ಬ್ಯಾಂಕಾಂಕ್: ವಿಶ್ವ ಚಾಂಪಿಯನ್ ಪಿವಿ ಸಿಂಧು ಟೊಯೋಟಾ ಥಾಯ್ಲೆಂಡ್ ಓಪನ್ ಸೂಪರ್ 100 ಟೂರ್ನಮೆಂಟ್ನಲ್ಲಿ ಮಲೇಷ್ಯಾದ ಕಿಸೋನ್ ಸೆಲ್ವದುರೈ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ 21-10, 21-12 ಗೇಮ್ಗಳ ಅಂತರದಿಂದ ಕೇವಲ 35 ನಿಮಿಷಗಳಲ್ಲಿ ಕಿಸೋನ್ರನ್ನು ಮಣಿಸಿದರು. ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್ನ ರಚನಾಕ್ ಇಂಟನಾನ್ ಅವರನ್ನು ಎದುರಿಸಲಿದ್ದಾರೆ. ರಚನಾಕ್ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಸೈನಾ ವಿರುದ್ಧ ಜಯ ಸಾಧಿಸಿದ್ದರು.
ಇಂದು ನಡೆದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರೆಡ್ಡಿ 21-18, 23-21ರಲ್ಲಿ ದಕ್ಷಿಣ ಕೊರಿಯಾದ ಚೋಯ್ ಸೋಲ್ ಗ್ಯು ಮತ್ತು ಸೆಯುಂಗ್ ಜೇ ಸಿಯೊ ವಿರುದ್ಧ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ಗೆ ತೇರ್ಗಡೆಗೊಂಡಿದ್ದಾರೆ.
ಸಮೀರ್ ವರ್ಮಾ ಪುರುಷರ ಸಿಂಗಲ್ಸ್ನಲ್ಲಿ ಡೆನ್ಮಾರ್ಕ್ನ ರಾಸ್ಮಸ್ ಗೆಮ್ಕೆ ವಿರುದ್ಧ 21-12, 21-9 ಜಯಿಸಿ ಕ್ವಾರ್ಟಲ್ ಫೈನಲ್ ಪ್ರವೇಶಿಸಿದ್ದರೆ, ಹೆಚ್ಎಸ್ ಪ್ರಣಯ್ 17-21, 18-21ರಲ್ಲಿ ಮಲೇಷ್ಯಾದ ಲೀವ್ ಡಾರೆನ್ ವಿರುದ್ಧ ಸೋಲು ಕಂಡು ನಿರಾಶೆಯನುಭವಿಸಿದ್ದಾರೆ.