗಲ್ಸ್ ವಿಭಾಗದಲ್ಲಿ ಗೆಲುವಿನ ಶುಭಾರಂಭ ಮಾಡಿದ್ದಾರೆ.

2 ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಪಿವಿ ಸಿಂಧು ಎ ಗುಂಪಿನ ತಮ್ಮ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್​ನ ಲಿನ್ ಕ್ರಿಸ್ಟೋಫರ್ಸೆನ್ ವಿರುದ್ಧ 21-14, 21-16ರ ಅಂತರದಿಂದ ಸುಲಭ ಗೆಲುವು ಸಾಧಿಸಿದರು. ಬಿ ಗುಂಪಿನ ಪುರುಷರ ವಿಭಾಗದಲ್ಲಿ ಮಾಜಿ ನಂಬರ್ 1 ಶಟ್ಲರ್​ ಕಿಡಂಬಿ ಶ್ರೀಕಾಂತ್​ ಫ್ರಾನ್ಸ್​ನ ಟೋಮಾ ಜೂನಿಯರ್ ಪೊಪೊವ್ ವಿರುದ್ಧ ನಡೆದ 42 ನಿಮಿಷಗಳ ಪಂದ್ಯದಲ್ಲಿ​ 21-14, 21-16ರಲ್ಲಿ ಗೆಲುವು ಸಾಧಿಸಿದರು.

ಹಾಲಿ ವಿಶ್ವ ಚಾಂಪಿಯನ್ ಸಿಂಧು 2018ರಲ್ಲಿ ಟೂರ್ ಫೈನಲ್ಸ್​ ಗೆದ್ದಿದ್ದರು. ಈ ಪ್ರಶಸ್ತಿಯನ್ನು ಗೆದ್ದಿರುವ ಏಕೈಕ ಭಾರತೀಯಳಾಗಿರುವ ಅವರು ಮುಂದಿನ ಸುತ್ತಿನಲ್ಲಿ ಜರ್ಮನಿಯ ಇವೋನ್​ ಲೀ ವಿರುದ್ಧ ಸೆಣಸಾಡಲಿದ್ದಾರೆ.

2014 ಆವೃತ್ತಿಯಲ್ಲಿ ನಾಕೌಟ್ ಪ್ರವೇಶಿಸಿದ್ದ ಶ್ರೀಕಾಂತ್​ ಮುಂದಿನ ಸುತ್ತಿನಲ್ಲಿ 3 ಬಾರಿಯ ಜೂನಿಯರ್ ವಿಶ್ವ ಚಾಂಪಿಯನ್​ ಕುನ್ಲವುತ್​ ವಿಟಿದ್ಸರ್ನ್ ವಿರುದ್ಧ ಆಡಲಿದ್ದಾರೆ.

ಅಶ್ವಿನಿ ಪೊನ್ನಪ್ಪ-ಸಿಕ್ಕಿರೆಡ್ಡಿ ಜೋಡಿಗೆ ಸೋಲು

ಮಹಿಳಾ ಡಬಲ್ಸ್​ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್​.ಸಿಕ್ಕಿರೆಡ್ಡಿ ಜೋಡಿ ಜೋಡಿ 14-21, 18-21ರಲ್ಲಿ 2ನೇ ಶ್ರೇಯಾಂಕದ ಜಪಾನಿನ ನಮಿ ಮತ್ಸುಯಾಮಾ ಮತ್ತು ಚಿಹಾರು ಶಿಡಾ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರು.

ಇದನ್ನೂ ಓದಿ:ವಾರ್ನರ್​ ಕೈಬಿಟ್ಟ ಹೈದರಾಬಾದ್​​:'Chapter closed' ಎಂದು ಟ್ವೀಟ್ ಮಾಡಿದ ಸ್ಫೋಟಕ ಬ್ಯಾಟರ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.