ಲಕ್ನೋ(ಉತ್ತರ ಪ್ರದೇಶ): ಸಯ್ಯದ್ ಮೋದಿ ಇಂಟರ್ನ್ಯಾಷನಲ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ನಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತದ ಉದಯೋನ್ಮುಖ ಆಟಗಾರ ಸೌರಭ್ ವರ್ಮಾ ಚೈನಾ ತೈಪೆಯ(ತೈವಾನ್) ವಾಂಗ್ ಜು ವೈ ವಿರುದ್ಧ ಪರಾಜಯಗೊಂಡರು.
ಸೌರಭ್ ವರ್ಮಾ ಸೆಮಿಫೈನಲ್ನಲ್ಲಿ ದಕ್ಷಿಣ ಕೊರಿಯಾದ ಹಿಯೊ ಕ್ವಾಂಗ್ ಹೀ ಅವರನ್ನು 21-17, 16-21, 21-18ರಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್ನಲ್ಲಿ ಚೈನೀಸ್ ತೈಪೆಯ ವಾಂಗ್ ಜು ವೈ ವಿರುದ್ಧ ಆಘಾತ ಅನುಭವಿಸಿದ್ದಾರೆ.
-
It ultimately did not end in favour of @sourabhverma09 as he went down 15-21, 17-21 to #WangTzuWei.
— BAI Media (@BAI_Media) December 1, 2019 " class="align-text-top noRightClick twitterSection" data="
But he kept fighting hard till the last point. The performance he produced at the #SyedModiInternational2019 should give him enough confidence for future events! 👍👏#badminton pic.twitter.com/MGE000lldL
">It ultimately did not end in favour of @sourabhverma09 as he went down 15-21, 17-21 to #WangTzuWei.
— BAI Media (@BAI_Media) December 1, 2019
But he kept fighting hard till the last point. The performance he produced at the #SyedModiInternational2019 should give him enough confidence for future events! 👍👏#badminton pic.twitter.com/MGE000lldLIt ultimately did not end in favour of @sourabhverma09 as he went down 15-21, 17-21 to #WangTzuWei.
— BAI Media (@BAI_Media) December 1, 2019
But he kept fighting hard till the last point. The performance he produced at the #SyedModiInternational2019 should give him enough confidence for future events! 👍👏#badminton pic.twitter.com/MGE000lldL
ಫೈನಲ್ ಪಂದ್ಯದಲ್ಲಿ ವಾಂಗ್ ಜು 21-15, 21-17 ರಲ್ಲಿ ಭಾರತೀಯ ಆಟಗಾರನ ವಿರುದ್ಧ ಸುಲಭ ಜಯ ಸಾಧಿಸಿದರು. ಸೌರಭ್ ವರ್ಮಾ ಕೇವಲ 48 ನಿಮಿಷಗಳಲ್ಲಿ ವಾಂಗ್ ಜುಗೆ ಶರಣಾಗಿದ್ದಾರೆ. ಆ ಮೂಲಕ ಸತತ 4 ವರ್ಷಗಳ ಕಾಲ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದ ಭಾರತ ಈ ಬಾರಿ ಕಿರೀಟ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು.
ಮಹಿಳೆಯರ ಸಿಂಗಲ್ಸ್ನಲ್ಲಿ ಮಾಜಿ ನಂಬರ್ ಒನ್ ಆಟಗಾರ್ತಿ ಕರೋಲಿನಾ ಮರಿನ್ ಅವರು ಇಂದು ಪಿಟ್ಟಾಯಪೋರ್ನ್ ಚೈವಾನ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.
ಪ್ರತೀ ವರ್ಷ ಯಾವುದಾದರೊಂದು ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುತ್ತಿದ್ದ ಭಾರತೀಯ ಪಟುಗಳು ಈ ಬಾರಿ ಎಲ್ಲಾ ವಿಭಾಗಗಳಲ್ಲೂ ಸೋಲು ಕಾಣುವ ಮೂಲಕ 8 ವರ್ಷಗಳ ಬಳಿಕ ಪ್ರಶಸ್ತಿರಹಿತವಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.