ಬ್ಯಾಂಕಾಕ್: ವಿಶ್ವದ ಮಾಜಿ ನಂಬರ್ ಒನ್ ಆಟಗಾರನಾಗಿರುವ ಭಾರತದ ಕಿಡಂಬಿ ಶ್ರೀಕಾಂತ್ ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದವರೇ ಆದ ಸೌರಭ್ ವರ್ಮಾ ವಿರುದ್ಧ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಮೊದಲ ಗೇಮ್ನಿಂದಲೇ ಪ್ರಾಬಲ್ಯ ಸಾಧಿಸಿದ ಶ್ರೀಕಾಂತ್ 21-12 ಹಾಗೂ 21-11ರಲ್ಲಿ ಗೆಲುವು ಸಾಧಿಸಿ 2ನೇ ಸುತ್ತಿಗೆ ಎಂಟ್ರಿಕೊಟ್ಟರು. ಶ್ರೀಕಾಂತ್ ಕೇವಲ 31 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡರು.
-
🇮🇳’s @srikidambi advanced into the R2️⃣ after a comfortable win in the R1️⃣ of #ThailandOpenSuper1000 against 🇮🇳’s @sourabhverma09 .
— BAI Media (@BAI_Media) January 13, 2021 " class="align-text-top noRightClick twitterSection" data="
Final Score: 21-12, 21-11
Well done, champ! 👏🔥#ThailandOpenSuper1000 #ThailandOpen#HSBCbadminton #Badminton pic.twitter.com/uEv2zVUbVU
">🇮🇳’s @srikidambi advanced into the R2️⃣ after a comfortable win in the R1️⃣ of #ThailandOpenSuper1000 against 🇮🇳’s @sourabhverma09 .
— BAI Media (@BAI_Media) January 13, 2021
Final Score: 21-12, 21-11
Well done, champ! 👏🔥#ThailandOpenSuper1000 #ThailandOpen#HSBCbadminton #Badminton pic.twitter.com/uEv2zVUbVU🇮🇳’s @srikidambi advanced into the R2️⃣ after a comfortable win in the R1️⃣ of #ThailandOpenSuper1000 against 🇮🇳’s @sourabhverma09 .
— BAI Media (@BAI_Media) January 13, 2021
Final Score: 21-12, 21-11
Well done, champ! 👏🔥#ThailandOpenSuper1000 #ThailandOpen#HSBCbadminton #Badminton pic.twitter.com/uEv2zVUbVU
ಕಿಡಂಬಿ ಶ್ರೀಕಾಂತ್ ಈ ಪಂದ್ಯಕ್ಕೂ ಮೊದಲು ಕೋವಿಡ್ 19 ಟೆಸ್ಟ್ ವೇಳೆ ಥಾಯ್ಲೆಂಡ್ ಬ್ಯಾಡ್ಮಿಂಟನ್ ಫೆಡರೇಷನ್ ವೈದ್ಯಾಧಿಕಾರಿಗಳಿಂದ ಅತಾಚುರ್ಯದಿಂದ ತಮ್ಮ ಮೂಗಿನಲ್ಲಿ ರಕ್ತ ಬಂದಿದ್ದ ಫೋಟೋವನ್ನು ಶೇರ್ ಮಾಡಿ, ನಾವು ಆಡುವುದಕ್ಕಾಗಿ ಬಂದಿದ್ದೇವೆ ಹೊರತು, ರಕ್ತ ಸುರಿಸುವುದಕ್ಕಲ್ಲ ಎಂದು ಕಿಡಿಕಾರಿದ್ದರು.
ಭಾರತದ ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಕೂಡ ಮೊದಲ ಸುತ್ತಿನ ಪಂದ್ಯದಲ್ಲಿ ಕೊರಿಯನ್ ಜೋಡಿಯನ್ನು ಮಣಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಆದರೆ ವಿಶ್ವ ಚಾಂಪಿಯನ್ ಪಿ ವಿ ಸಿಂಧು ಹಾಗೂ ಸಾಯಿ ಪ್ರಣೀತ್ ಮೊದಲ ಸುತ್ತಿನ ಪಂದ್ಯದಲ್ಲೇ ಸೋತು ಹೊರಬಿದ್ದಿದ್ದಾರೆ.