ETV Bharat / sports

ಚಿರಾಗ್​​-ಸಾತ್ವಿಕ್ ಶುಭಾರಂಭ: ಅರ್ಧ ಪಂದ್ಯದಲ್ಲೇ ಹೊರಬಂದ ಕಶ್ಯಪ್​ - Badminton latest news

ಭಾರತದ ಟಾಪ್​ ರ್ಯಾಂಕಿಂಗ್​ ಜೋಡಿಯಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್​ ರಾಂಕಿರೆಡ್ಡಿ ದಕ್ಷಿಣ ಕೊರಿಯಾದ ಜೋಡಿ ಕಿಮ್ ಜೀ ಜಂಗ್ ಮತ್ತು ಲೀ ಯಂಗ್ ದಯೀ ವಿರುದ್ಧ 19-21,21-16, 21-14ರಲ್ಲಿ ಗೆಲುವು ಸಾಧಿಸಿ 2ನೇ ಸುತ್ತಿಗೆ ಪ್ರವೇಶ ಪಡೆದರು.

ಪರುಪಳ್ಳಿ ಕಶ್ಯಪ್​
ಪರುಪಳ್ಳಿ ಕಶ್ಯಪ್​
author img

By

Published : Jan 13, 2021, 3:19 PM IST

ಬ್ಯಾಂಕಾಕ್​: ಭಾರತದ ಅನುಭವಿ ಶಟ್ಲರ್​ ಪರುಪಳ್ಳಿ ಕಶ್ಯಪ್​ ಥಾಯ್ಲೆಂಡ್​ ಓಪನ್​ನ ಮೊದಲ ಸುತ್ತಿನ ಪಂದ್ಯದ ಮೂರನೇ ಗೇಮ್​ ನಡೆಯುವಾಗ ಪಂದ್ಯದಿಂದ ಹೊರಬಂದಿದ್ದಾರೆ.

ಕೆನಡಾದ ಆಂಥೋನಿ ಹೋ ಶೂ ವಿರುದ್ಧದ ಪಂದ್ಯದಲ್ಲಿ ಕಶ್ಯಪ್​ ಮೊದಲ ಗೇಮ್​ನಲ್ಲಿ 21-9ರಿಂದ ಸೋಲು ಕಂಡಿದ್ದರು. ನಂತರ ಎರಡನೇ ಗೇಮ್​ನಲ್ಲಿ ಕಮ್​ಬ್ಯಾಕ್​ ಮಾಡಿ 21-13ರಲ್ಲಿ ಗೆದ್ದರು. ಆದರೆ ಮೂರನೇ ಗೇಮ್​ನಲ್ಲಿ ಹೋ ಶೂ 21-8ರಲ್ಲಿ ಮುನ್ನಡ ಸಾಧಿಸಿದ್ದ ವೇಳೆ ಭಾರತೀಯ ಶಟ್ಲರ್​ ಹೊರನಡೆಯಲು ನಿರ್ಧರಿಸಿದರು. ಪರಿಣಾಮ ಕೆನಡಾ ಆಟಗಾರ ಪೂರ್ಣ ಪಂದ್ಯವನ್ನಾಡದೇ 2ನೇ ಸುತ್ತಿಗೆ ತೇರ್ಗಡೆ ಹೊಂದಿದರು.

ಇದಕ್ಕು ಮೊದಲು ಮಿಕ್ಸಡ್​ ಡಬಲ್ಸ್​ನಲ್ಲಿ ಸುಮೀತ್ ರೆಡ್ಡಿ ಮತ್ತು ಸಿಕ್ಕಿ ರೆಡ್ಡಿ 22-20 21-17ರಲ್ಲಿ ಹಾಂಕಾಂಗ್​ ಜೋಡಿಯಾದ ತಂಗ್ ಚುನ್ ಮನ್​ ಮತ್ತಯು ತ್ಸೆ ಯಿಂಗ್ ಸುಯೆತ್​ ವಿರುದ್ಧ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲು ಕಂಡರು.

ಪುರುಷರ ಡಬಲ್ಸ್​ನಲ್ಲಿ ಎಂಆರ್ ಆರ್ಜುನ್​ ಮತ್ತು ಧ್ರುವ್​ ಕಪಿಲ್ 21-13, 8-21- 22-24ರ ರೋಚಕ ಹಣಾಹಣಿಯಲ್ಲಿ ಮಲೇಷ್ಯಾದ ಓಂಗ್ ಯೂ ಸಿನ್ ಮತ್ತು ಟಿಯೋ ಇ ವಿರುದ್ಧ ಸೋಲು ಕಂಡರು.

ಆದರೆ ಭಾರತದ ಟಾಪ್​ ರ್ಯಾಂಕಿಂಗ್​ ಜೋಡಿಯಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್​ ರಾಂಕಿರೆಡ್ಡಿ ದಕ್ಷಿಣ ಕೊರಿಯಾದ ಜೋಡಿ ಕಿಮ್ ಜೀ ಜಂಗ್ ಮತ್ತು ಲೀ ಯಂಗ್ ದಯೀ ವಿರುದ್ಧ 19-21,21-16, 21-14ರಲ್ಲಿ ಗೆಲುವು ಸಾಧಿಸಿ 2ನೇ ಸುತ್ತಿಗೆ ಪ್ರವೇಶ ಪಡೆದರು.

ನಿನ್ನೆ ನಡೆದ ಪಂದ್ಯಗಳಲ್ಲಿ ಒಲಿಂಪಿಕ್ ಬಾಂಡ್ ಸ್ಟಾರ್​ಗಳಾದ ಸಿಂಧು ಹಾಗೂ ಸಾಯಿ ಪ್ರಣೀತ್ ಮೊದಲ ಸುತ್ತಿನಲ್ಲೇ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದರು.

ಇದನ್ನು ಓದಿ:ಕೋವಿಡ್ ಟೆಸ್ಟ್​ ವೇಳೆ ಮೂಗಿನಲ್ಲಿ ರಕ್ತ.. ಈ ರೀತಿ ಚಿಕಿತ್ಸೆ ಸ್ವೀಕಾರಾರ್ಹವಲ್ಲ ಎಂದು ಕಿಡಿಂಬಿ ಶ್ರೀಕಾಂತ್ ಕಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.